ಪುತ್ತೂರು ಗ್ರಾಮಾಂತರ: ಚಾಲಕನ ಹತೋಟಿ ಕಳಕೊಂಡ ಕಾರೊಂದು ರಸ್ತೆ ಬದಿಯ ತೋಟಕ್ಕೆ ಉರುಳಿಬಿದ್ದ ಘಟನೆ ಶನಿವಾರ ಬೆಳಗ್ಗೆ ಸುಬ್ರಹ್ಮಣ್ಯ&ಮಂಜೇಶ್ವರ ರಸ್ತೆಯಲ್ಲಿ ಸರ್ವೆ ಸಮೀಪ ನಡೆದಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಪ್ರಣಾಪಾಯದಿಂದ ಪಾರಾಗಿದ್ದಾರೆ.
ತೋಟಕ್ಕೆ ಉರುಳಿಬಿದ್ದ ಪರಿಣಾಮವಾಗಿ ಕಾರು ಹಾನಿಗೊಂಡಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸವಣೂರು ವ್ಯಾಪ್ತಿಯ ಸೋಂಪಾಡಿ ನಿವಾಸಿ ಲತೀಫ್ ಮತ್ತು ಅವರ ಪತ್ನಿ ಅಪಾಯದಿಂದ ಪಾರಾಗಿದ್ದಾರೆ. ತೋಟಕ್ಕೆ ಉರುಳಿದ ಕಾರನ್ನು ಕ್ರೇನ್ ಮೂಲಕ ಮೇಲಕ್ಕೆತ್ತಲಾಗಿದೆ.