ಹಾವು-ಮುಂಗುಸಿ ಕಿತ್ತಾಡುವುದೇಕೆ? ಸದಾ ಮುಂಗುಸಿಯೇ ಗೆಲ್ಲುವುದೇಕೆ? ಇಲ್ಲಿದೆ ನೋಡಿ ಅಚ್ಚರಿಯ ಉತ್ತರ! Snake vs Mongoose

Snake vs Mongoose
Published on

Snake vs Mongoose : ಯಾರಾದರೂ ಕಿತ್ತಾಡುತ್ತಿದ್ದರೆ ಹಾವು-ಮುಂಗುಸಿ ರೀತಿ ಏಕೆ ಜಗಳವಾಡುತ್ತಿದ್ದೀರಾ ಎಂದು ಹಿರಿಯರು ಹೇಳುವುದನ್ನು ಎಲ್ಲರು ಕೇಳಿರುತ್ತೀರಿ. ಏಕೆಂದರೆ, ಹಾವು ಮತ್ತು ಮುಂಗುಸಿ ಆ ಜನ್ಮದ ಶತ್ರುಗಳೆಂದೇ ಹೆಸರುವಾಸಿಯಾಗಿವೆ. ಉಭಯ ಜೀವಿಗಳು ಯಾವುದೇ ಕ್ಷಣದಲ್ಲಿ ಎದುರು-ಬದುರಾದರೆ ಸಾಕು ಅಲ್ಲೊಂದು ಯುದ್ಧ ನಡೆದೇ ತೀರುತ್ತದೆ. ಈ ಜಗಳದಲ್ಲಿ ಯಾವಾಗಲೂ ಮುಂಗುಸಿಯೇ ಗೆಲ್ಲುತ್ತದೆ ಎಂಬುದು ಗಮನಾರ್ಹ.

ಅಷ್ಟಕ್ಕೂ ಹಾವು-ಮುಂಗುಸಿ ನಡುವೆ ಇಷ್ಟೊಂದು ದ್ವೇಷ ಯಾಕೆ? ಇಬ್ಬರ ಮಧ್ಯೆ ಶಾಶ್ವತ ಪೈಪೋಟಿ ಏಕೆ ನಡೆಯುತ್ತದೆ? ಒಬ್ಬರನ್ನೊಬ್ಬರು ನೋಡಿ ಏಕೆ ಆಕ್ರಮಣ ಮಾಡುತ್ತವೆ? ಸದಾ ಮುಂಗುಸಿಯೇ ಏಕೆ ಗೆಲ್ಲುತ್ತದೆ? ಎಂಬಿತ್ಯಾದಿ ಪ್ರಶ್ನೆಗಳು ಸಾಮಾನ್ಯವಾಗಿ ಕೇಳಿಬರುತ್ತವೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ಅತ್ಯಂತ ಸರಳ ಉತ್ತರವೆಂದರೆ ಪ್ರಕೃತಿ ಮುಂಗುಸಿ ಮತ್ತು ಹಾವು ಎರಡನ್ನೂ ಶತ್ರುಗಳನ್ನಾಗಿ ಸೃಷ್ಟಿಸಿದೆ. ಇದು ಅವರ ಸಹಜ ಪ್ರವೃತ್ತಿಯಾಗಿದೆ. ಕೆಲವು ಅಧ್ಯಯನಗಳ ಪ್ರಕಾರ, ಹಾವುಗಳು ಮತ್ತು ಮುಂಗುಸಿಗಳು ನೈಸರ್ಗಿಕ ಶತ್ರುಗಳು. ಸರ್ವೆವಲ್ ಆಫ್ ದಿ ಫಿಟೆಸ್ಟ್ ಎಂಬ ಚಾರ್ಲ್ಸ್​ ಡಾರ್ವಿನ್​ ಸಿದ್ಧಾಂತದ ಪ್ರಕಾರ ತಮ್ಮ ಪ್ರಾಣ ಉಳಿಸಿಕೊಳ್ಳಲು ಉಭಯ ಜೀವಿಗಳು ಪರಸ್ಪರ ಆಕ್ರಮಣ ಮಾಡುತ್ತವೆ. ಹಾವು ಮುಂಗುಸಿಯನ್ನು ಕೊಂದು ಬದುಕಲು ಬಯಸುತ್ತದೆ. ಅಂತೆಯೇ, ಮುಂಗುಸಿಯು ಹಾವನ್ನು ಕೊಲ್ಲಲು ಬಯಸುತ್ತದೆ.

