ಬನ್ನಂಜೆಯಲ್ಲಿ ಸಾಯಿರಾಧ ಕಾರ್ಪೊರೇಟ್​ ಆಫೀಸ್​ ಉದ್ಘಾಟನೆ

blank

ಉಡುಪಿ: ಸಾವಿರಾರು ಮಂದಿಗೆ ಉದ್ಯೋಗ ದೊರಕಿಸಿಕೊಟ್ಟಿರುವ ಸಾಯಿರಾಧಾ ಸಂಸ್ಥೆ ಕರಾವಳಿಯಲ್ಲಿ ಚಿರಕಾಲ ಬೆಳಗಲಿ ಎಂದು ಬಾರಕೂರು ಸಂಸ್ಥಾನದ ಡಾ. ವಿಶ್ವಸಂತೋಷ ಭಾರತಿ ಸ್ವಾಮೀಜಿ ಹೇಳಿದರು.

blank

ಬನ್ನಂಜೆ&ಶಿರಿಬೀಡುವಿನ ರಾ.ಹೆ. ಸನಿಹದಲ್ಲಿ ನೂತನವಾಗಿ ನಿರ್ಮಿಸಲಾದ ಸಾಯಿರಾಧಾ ಗ್ರೂಪ್​ನ ಕಾರ್ಪೊರೇಟ್​ ಆಫೀಸ್​ ಉದ್ಘಾಟನೆ ನೆರವೇರಿಸಿ ಮಾತನಾಡಿದರು. 1987ರಲ್ಲಿ ಪ್ರಾರಂಭವಾದ ಸಾಯಿರಾಧಾ ಗ್ರೂಪ್​ 38 ವರ್ಷಗಳಿಂದ ವಿವಿಧ ಸೇವೆಗಳ ಮೂಲಕ ಗುರುತಿಸಿಕೊಂಡಿದ್ದಲ್ಲದೆ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. ಯಾವುದೇ ಕೆಲಸದಲ್ಲಿ ಅಚ್ಚುಕಟ್ಟುತನ ಪ್ರದರ್ಶಿಸುವ ಸಂಸ್ಥೆ ಮುಖ್ಯಸ್ಥ ಮನೋಹರ್​ ಶೆಟ್ಟಿ ಅವರ ಕಾರ್ಯವೈಖರಿ ಮಾದರಿಯಾಗಿದೆ. ಮಕ್ಕಳನ್ನೂ ತೊಡಗಿಸಿಕೊಳ್ಳುವ ಮೂಲಕ ಈ ಉದ್ಯಮ ಪರಂಪರೆ ಮುಂದುವರಿಸುತ್ತಿದ್ದಾರೆ ಎಂದು ಹೇಳಿದರು.
ಟಿಎಂಎ ಪೈ ೌಂಡೇಶನ್​ ಅಧ್ಯಕ್ಷ ಟಿ. ಅಶೋಕ್​ ಪೈ ಮಾತನಾಡಿ, ಸಾಯಿರಾಧಾ ಸಂಸ್ಥೆ ಸೇವೆ ಉದ್ಯಮ ವಲಯಕ್ಕೆ ಪಾಠವಾಗಿದೆ. ಎಲ್ಲಿಯೂ ಸಿಗದ ಔಷಧಗಳು ಲಭ್ಯವಿರುವುದರಿಂದ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದರು.

ಬಡಗಬೆಟ್ಟು ಕ್ರೆಡಿಕ್​ ಕೋ&ಆಪರೇಟಿವ್​ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಬ್ಯಾಂಕ್​ ಆ್​ ಬರೋಡ ಜಿಎಂ ರಾಜೇಶ್​ ಖನ್ನಾ, ಎಸ್​ ಬಿ ಐ ಎಜಿಎಂ ಸುರೇಖಾ ಎನ್​. ಸಾಯಿರಾಧಾ ಗ್ರೂಪ್​ನ ಎಂಡಿ ಮನೋಹರ ಎಸ್​. ಶೆಟ್ಟಿ , ಮಾಹೆ ಸಹಕುಲಾಧಿಪತಿ ಡಾ. ಎಚ್​.ಎಸ್​ ಬಲ್ಲಾಳ್​, ಉದ್ಯಮಿ ಪುರುಷೋತ್ತಮ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್​ ಸೊರಕೆ ಉಪಸ್ಥಿತರಿದ್ದರು.
ಜೆಎಂಡಿ ಆರ್ಕಿಟೆಕ್​ ಸಿದ್ದಾರ್ಥ ಎಂ. ಶೆಟ್ಟಿ ಸ್ವಾಗತಿಸಿ, ಜೆಎಂಡಿ ಡಾ. ಶರಣಮ್​ ಎಂ. ಶೆಟ್ಟಿ ವಂದಿಸಿದರು. ಪ್ರಕಾಶ್​ ತಂತ್ರಿ ಕಾರ್ಯಕ್ರಮ ನಿರೂಪಿಸಿದರು.

Share This Article
blank

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

blank