ಕೋರ್ಟ್​ ಆವರಣದಲ್ಲೇ ಹೆಂಡತಿ-ಮಾವನಿಗೆ ಹಿಗ್ಗಾಮುಗ್ಗಾ ಥಳಿಸಿದ ಭೂಪ

Raichur-FamilyCourt-Assault
Published on

ರಾಯಚೂರು: ಕೋರ್ಟ್ ಆವರಣದಲ್ಲೇ ಪಾನಮತ್ತ ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು ಮಾವನಿಗೆ ಥಳಿಸಿದ್ದು, ಈ ದೃಶ್ಯ ವೈರಲ್​ ಆಗಿದೆ.

ಕೌಟುಂಬಿಕ ಕಲಹ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿ ಮುಂದಿರುವ ಕೌಟುಂಬಿಕ ನ್ಯಾಯಾಲಯಕ್ಕೆ ದಂಪತಿ ಇಂದು ಬಂದಿದ್ದರು. ಈ ವೇಳೆ ಮದ್ಯ ಸೇವಿಸಿಕೊಂಡು ಬಂದಿದ್ದ ಪತಿ ಕೋರ್ಟ್ ಮುಂದೆಯೇ ಪತ್ನಿ ಜತೆ ಜಗಳ ಮಾಡುತ್ತ ಮನಸೋಇಚ್ಛೆ ಥಳಿಸಿದ್ದಾನೆ. ಪಕ್ಕದಲ್ಲೇ ಇದ್ದ ಮಾವನಿಗೂ ಹೊಡೆದಿದ್ದಾನೆ. ಇದನ್ನೂ ಓದಿರಿ video/ ಧಾರಾಕಾರ ಮಳೆಯಲ್ಲೂ ಪೇದೆ ಮಾಡಿದ ಕೆಲಸಕ್ಕೆ ಸಿಕ್ತು ಭರ್ಜರಿ ಮೆಚ್ಚುಗೆ!

ಕೌಟುಂಬಿಕ ಕೋರ್ಟ್ ಕಲಾಪಕ್ಕೆ 'ಎಣ್ಣೆ' ಕುಡಿದುಕೊಂಡು ಬಂದದ್ದೇ ತಪ್ಪು. ಅಂತಹದ್ದರಲ್ಲಿ ಪತ್ನಿ ಹಾಗೂ ಮಾವನಿಗೂ ಥಳಿಸಿದ್ದಾನೆ. ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಪೊಲೀಸರು ಹಲ್ಲೆ ಮಾಡಿದ ವ್ಯಕ್ತಿಯನ್ನ ಕೋರ್ಟ್ ಒಳಗೆ ಕರೆದೊಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net