Gas Leakage: ಇಂದು ಪ್ರತಿಯೊಬ್ಬರ ಮನೆಯಲ್ಲಿಯೂ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳನ್ನು ಬಳಕೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೆಲವೆಡೆ ಮಾತ್ರ ಇಂದಿಗೂ ಸೌದೆ ಒಲೆಯನ್ನು ಬಳಸಿ, ಅಡುಗೆ ಮಾಡಿಕೊಳ್ಳುತ್ತಿದ್ದಾರೆಯೇ ಹೊರತು ಉಳಿದೆಲ್ಲಾ ಪ್ರದೇಶಗಳಲ್ಲಿ ಜನರು ತಮ್ಮ ಮನೆಗಳಲ್ಲಿ ಎಲ್ಪಿಜಿ ಬಳಸುತ್ತಿದ್ದಾರೆ. ಕೆಂಪು ಬಣ್ಣದಲ್ಲಿ ಕಾಣಿಸುವ 14.5 ಕೆಜಿ ತೂಕದ ಸಿಲಿಂಡರ್ ಉಪಯೋಗ ಇಂದಿಗೂ ಹಲವರಲ್ಲಿ ಆತಂಕ ಮೂಡಿಸಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.
ಇದನ್ನೂ ಓದಿ: Centenary Of The Congress Session | ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ
ಗ್ಯಾಸ್ ಅತ್ಯವಶ್ಯಕ
ದಿನನಿತ್ಯ ಮನೆಯಲ್ಲಿ ಅಡುಗೆ ಮಾಡಲು ಗ್ಯಾಸ್ ಸಿಲಿಂಡರ್ನ ರೆಗ್ಯೂಲೇಟರ್ ಆನ್ ಮಾಡಿಕೊಳ್ಳುವ ನಮ್ಮ ಜನ, ಬಳಕೆಯಾದ ನಂತರ ಅದನ್ನು ಸ್ವಿಚ್ ಆಫ್ ಮಾಡುತ್ತಾರೆ. ಬಹುತೇಕರಿಗೆ ಇಂದಿಗೂ ಇದೊಂದು ಭಯವಾದ ಕೆಲಸ. ಮನೆಯಲ್ಲಿ ಅಡುಗೆ ಮಾಡಲು ಗ್ಯಾಸ್ ಅತ್ಯವಶ್ಯಕ. ಹೀಗಿರುವಾಗ ಭಯದಿಂದ ಗ್ಯಾಸ್ ಉಪಯೋಗಿಸದೆ ಇರಲು ಸಾಧ್ಯವಿಲ್ಲ. ಸಿಲಿಂಡರ್ ಆನ್ ಮಾಡಿ, ಆಫ್ ಮಾಡುವುದು ತೀರ ಕಷ್ಟಕರ. ಕಾರಣ, ಸಿಲಿಂಡರ್ ಲೀಕೇಜ್ ಆಗುವ ಸಮಸ್ಯೆ. ಹಲವು ಬಾರಿ ಸಣ್ಣ ಗಾಳಿ ಹೋದ ಶಬ್ದದ ಮೂಲಕ ಲೀಕೇಜ್ ಅನ್ನು ಎಚ್ಚರಿಸುವ ಸಿಲಿಂಡರ್, ಕೆಲವೊಮ್ಮೆ ಯಾವ ಶಬ್ದವಿಲ್ಲದೆ, ನಮ್ಮ ಗಮನಕ್ಕೆ ಬಾರದೆ ಲೀಕ್ ಆಗುವುದು ಸ್ಫೋಟದ ಭೀತಿಯನ್ನು ಹೆಚ್ಚಿಸುತ್ತದೆ.
