More

    ಅಧ್ಯಕ್ಷೀಯ ನಾಮನಿರ್ದೇಶನ ಸ್ಪರ್ಧೆಯಲ್ಲಿ ಬಿಡೆನ್​ಗೆ ಮೊದಲ ಗೆಲುವು!

    ವಾಷಿಂಗ್ಟನ್​: ಡೆಮಾಕ್ರಟಿಕ್ ಪಕ್ಷದ ಪರವಾಗಿ ಅಧ್ಯಕ್ಷೀಯ ನಾಮನಿರ್ದೇಶನ ರೇಸ್‌ನಲ್ಲಿ ಜೋ ಬಿಡೆನ್ ತಮ್ಮ ಮೊದಲ ಗೆಲುವು ದಾಖಲಿಸಿದ್ದಾರೆ. ಸೌತ್ ಕೆರೊಲಿನಾ ಪ್ರೈಮರಿಯಲ್ಲಿ ಭರ್ಜರಿ ಜಯ ಸಾಧಿಸಿದ ಅವರು ಮಿನ್ನೇಸೋಟ ಪ್ರತಿನಿಧಿ ಡೀನ್ ಫಿಲಿಪ್ಸ್ ಮತ್ತು ಲೇಖಕ ಮರಿಯನ್ ವಿಲಿಯಮ್ಸನ್ ಅವರನ್ನು ಸೋಲಿಸಿದರು.

    ಇದನ್ನೂ ಓದಿ: ಸೇನಾ ಸಮವಸ್ತ್ರದ ಅಕ್ರಮ ಸಾಗಾಟ.. ಓರ್ವನ ಬಂಧನ- ಗುಪ್ತಚರ ಪೊಲೀಸರ ಕಾರ್ಯಾಚರಣೆ

    ದಕ್ಷಿಣ ಕೆರೊಲಿನಾ ಮತದಾರರು 2020 ರಲ್ಲಿ ಅವರ ಗೆಲುವಿಗೆ ದಾರಿ ಮಾಡಿಕೊಟ್ಟರು. 2024ರಲ್ಲೂ ಇದೇ ಪುನರಾವರ್ತನೆಯಾಯಿತು ಎಂದು ಬಿಡೆನ್ ವಿಶ್ವಾಸ ವ್ಯಕ್ತಪಡಿಸಿದರು. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಸೋಲು ಅನಿವಾರ್ಯವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

    ದಕ್ಷಿಣ ಕೆರೊಲಿನಾದಲ್ಲಿ ರಿಪಬ್ಲಿಕನ್ನರು ಉತ್ತಮವಾಗಿ ಕಾರ್ಯನಿರ್ವಹಿಸಿದರು. ಇಲ್ಲಿನ ಶೇ.26ರಷ್ಟು ಮತದಾರರು ಕಪ್ಪು ವರ್ಣೀಯರಾಗಿದ್ದಾರೆ. ಅವರ ಪಾಲು ದೇಶದ ಒಟ್ಟು ಮತದಾರರಲ್ಲಿ 11 ಪ್ರತಿಶತ. ಸಮೀಕ್ಷೆಯೊಂದರ ಪ್ರಕಾರ ಕಳೆದ ಚುನಾವಣೆಯಲ್ಲಿ ಪ್ರತಿ 10 ಕರಿಯರಲ್ಲಿ 9 ಜನರು ಬಿಡನ್‌ಗೆ ಮತ ಹಾಕಿದ್ದಾರೆ. ಬಿಡೆನ್ ಗೆಲುವಿಗೆ ಅವರೇ ಕಾರಣ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು. ಡೆಮಾಕ್ರಟಿಕ್ ಪಕ್ಷದ ಪ್ರಾಥಮಿಕ ಸಭೆಗಳು ಮಂಗಳವಾರ ನೆವಾಡಾ, ಫೆಬ್ರವರಿ 27 ರಂದು ಮಿಚಿಗನ್ ಮತ್ತು ಮಾರ್ಚ್ 5 ರಂದು ಹಲವಾರು ರಾಜ್ಯಗಳಲ್ಲಿ ನಡೆಯಲಿದೆ.

    ಒಟಿಟಿಯಲ್ಲಿ ‘ಗುಂಟುರುಕಾರಂ’: ಕನ್ನಡದಲ್ಲೂ ತೆರೆಗೆ-ಸ್ಟ್ರೀಮಿಂಗ್ ಡೇಟ್ ಫಿಕ್ಸ್..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts