ಹಿಮಾಚಲ ಪ್ರದೇಶ: ಸತತ 4 ವರ್ಷಗಳಿಂದ ಪಂಚಾಯತಿ ಸಮಿತಿ ಸಭೆಗೆ ಹಾಜರಾಗದ ಹಿನ್ನೆಲೆ ಲೋಕೋಪಯೋಗಿ ಅಧಿಕಾರಿಯೊಬ್ಬರಿಗೆ 5 ರೂ. ದಂಡ ವಿಧಿಸಿದ ಅಪರೂಪದ ಘಟನೆಯೊಂದು ಇಲ್ಲಿನ ಹಮೀರ್ಪುರ್ನಲ್ಲಿ ಮಂಗಳವಾರ ನಡೆದಿದೆ.
ಜ.21ರಂದು ನಡೆದ ಬ್ಲಾಕ್ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಂಡಿದ್ದು, ದೇಶದದಲ್ಲಿ ಕೇವಲ 5 ರೂ. ದಂಡ ಹಾಕಿದ ಪ್ರಕರಣ ಇದೇ ಮೊದಲ ಎಂದು ವರದಿಯಾಗಿದೆ.
ಇದನ್ನೂ ಓದಿ:Centenary Of The Congress Session | ಕಾಂಗ್ರೆಸ್ ಸಂವಿಧಾನದ ಪರ, ಆದ್ರೆ ಬಿಜೆಪಿ ಕಾಂಗ್ರೆಸ್ ವಿರೋಧಿ; CM
ಸಭೆಯ ಅಧ್ಯಕ್ಷತೆಯನ್ನು ಬಿಡಿಸಿಸಿ ಅಧ್ಯಕ್ಷ ಹರೀಶ್ ಶರ್ಮಾ ವಹಿಸಿದ್ದರು. ಪಂಚಾಯಿತಿ ಸಮಿತಿಯಲ್ಲಿ ಮಾತನಾಡಿದ ಹರೀಶ್ ಶರ್ಮಾ ಮಾತನಾಡಿ, ‘ಕಳೆದ 4 ವರ್ಷಗಳಿಂದ ಗೈರುಹಾಜರಾದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗೆ 5 ರೂ. ದಂಡ ವಿಧಿಸಿರುವುದನ್ನು ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು ’ ಎಂದರು.
ಈ ಅಧಿಕಾರಿ ನಿರಂತರವಾಗಿ ಸಭೆಗಳನ್ನು ತಪ್ಪಿಸುತ್ತಿದ್ದು, ಇದರಿಂದ ಹಲವು ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿವೆ. ಹಲವು ಬಾರಿ ಎಚ್ಚರಿಕೆ ನೀಡಿದರೂ ಅಧಿಕಾರಿಗಳು ಸಭೆಗೆ ಹಾಜರಾಗುತ್ತಿಲ್ಲ. ಹೀಗಾಗಿ ಪಂಚಾಯಿತಿ ಸಮಿತಿ ಸಭೆಗಳಲ್ಲಿ ಅಧಿಕಾರಿಗಳ ಗೈರು ಹಾಜರಿಯಿಂದ ಹಲವು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ಸಾಧ್ಯವಾಗದ ಕಾರಣ ಬ್ಲಾಕ್ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್)
Champions Trophy 2025: ಟೀಮ್ ಇಂಡಿಯಾ ಜರ್ಸಿ ಮೇಲೆ ‘ಪಾಕಿಸ್ತಾನ’ ಎಂದು ಮುದ್ರಿಸಲು ಒಪ್ಪದ ಬಿಸಿಸಿಐ