ಕಡಬ: ಬಸ್ಸಿನಿಂದ ಎಸೆಯಲ್ಪಟ್ಟು ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿನಿಯ ಚಿಕಿತ್ಸಾ ವೆಚ್ಚ ಭರಿಸುವುದಾಗಿ ತಿಳಿಸಿ ಬಳಿಕ ನೀಡದೆ ಇದ್ದ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ ಟನೆ ಕಡಬದಲ್ಲಿ ನಡೆದಿದೆ.
ಬಜತ್ತೂರು ಗ್ರಾಮದ ಕೇಶವ ಪತ್ನಿ, ಮಗಳ ಜೊತೆ ಆಲಂಕಾರಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ನಲ್ಲಿ ಆಲಂಕಾರು&ಉಪ್ಪಿನಂಗಡಿ ರಸ್ತೆಯಾಗಿ ಹೋಗುತ್ತಿರುವಾಗ ಆಲಂಕಾರು ಪೇಟೆ ಸಮೀಪದ ಬಾಕಿಲ ಎಂಬಲ್ಲಿ ಬಸ್ಸಿನ ಹಿಂಬದಿಯ ಬಾಗಿಲನ್ನು ಹಾಕದೆ ಬಸ್ ಒಮ್ಮೆಲೆ ತಿರುಗಿಸಿದ ಪರಿಣಾಮ ಮಗಳು ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದರು. ಕೂಡಲೇ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಮೇರೆಗೆ ಮಂಗಳೂರಿನ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿತ್ತು.
ಚಿಕಿತ್ಸಾ ವೆಚ್ಚ ಭರಿಸುವುದಾಗಿ ತಿಳಿಸಿದ್ದ ಬಸ್ ಚಾಲಕ ಅದಿವೆಪ್ಪ ಬಳಿಕ ಭರಿಸದೆ ಇದ್ದುದರಿಂದ ಆತನ ವಿರುದ್ಧ ದೂರು ನೀಡಲಾಯಿತು.ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.