ಭಾರೀ ಅನಾಹುತ
ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣಗಳನ್ನು ತೀರ ಹೆಚ್ಚಾಗಿವೆ. ಅನಿಲ ಸಿಲಿಂಡರ್ ಸ್ಫೋಟದಿಂದ ಮನೆಯ ಗೋಡೆಗಳು ಛಿದ್ರವಾಗಿ, ಕುಟುಂಬದ ಸದಸ್ಯರು ದುರಂತ ಅಂತ್ಯ ಕಂಡ ಪ್ರಕರಣಗಳನ್ನು ಸುದ್ದಿ ಪತ್ರಿಕೆ, ವಾಹಿನಿಗಳಲ್ಲಿ ಆಗಾಗ್ಗೆ ಕಾಣ ಸಿಗುತ್ತವೆ. ಈ ಭಯ ಇಂದಿಗೂ ಅನೇಕರಲ್ಲಿದೆ. ಎಲ್ಪಿಜಿ ಗ್ಯಾಸ್ ಸೋರಿಕೆಯಾದರೆ ಹೇಗೆ? ಏನು ಮಾಡೋದು ಎಂಬ ಆತಂಕದಲ್ಲೇ ಬಳಕೆ ಮಾಡುತ್ತಾರೆ. ಆದರೆ, ಅನಿಲ ಸೋರುತ್ತಿದೆ ಎಂಬುದು ಅದರಿಂದ ಹೊರಬರುವ ದುರ್ವಾಸನೆಯೇ ಸಾಕ್ಷಿ. ರೆಗ್ಯೂಲೇಟರ್ನಿಂದ ಈ ಕೆಟ್ಟ ವಾಸನೆ ಬರುತ್ತಿದೆ ಎಂದರೆ ಅದು ಖಂಡಿತ ಗ್ಯಾಸ್ ಲೀಕೇಜ್ನ ಸೂಚನೆಯೇ. ಇದನ್ನು ಪತ್ತೆಹಚ್ಚುವುದರಿಂದ ಭಾರೀ ಅನಾಹುತವನ್ನು ತಪ್ಪಿಸಬಹುದು.
ಕೊಳೆತ ವಾಸನೆ
ಕೊಳೆತ ಎಲೆಕೋಸು ಅಥವಾ ಟೈರ್ ಸುಟ್ಟ ವಾಸನೆ ಬೀರುವ ಅನಿಲ ಸೋರಿಕೆ, ಗ್ಯಾಸ್ ಬಳಕೆದಾರರಿಗೆ ಸೋರಿಕೆಯ ಮುನ್ನೆಚ್ಚರಿಕೆಯನ್ನು ನೀಡುತ್ತದೆ. ಅಸಲಿಗೆ ಅನಿಲಕ್ಕೆ ಯಾವುದೇ ವಾಸನೆ ಇಲ್ಲ. ಇದು ವಾಸನೆ ರಹಿತ. ಜನರು ಇದನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸುವ ಹಿನ್ನೆಲೆ ಗ್ಯಾಸ್ ಸ್ಫೋಟಗೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇಂತಹ ಸೋರಿಕೆಯ ಬಗ್ಗೆ ಎಚ್ಚರಿಕೆ ನೀಡುವ ಸಲುವಾಗಿ ಈಥೈಲ್ ಮರ್ಕ್ಯಾಪ್ಟನ್ ಎಂಬ ಕೆಮಿಕಲ್ ಏಜೆಂಟ್ ಅನ್ನು ಅನಿಲದ ಜತೆ ಬೆರಸಲಾಗುತ್ತದೆ. ಇದು ಗ್ಯಾಸ್ ಸೋರಿಕೆಯನ್ನು ತಕ್ಷಣವೇ ದುರ್ವಾಸನೆ ಮೂಲಕ ಬಳಕೆದಾರರಿಗೆ ತಿಳಿಸುತ್ತದೆ.
ಸ್ಟಾರ್ ನಟಿಯರಿಗೆ ಡಬ್ ಮಾಡೋದು ಯುವತಿ ಅಲ್ಲ ಯುವಕ! ಸೌತ್ ಬ್ಯೂಟಿಗಳ ಧ್ವನಿ ಹಿಂದಿದೆ ಈತನ ಜಾದು | Dubbing Artist