ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ಕಾರು! ಯಾವುದೇ ಹಾನಿಯಿಲ್ಲದೇ ದಂಪತಿ ಪಾರಾಗಿದ್ದೇ ಪವಾಡ! Car fell into well

Car fell into well
Published on

ಕೊಚ್ಚಿ: ದಂಪತಿ ( Couple ) ಪ್ರಯಾಣಿಸುತ್ತಿದ್ದ ಕಾರು ( Car Accident ) ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ( Car fell into well ) ಆಘಾತಕಾರಿ ಘಟನೆ ಕೇರಳ ( Kerala ) ದ ಕೊಳಂಚೇರಿ ಸಮೀಪದ ಪಾಂಕೋಟ್ ಎಂಬಲ್ಲಿ ನಡೆದಿದೆ.

ದಂಪತಿ ಕೊಟ್ಟಾರಕ್ಕರದಿಂದ ಆಲುವಾ ಕಡೆಗೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕಾರು ನಿಯಂತ್ರಣ ತಪ್ಪಿ ಸುಮಾರು 15 ಅಡಿ ಆಳದ ಬಾವಿಗೆ ಬಿದ್ದಿದೆ. ಅದೃಷ್ಟವಶಾತ್​ ದಂಪತಿ ಯಾವುದೇ ಪ್ರಾಣಪಾಯವಿಲ್ಲದೆ ಪಾರಾಗಿದ್ದಾರೆ.

ಕಾರು ಬೀಳುವ ವೇಳೆ ಬಾವಿಯಲ್ಲಿ 5 ಅಡಿ ನೀರು ಇತ್ತು. ಆಲುವಾ ಕೊಂಪಾರ ಮೂಲದ ಕಾರ್ತಿಕ್ ಎಂ.ಅನಿಲ್ (27) ಮತ್ತು ವಿಸ್ಮಯ (26) ಅವರನ್ನು ಪಟ್ಟಿಮಠ ಅಗ್ನಿಶಾಮಕ ಠಾಣಾಧಿಕಾರಿ ಎನ್.ಎಚ್.ಅಸೈನರ್ ನೇತೃತ್ವದಲ್ಲಿ ರಕ್ಷಣೆ ಮಾಡಲಾಯಿತು.

ಕಾರು ರಸ್ತೆಯಲ್ಲಿನ ಗುಂಡಿಗೆ ಸಿಲುಕಿದಾಗ ನಿಯಂತ್ರಣ ತಪ್ಪಿ ಹೋಯಿತು. ನಂತರ ಬಾವಿಯ ರಕ್ಷಣಾ ಗೋಡೆ ಒಡೆದು ಒಳಗೆ ಬಿದ್ದಿತು ಎಂದು ದಂಪತಿ ಹೇಳಿದ್ದಾರೆ. ಬಾವಿಯಲ್ಲಿ ನೀರು ಕಡಿಮೆ ಇದ್ದ ಕಾರಣ ಭಾರೀ ಅನಾಹುತ ತಪ್ಪಿದೆ. ಅಪಘಾತದ ನಂತರವೂ ದಂಪತಿಗೆ ಕಾರಿನ ಬಾಗಿಲು ತೆರೆಯಲು ಸಾಧ್ಯವಾಯಿತು. ಹೀಗಾಗಿ ಯಾವುದೇ ಅಪಾಯವಿಲ್ಲದೆ ಬಚಾವ್​ ಆದರು. ಒಂದು ವೇಳೆ ನೀರಿದ್ದರೆ ಇಬ್ಬರು ಸಾಯುವ ಸಾಧ್ಯತೆ ಇತ್ತು.

ದಂಪತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಾವಿಗೆ ಬಿದ್ದ ಕಾರನ್ನು ಕ್ರೇನ್ ಮೂಲಕ ಹೊರತೆಗೆಯಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net