ಕಾಸರಗೋಡು: ಬೈಕ್ ಕಳವು ಪ್ರಕರನಕ್ಕೆ ಸಂಬಂಧಿಸಿ ವಿದ್ಯಾನಗರ ಠಾಣೆ ಪೊಲೀಸರು ಬಾಲಕ ಸೇರಿದಂತೆ ಮೂರು ಮಂದಿಯನ್ನು ಬಂಧಿಸಿದ್ದಾರೆ. ಆಲಂಪಾಡಿ ಮಿನಿ ಸ್ಟೇಡಿಯಂ ಸನಿಹದ ನಿವಾಸಿ ಮೊಯ್ದೀನ್ ಫಾಸಿಲ್, ಕಲ್ಲಕಟ್ಟ ಪಟ್ಲ ಹೌಸ್ ನಿವಾಸಿ ಮಹಮ್ಮದ್ ಮುಸ್ತಫಾ ಹಾಗೂ ಅಪ್ರಾಪ್ತ ಬಾಲಕ ಬಂಧಿತರು. ಚೆರುಕುನ್ನು ಇಟ್ಟಮ್ಮಲ್ನಿಂದ ಬುಲ್ಲೆಟ್ ಬೈಕನ್ನು ತಂಡ ಕಳವುಗೈದಿತ್ತು.
ಕಣ್ಣಪುರಂ ರೈಲ್ವೆ ನಿಲ್ದಾಣ ವಠಾರದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ನಡೆಸಿರುವ ಬಗ್ಗೆ ಕಣ್ಣಪುರಂ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡು ಸಿಸಿ ಕ್ಯಾಮರಾ ದೃಶ್ಯಾವಳಿ ತಪಾಸಣೆ ನಡೆಸಿದಾಗ ಕಾಸರಗೋಡು ನಿವಾಸಿಗಳು ಕಳವುಗೈದಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಇದೇ ಆರೋಪಿಗಳ ವಿರುದ್ಧ ನೀಲೇಶ್ವರ ಠಾಣೆಯಲ್ಲೂ ಬೈಕ್ ಕಳವು ಪ್ರಕರಣ ದಾಖಲಾಗಿದೆ.