ಕಳೆದ 5 ವರ್ಷದಲ್ಲಿ 11 ಬಾರಿ ಕಚ್ಚಿದ ಕಪ್ಪು ಬಣ್ಣದ ಹಾವು! ಯುವತಿಯ ಮಾತು ಕೇಳಿ ದಂಗಾದ ವೈದ್ಯರು | Snake

Snake
Published on

Snake : ಹಾವಿನ ದ್ವೇಷ ಹನ್ನೆರಡು ವರ್ಷ ಎಂಬ ಮಾತಿದೆ. ತನಗೆ ಹಿಂಸೆ ನೀಡಿದವರ ವಿರುದ್ಧ ಹಾವುಗಳು ಸೇಡು ತೀರಿಸಿಕೊಳ್ಳುವುದನ್ನು ಸಿನಿಮಾ ಹಾಗೂ ಕಥೆಗಳಲ್ಲಿ ನಾವು ನೋಡಿರುತ್ತೇವೆ ಮತ್ತು ಕೇಳಿರುತ್ತೇವೆ. ಆದರೆ, ಇದು ವೈಜ್ಞಾನಿಕವಾಗಿ ದೃಢೀಕರಿಸಲ್ಪಟ್ಟಿಲ್ಲ. ಹೀಗಿದ್ದರೂ ಇಂದಿಗೂ ಜನರಲ್ಲಿ ಈ ನಂಬಿಕೆ ಬಲವಾಗಿದೆ. ವಾಸ್ತವವಾಗಿ ಇಂತಹ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ.

ದಲಪತ್ ಅಹಿರ್ವಾರ್ ಅವರು ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಪಂಚಂಪುರ ಗ್ರಾಮದ ನಿವಾಸಿ. ಇವರ ಮಗಳು ರೋಷಿಣಿ (19) ಅವರು ಕೆಲ ವರ್ಷಗಳ ಹಿಂದೆ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಹಾವು ಕಚ್ಚಿತ್ತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ರಕ್ಷಿಸಲಾಯಿತು. ಆದರೆ, ಅದೇ ಹಾವು ಇಂದಿಗೂ ಯುವತಿಗೆ ಕಚ್ಚುತ್ತಲೇ ಇದೆ ಎಂದು ಆಕೆಯ ತಂದೆ ದಲಪತ್ ಹೇಳಿದ್ದಾರೆ. ಅಚ್ಚರಿಯ ಸಂಗತಿ ಏನೆಂದರೆ ಕಪ್ಪು ಬಣ್ಣದ ಹಾವು ಪದೇಪದೆ ಕಚ್ಚುತ್ತಿದೆಯಂತೆ.

ಇದೀಗ ರೋಷಿಣಿ ಅವರನ್ನು ಮತ್ತೊಮ್ಮೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಐದು ವರ್ಷದಲ್ಲಿ 11 ಬಾರಿ ಕಪ್ಪು ಬಣ್ಣದ ಹಾವು ಕಚ್ಚಿದೆ. ಹಾವಿನಿಂದ ತಪ್ಪಿಸಿಕೊಳ್ಳಲು ಸಂಬಂಧಿಕರು ಮನೆಗೆ ಕರೆದೊಯ್ದರು ಸಹ ಹಾವು ಕಚ್ಚುತ್ತಿದೆ ಎಂದು ದಲಪತ್ ಅವರು ಹೇಳಿದ್ದಾರೆ. ಇದನ್ನು ಕೇಳಿ ವೈದ್ಯರೇ ಒಂದು ಕ್ಷಣ ಅಚ್ಚರಿಗೆ ಒಳಗಾಗಿದ್ದಾರೆ.

ಹಾವು ಕಚ್ಚುವುದನ್ನು ತಡೆಯಲು ಪೂಜಾ ವಿಧಿ ವಿಧಾನಗಳನ್ನು ನಡೆಸಿದ್ದರೂ ಫಲಕಾರಿಯಾಗಿಲ್ಲ. ಪದೇಪದೆ ಹಾವು ಕಚ್ಚುತ್ತಲೇ ಇದೆ. ಇದಕ್ಕೆ ಕಾರಣ ಏನೆಂಬುದು ನಿಗೂಢವಾಗಿಯೇ ಉಳಿದಿದೆ ಎಂದು ರೋಷಿಣಿ ತಂದೆ ದಲಪತ್​ ನೋವು ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಹೋಬಾ ಜಿಲ್ಲಾಸ್ಪತ್ರೆಯ ಡಾ.ರಾಜೇಶ್ ಭಟ್ ಎಂಬುವರು ಮಾತನಾಡಿದ್ದು, ಆಕೆ ಹೇಳಿದ ಕಥೆ ಎಷ್ಟು ಸತ್ಯವೋ ಗೊತ್ತಿಲ್ಲ, ಆದರೆ ಜಿಲ್ಲಾಸ್ಪತ್ರೆಯಲ್ಲಿ ಮೂರು ಬಾರಿ ರೋಷಿಣಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಹಾವು ಕಚ್ಚಿದ ಗುರುತು ಕೂಡ ಇದೆ. ಹಾವು ಕಡಿತದ ಸಂದರ್ಭದಲ್ಲಿ ಸಂತ್ರಸ್ತರಿಗೆ ನೀಡಲಾಗುವ ಆಂಟಿ-ಸ್ನೇಕ್ ವೆನಮ್ ಇಂಜೆಕ್ಷನ್ ಅನ್ನು ಆಕೆಗೆ ನೀಡಲಾಯಿತು. ಆದ್ದರಿಂದ ವಿಷವು ದೇಹದ ಮೇಲೆ ಪರಿಣಾಮ ಬೀರುವುದಿಲ್ಲ. ಆದರ, ರೋಷಿಣಿಗೆ ಹಾವು ಕಚ್ಚಿದೆ ಎಂಬುದನ್ನು ಸಂಪೂರ್ಣವಾಗಿ ಖಚಿತಪಡಿಸಲು ಸಾಧ್ಯವಿಲ್ಲ ಎಂದು ರಾಜೇಶ್​ ಭಟ್​ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net