ಮತ್ತೊಂದು ಉತ್ತರ ಪ್ರಕಾರ ಮುಂಗುಸಿಯ ಮರಿಗಳು ಹೆಚ್ಚಾಗಿ ಹಾವಿಗೆ ಬಲಿಯಾಗುತ್ತವೆ ಎಂದು ಹೇಳಲಾಗಿದೆ. ಹಾವು ಹೆಚ್ಚಾಗಿ ಮುಂಗುಸಿಯ ಮರಿಗಳನ್ನು ತಿನ್ನುತ್ತವೆ. ಆದ್ದರಿಂದ, ಮುಂಗುಸಿಯು ತನ್ನ ಮರಿಗಳನ್ನು ರಕ್ಷಿಸಲು ಹಾವಿನ ಮೇಲೆ ದಾಳಿ ಮಾಡುತ್ತವೆ ಎಂದು ತಜ್ಞರು ತಿಳಿಸಿದ್ದಾರೆ. ಮುಖ್ಯವಾಗಿ ಹಾವುಗಳಲ್ಲಿ ಕಂಡುಬರುವ ವಿಷವು ಮುಂಗುಸಿ ಮೇಲೆ ಪರಿಣಾಮ ಬೀರುವುದಿಲ್ಲ. ಈ ಕಾರಣಕ್ಕಾಗಿಯೇ ಮುಂಗುಸಿ ವಿಷಪೂರಿತ ಹಾವುಗಳ ವಿರುದ್ಧದ ಹೋರಾಟದಲ್ಲಿ ಹಿಂದೆ ಸರಿಯುವುದಿಲ್ಲ.

ಯಾವಾಗಲೂ ಮುಂಗುಸಿಯೇ ಏಕೆ ಗೆಲ್ಲುತ್ತದೆ?

ಈ ಮೇಲಿನ ಪ್ರಶ್ನೆಗೆ ಉತ್ತರ ಏನೆಂದರೆ, ಮುಂಗುಸಿಯ ವಿಪರೀತ ವೇಗ, ಚುರುಕುತನ ಮತ್ತು ಹಾವಿನ ವಿಷಕ್ಕೆ ಪ್ರತಿರೋಧ ತೋರುವುದರಿಂದ ಸದಾ ಮುಂಗುಸಿಯೇ ಗೆಲ್ಲುತ್ತದೆ. ಮುಂಗುಸಿಯು ಚುರುಕುತನದಿಂದಾಗಿ ಹೆಚ್ಚಿನ ಸಂದರ್ಭಗಳಲ್ಲಿ ಅದು ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲದು. ಹಾವು ಮತ್ತು ಮುಂಗುಸಿಯ ನಡುವಿನ ಕಾದಾಟದಲ್ಲಿ ಮುಂಗುಸಿಯು ಶೇ. 80 ರಷ್ಟು ಗೆಲ್ಲುತ್ತದೆ ಎಂದು ನಂಬಲಾಗಿದೆ. ಇದಲ್ಲದೆ, ಮುಂಗುಸಿಯು ತನ್ನ ದೇಹದಲ್ಲಿ ಅಸೆಟೈಲ್‌ಕೋಲಿನ್ ಎಂಬ ಅಂಶವನ್ನು ಹೊಂದಿದ್ದು, ಹಾವಿನ ವಿಷದಲ್ಲಿರುವ ನ್ಯೂರೋಟಾಕ್ಸಿನ್‌ನಿಂದ ರಕ್ಷಿಸಲ್ಪಡುತ್ತದೆ. ಮುಂಗುಸಿಯ ಡಿಎನ್‌ಎಯಲ್ಲಿರುವ ಆಲ್ಫಾ ಮತ್ತು ಬೀಟಾ ಬ್ಲಾಕರ್‌ಗಳು ಹಾವಿನ ವಿಷದ ಪರಿಣಾಮಗಳಿಂದ ರಕ್ಷಿಸುತ್ತವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net