ಉರಗ ಪ್ರಿಯೆ ಈ ನಟಿ..ಅಬ್ಬಬ್ಬಾ ಹೆಬ್ಬಾವಿಗೆ ಚುಂಬಿಸ್ತಾಳೆ!

snake
Published on

ಮುಂಬೈ: ಸಾಮಾನ್ಯವಾಗಿ ಸೆಲೆಬ್ರಿಟಿಗಳು ನಾಯಿ, ಬೆಕ್ಕಿನ ಮರಿಗಳನ್ನು ಸಾಕುವುದು ಕಾಣಬಹುದು. ಹಾಗೆಯೇ ತಮ್ಮ ನೆಚ್ಚಿನ ಈ ಪ್ರಾಣಿಗಳನ್ನು ಚುಂಬಿಸುವುದು, ಮೇಮೇಲೆ ಎಳೆದುಕೊಳ್ಳುವುದನ್ನೂ ನೋಡಿರುತ್ತೇವೆ. ಆದರೆ ಹಾವುಗಳನ್ನು ಸಾಕುವ ಹವ್ಯಾಸವನ್ನು ನೀವು ಎಂದಾದರೂ ಕೇಳಿದ್ದೀರಾ?

ಹೌದು, ಬಾಲಿವುಡ್ ನಾಯಕಿ ಸುಶ್ಮಿತಾ ಸೇಂಕಿ ಹಾವು ಸಾಕಿ ಸಂತೋಷ ಕಂಡುಕೊಂಡಿದ್ದಾಳೆ. ಆಕೆಗೆ ಹಾವುಗಳ ಹುಚ್ಚು. ಅದೇ ಪ್ರೀತಿಯಿಂದ ಹೆಬ್ಬಾವನ್ನು ಸಾಕುತ್ತಿದ್ದಾಳೆ ಎಂಬ ಮಾತು ಬಾಲಿವುಡ್ ನಲ್ಲಿ ಕೇಳಿಬರುತ್ತಿದೆ.

ಬಿಡುವಿನ ವೇಳೆ ಗುಡ್ಡಗಾಡಿನಲ್ಲಿ ತನ್ನ ಸಾಕು ಪ್ರಾಣಿ ಹೆಬ್ಬಾವಿನೊಂದಿಗೆ ಆಟವಾಡುತ್ತಾ ಖುಷಿಪಡುತ್ತಾಳೆ. ಆದರೆ, ಸುಶ್ಮಿತಾ ತನ್ನ ಹೆಬ್ಬಾವಿನ ಬಗ್ಗೆ ಏನನ್ನೂ ಹೇಳುವುದಿಲ್ಲ, ಈ ವಿಷಯವನ್ನು ಅವರ ಆಪ್ತರು ಮಾಧ್ಯಮಗಳಿಗೆ ಲೀಕ್ ಮಾಡಿದ್ದಾರೆ. ಇದನ್ನು ಸುಶ್ಮಿತಾ ನಿರಾಕರಿಸದ ಕಾರಣ ಬಾಲಿವುಡ್ ಮಂದಿ ಇದನ್ನೇ ನಿಜವೆಂದು ನಂಬಿದ್ದಾರೆ.

ಜನರು ಹೆಬ್ಬಾವನ್ನು ಮುಟ್ಟುವ ಧೈರ್ಯ ಮಾಡುವುದು ಕಡಿಮೆ. ಅಷ್ಟೇಕೆ ಹಾವುಗಳೆಂದರೆ ಸಹಜವಾಗಿಯೇ ಎಂತಹವರಿಗೂ ಭಯ. ಎಲ್ಲೋ ದೂರದಲ್ಲಿ ಸಣ್ಣ ಹಾವು ಕಂಡರೆ ಭಯದಿಂದ ಓಡುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ಹೆಬ್ಬಾವು ಸಾಕಿ ಅದನ್ನು ನಾಯಿಮರಿಯಂತೆ ಮುದ್ದಿಸುವುದು, ಚುಂಬಿಸುವುದನ್ನು ಸುಶ್ಮಿತಾ ಮಾಡುತ್ತಿರುವುದು ಬಾಲಿವುಡ್​ನಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net