More

    video/ ಧಾರಾಕಾರ ಮಳೆಯಲ್ಲೂ ಪೇದೆ ಮಾಡಿದ ಕೆಲಸಕ್ಕೆ ಸಿಕ್ತು ಭರ್ಜರಿ ಮೆಚ್ಚುಗೆ!

    ಬಾಗಲಕೋಟೆ: ತಾಲೂಕಿನ ಕಲಾದಗಿ ಗ್ರಾಮದಲ್ಲಿ ನಿನ್ನೆ(ಬುಧವಾರ) ಸುರಿದ ಧಾರಾಕಾರ ಮಳೆಯಲ್ಲೂ ಕೊಡೆ ಹಿಡಿದುಕೊಂಡೇ ಡಿಎಆರ್ ಪೇದೆ ಮಾರುತಿ ಭಜಂತ್ರಿ ಅವರು ಕರ್ತವ್ಯ ನಿರ್ವಹಿಸಿದ್ದ ದೃಶ್ಯ ವೈರಲ್​ ಆಗಿದ್ದು, ಸಾರ್ವಜನಿಕರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಬಾಗಲಕೋಟೆ ಎಸ್ಪಿ ಲೋಕೇಶ್ ಜಗಲಾಸರ್ ಅವರಿಂದ ಮಾರುತಿ ಭಜಂತ್ರಿಗೆ ಪ್ರಶಂಸನಾ‌ ಪತ್ರವೂ ಸಿಕ್ಕಿದೆ.

    ಕರೊನಾ ಹಿನ್ನೆಲೆ ಕಲಾದಗಿ ಗ್ರಾಮದ ಸೀಲ್​ಡೌನ್ ಪ್ರದೇಶದಲ್ಲಿ ನಿನ್ನೆ ಸಂಜೆ ಮಾರುತಿ ಭಜಂತ್ರಿಗೆ ಕರ್ತವ್ಯ ನಿರ್ವಹಿಸುತ್ತಿದ್ದರು. ಆ ವೇಳೆ ಗ್ರಾಮದಲ್ಲಿ ಧಾರಾಕಾರ ಮಳೆ ಸುರಿದಿತ್ತು. ಮಳೆಯಲ್ಲೂ ಜಾಗ ಬಿಟ್ಟು ಕದಲದ ಅವರು ಕೊಡೆ ಹಿಡಿದುಕೊಂಡೇ ಕರ್ತವ್ಯ ನಿರ್ವಹಿಸಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರಿ ಮೆಚ್ಚುಗೆ ಪಡೆದಿತ್ತು.

    ಇದನ್ನೂ ಓದಿರಿ ಮಲೆ ಮಹದೇಶ್ವರ ಸ್ವಾಮಿ ದೇವಾಲಯ ಬಂದ್​ಗೆ ಆಗ್ರಹಿಸಿ ಪ್ರತಿಭಟನೆ

    video/ ಧಾರಾಕಾರ ಮಳೆಯಲ್ಲೂ ಪೇದೆ ಮಾಡಿದ ಕೆಲಸಕ್ಕೆ ಸಿಕ್ತು ಭರ್ಜರಿ ಮೆಚ್ಚುಗೆ!‘ನಿಮ್ಮ ಕರ್ತವ್ಯ ನಿಷ್ಠೆ ಹಾಗೂ ಪ್ರಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಇಲಾಖೆ ಪರವಾಗಿ ನಿಮ್ಮನ್ನು ಪ್ರಶಂಸಿಸುತ್ತಿದ್ದು, ಮುಂದೆಯೂ ಇದೇ ಉತ್ಸಾಹ ಹಾಗೂ ಜವಾಬ್ದಾರಿಯುತ ಕರ್ತವ್ಯ ನಿರ್ವಹಿಸಿ ಪೊಲೀಸ್​ ಇಲಾಖೆಗೆ ಕೀರ್ತಿ ತರಲು ಆಶಿಸುತ್ತೇನೆ’ ಎಂದು ಬರೆದಿರುವ ಪ್ರಶಂಸನಾ ಪತ್ರವನ್ನು ಪೇದೆ ಮಾರುತಿ ಭಜಂತ್ರಿ ಅವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ನೀಡಿ ಇಂದು(ಗುರುವಾರ) ಗೌರವಿಸಿದರು.

    ಮಳೆಯಲ್ಲೂ ಕೊಡೆ ಹಿಡಿದುಕೊಂಡೇ ಕರ್ತವ್ಯನಿಷ್ಠೆ ಮೆರೆದ ಪೇದೆ

    ಮಳೆಯಲ್ಲೂ ಕೊಡೆ ಹಿಡಿದುಕೊಂಡೇ ಕರ್ತವ್ಯನಿಷ್ಠೆ ಮೆರೆದ ಪೇದೆಇದು ಬಾಗಲಕೋಟೆಯ ಕಲಾದಗಿ ಗ್ರಾಮದ ಸೀಲ್​ಡೌನ್ ಪ್ರದೇಶ. ನಿನ್ನೆ(ಬುಧವಾರ) ಧಾರಾಕಾರ ಮಳೆ ಸುರಿದಿದೆ. ಮಳೆಯಲ್ಲೂ ಕೊಡೆ ಹಿಡಿದುಕೊಂಡೇ ಡಿಎಆರ್ ಪೇದೆ ಮಾರುತಿ ಭಜಂತ್ರಿ ಅವರು ಕರ್ತವ್ಯ ನಿರ್ವಹಿಸಿದ್ದಾರೆ. ಇವರ ಕರ್ತವ್ಯನಿಷ್ಠೆ ಮತ್ತು ಪ್ರಮಾಣಿಕತೆ ಮೆಚ್ಚಿದ ಎಸ್ಪಿ ಲೋಕೇಶ್ ಜಗಲಾಸರ್ ಅವರು ಪ್ರಶಂಸನಾ‌ ಪತ್ರ ನೀಡಿ ಗೌರವಿಸಿದ್ದಾರೆ. #PoliceConstable #Rain

    Posted by Vijayavani on Thursday, July 9, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts