

ಬ್ರಹ್ಮಾವರ: ಮನೆ, ಕುಟುಂಬ ವ್ಯವಸ್ಥೆಯಲ್ಲಿ ಒಗ್ಗಟ್ಟು ಇದ್ದಾಗ ಸವಾಜ, ದೇವಸ್ಥಾನಗಳು ದೇಶದ ಒಗ್ಗಟ್ಟಿಗೆ ಶಕ್ತಿಯಾಗುತ್ತದೆ ಎಂದು ಶ್ರೀ ಸರಸ್ವತಿ ನಾರಾಯಣಿ ಆರ್ಯ ಮರಾಟಿ ಸೇವಾ ಸಂಘದ ಅಧ್ಯಕ್ಷ ರವಿನಾಯಕ್ ಮಿಯಾರು ಹೇಳಿದರು.
ಸೋಮವಾರ ಬಾರಕೂರು ಮೂಡುಕೇರಿ ಶ್ರೀ ಸರಸ್ವತಿ ನಾರಾಯಣಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯತ್ಸವ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ ಬಳಿಕ ನಡೆದ ಸಂಘದ ಮಹಾಸಭೆಯಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸವಾಜದ ನಾನಾ ಕ್ಷೇತ್ರದಲ್ಲಿ ಸಾಧನೆ ವಾಡಿದ ವಾಸು ನಾಯಕ್, ಗೌತಮ್, ಕೃಷ್ಣ ಕುವಾರ್ ನಿನ್ನಿಕಲ್‌ಲ್, ಪ್ರಕಾಶ್ ಗೋಕುಲ್ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ದೇವಸ್ಥಾನ ಆಡಳಿತ ಮೋಕ್ತೇಸರ ಶಂಕರ ನಾಯಕ್ ಬ್ರಹ್ಮಾವರ, ಗೋವಿಂದ ನಾಯಕ್ ನಾಯ್ಕನ ಕಟ್ಟೆ, ಸುರೇಶ್ ನಾಯಕ್ ಪರ್ಕಳ, ಕರ್ನಾಟಕ ವಿದ್ಯುತ್ ನಿಗಮದ ಉದಯ ನಾಯ್ಕ ನೇರಳಕಟ್ಟೆ, ಬಿಎಸ್‌ಎನ್‌ಎಲ್ ನಿವೃತ್ತ ಸಿಬ್ಬಂದಿ ಜಯಲಕ್ಷ್ಮೀ ಪುರುಷೋತ್ತಮ ನಾಯಕ್ ಉಪಸ್ಥಿತರಿದ್ದರು.
ಚಂದ್ರಶೇಖರ ನಾಯ್ಕ ಮಣಿಪಾಲ ಸ್ವಾಗತಿಸಿದರು. ಜಯಂತ್ ಬೆಳ್ವೆ ವಂದಿಸಿದರು. ಶ್ರೀನಿವಾಸ್ ನಾಯ್ಕ ಹಾಕಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಸುಧಾಕರ ನಾಯ್ಕ ಗೋಳಿಯಂಗಡಿ ಮತ್ತು ನಾಗರತ್ನಾ ಪಳ್ಳಿ ನಿರೂಪಿಸಿದರು.