More

    ಚಿಲಿಯಲ್ಲಿ ಬಾನೆತ್ತರಕ್ಕೆ ಎದ್ದಿದೆ ಕಾಡ್ಗಿಚ್ಚು: 46 ಜನರ ದಾರುಣ ಸಾವು – ಸಾವಿರಾರು ಮಂದಿಗೆ ಗಾಯ!

    ಸ್ಯಾಂಟಿಯಾಗೊ: ದಕ್ಷಿಣ ಅಮೆರಿಕಾದ ಚಿಲಿಯಲ್ಲಿ ಹೆಚ್ಚಿನ ತಾಪಮಾನದಿಂದ ಉಂಟಾಗಿರುವ ಬೆಂಕಿಯ ಕೆನ್ನಾಲಿಗೆಗೆ ಚಿಲಿ ಧ್ವಂಸಗೊಳಿಸುತ್ತಿದೆ. ಈ ಕಾಡ್ಗಿಚ್ಚಿನ ರುದ್ರನರ್ತನಕ್ಕೆ ಇಲ್ಲಿಯವರೆಗೆ ಕನಿಷ್ಠ 46 ಜನರು ಸಾವನ್ನಪ್ಪಿದ್ದಾರೆ. ಸಹಸ್ರಾರು ಮಂದಿ ಗಾಯಗೊಂಡಿದ್ದಾರೆ.

    ಇದನ್ನೂ ಓದಿ: ಅಧ್ಯಕ್ಷೀಯ ನಾಮನಿರ್ದೇಶನ ಸ್ಪರ್ಧೆಯಲ್ಲಿ ಬಿಡೆನ್​ಗೆ ಮೊದಲ ಗೆಲುವು!

    ಬಿಸಿಲಿನ ಝಳ ಹೆಚ್ಚಾಗಿರುವುದರಿಂದ ಕಾಡಿನ ಬೆಂಕಿ ನಿಲ್ಲುತ್ತಿಲ್ಲ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ಸುಮಾರು 1,100 ಮನೆಗಳು ಬೆಂಕಿಗೆ ಆಹುತಿಯಾಗಿವೆ. ವಾಲ್ಪಾರೈಸೋ ಪ್ರದೇಶದಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಜನರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅಧ್ಯಕ್ಷ ಬೋರಿಕ್ ಗೇಬ್ರಿಯಲ್ ತಿಳಿಸಿದ್ದಾರೆ.

    ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ನಡೆಸುತ್ತಿರುವವರಿಗೆ ಸಹಕರಿಸುವಂತೆ ಜನರಿಗೆ ಮನವಿ ಮಾಡಿಕೊಳ್ಳಲಾಗಿದೆ. ಬೆಂಕಿ ಅತ್ಯಂತ ವೇಗವಾಗಿ ಹರಡುತ್ತಿದ್ದು, ತಾಪಮಾನ ಏರಿಕೆ ನಿಯಂತ್ರಣಕ್ಕೆ ಬರುತ್ತಿಲ್ಲ. ಬೆಂಕಿ ಮತ್ತಷ್ಟು ಹೆಚ್ಚಾಗಲು ಬಲವಾದ ಗಾಳಿ ಮತ್ತು ಕಡಿಮೆ ಆರ್ದ್ರತೆಯು ಪರಿಸ್ಥಿತಿ ಕಾರಣವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

    ದೇಶದ ಮಧ್ಯ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಸುಮಾರು 92 ಕಡೆ ಅರಣ್ಯ ಬೆಂಕಿ (ಚಿಲಿ ಫಾರೆಸ್ಟ್ ಫೈರ್ಸ್) ಭುಗಿಲೆದ್ದಿದೆ ಎಂದು ಸಚಿವ ಕೆರೊಲಿನಾ ಬಹಿರಂಗಪಡಿಸಿದ್ದಾರೆ. ಬೆಂಕಿಯ ತೀವ್ರತೆ ಹೆಚ್ಚಿರುವ ವಾಲ್ಚರೈಝೋ ಪ್ರದೇಶದಿಂದ ಸಾವಿರಾರು ಜನರನ್ನು ಈಗಾಗಲೇ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅವರು ವಿವರಿಸಿದರು.

    ಸೇನಾ ಸಮವಸ್ತ್ರದ ಅಕ್ರಮ ಸಾಗಾಟ.. ಓರ್ವನ ಬಂಧನ- ಗುಪ್ತಚರ ಪೊಲೀಸರ ಕಾರ್ಯಾಚರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts