ಹಂಡೆಯಲ್ಲಿನ ಕುದಿಯುವ ನೀರಿಗೆ ಬಿದ್ದ ನಾಲ್ಕು ವರ್ಷದ ಬಾಲಕ ಸಾವು..

death
ಸಾಂದರ್ಭಿಕ ಚಿತ್ರ
Published on

ಶಿವಮೊಗ್ಗ: ಅಡಕೆ ಬೇಯಿಸುವ ಹಂಡೆಯೊಳಗಿದ್ದ ಕುದಿಯುವ ನೀರಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಭದ್ರಾವತಿ ತಾಲೂಕಿನ ಅರಕೆರೆ ಗ್ರಾಮದ ನಾಲ್ಕು ವರ್ಷದ ಬಾಲಕ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಅರಕೆರೆ ಗ್ರಾಮದ ಮಂಜುನಾಥ ಎಂಬುವರ ಪುತ್ರ ಧನರಾಜ್ ಮೃತಪಟ್ಟ ಬಾಲಕ. ಆ.29ರಂದು ಮನೆ ಹಿಂಬದಿ ಅಡಕೆ ಬೇಯಿಸುವಾಗ ಹಂಡೆಯ ಪಕ್ಕ ಧನರಾಜ್ ನಿಂತಿದ್ದ. ಈ ವೇಳೆ ಆಯತಪ್ಪಿ ಕುದಿಯುತ್ತಿದ್ದ ನೀರಿದ್ದ ಹಂಡೆಯೊಳಕ್ಕೆ ಬಿದ್ದಿದ್ದ.

ತಕ್ಷಣವೇ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಶನಿವಾರ ಮೃತಪಟ್ಟಿದ್ದಾನೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net