More

    ಅವಕಾಶ ಕೊಟ್ಟಿದ್ದಕ್ಕೆ ನಿರ್ದೇಶಕ ಲೋಕೇಶ್​ಗೆ ಥ್ಯಾಂಕ್ಸ್​! ಲಿಯೋ ಹೈನಾ ಸಂದರ್ಶನದ ವಿಡಿಯೋ ವೈರಲ್​

    ಚೆನ್ನೈ: ಇಳಯ ದಳಪತಿ ವಿಜಯ್ ಅಭಿನಯದ​ ಲಿಯೋ ಸಿನಿಮಾ ಇದೇ ತಿಂಗಳು 19ರಂದು ಬಿಡುಗಡೆಯಾಗಲಿದ್ದು, ಸಿನಿಮಾ ಮೇಲೆ ನಿರೀಕ್ಷೆ ಬೆಟ್ಟದಷ್ಟಿದೆ. ಅದರಲ್ಲೂ ಅಭಿಮಾನಿಗಳಂತೂ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ.

    ಕೈದಿ, ಮಾಸ್ಟರ್​, ವಿಕ್ರಮ್​ ಸಿನಿಮಾಗಳ ಭರ್ಜರಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಿರ್ದೇಶಕ ಲೋಕೇಶ್​ ಕನಗರಾಜ್​ ಅವರೇ ಲಿಯೋ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಸಹಜವಾಗಿಯೇ ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಇದೆ.

    ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಕೋಟಿಗಟ್ಟಲೆ ವೀಕ್ಷಣೆ ಪಡೆದುಕೊಂಡು, ಇಂದಿಗೂ ಕಾಲಿವುಡ್​ನಲ್ಲಿ ಹೆಚ್ಚು ಚರ್ಚೆಯಲ್ಲಿರುವ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಇಳಯದಳಪತಿ ವಿಜಯ್​ ಹೊರತುಪಡಿಸಿ, ಬಾಲಿವುಡ್​ ನಟ ಸಂಜಯ್​ ದತ್​, ಆ್ಯಕ್ಸನ್​ ಕಿಂಗ್​ ಅರ್ಜುನ್​ ಸರ್ಜಾ, ನಟಿ ತ್ರಿಶಾ, ಅರ್ಜುನ್​ ದಾಸ್​, ಫಾಹದ್​ ಫಾಸಿಲ್​, ನವಿನ್​ ಪೌಲಿ, ಗೌತಮ್​ ವಾಸುದೇವ್​ ಮೆನನ್​ ಸೇರಿದಂತೆ ಬಹುತಾರಾಗಣವಿದೆ.

    ಆದರೆ, ಸಿನಿಮಾ ಟ್ರೈಲರ್​ನಲ್ಲಿ ಅಭಿಮಾನಿಗಳಿಗೆ ವಿಶೇಷವಾಗಿ ಗಮನ ಸೆಳೆದಿದ್ದು ಕತ್ತೆಕಿರುಬ. ಇದೀಗ ಇದೇ ಕತ್ತೆಕಿರುಬಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಮುಹಿಲ್​ ತಲೈವಾ ಹೆಸರಿನ ಎಕ್ಸ್​ ಖಾತೆಯಲ್ಲಿ ವಿಡಿಯೋ ಶೇರ್​ ಮಾಡಿಕೊಳ್ಳಲಾಗಿದ್ದು, ಅದರಲ್ಲಿ ಕತ್ತೆಕಿರುವ ಲಿಯೋ ಸಿನಿಮಾದ ಕೆಲಸದ ಅನುಭವವನ್ನು ಹಂಚಿಕೊಂಡಿದೆ.

    ಇದನ್ನೂ ಓದಿ: ಚಿಂಚೋಳಿ: ‘ಹೆಂಡ- ಸಾರಾಯಿ ಸಹವಾಸ, ಹೆಂಡಿರು ಮಕ್ಕಳು ಉಪವಾಸ’ ಬೃಹತ್ ಜನಜಾಗೃತಿ ಜಾಥಾ

    ಇದು ಸಾಧ್ಯನಾ ಎಂದು ನೀವು ಹುಬ್ಬೇರಿಸಬಹುದು. ಆದರೆ, ವಿಡಿಯೋ ಎಡಿಟಿಂಗ್​ ಮೂಲಕ ಕತ್ತೆಕಿರುಬ ಮಾತನಾಡಿದೆ ಎನ್ನುವಂತೆ ವಿಡಿಯೋವನ್ನು ಎಡಿಟ್​ ಮಾಡಿ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ಇದೀಗ ಆ ವಿಡಿಯೋ 1.60 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. 3 ಸಾವಿರ ಮಂದಿ ವಿಡಿಯೋವನ್ನು ಲೈಕ್​ ಸಹ ಮಾಡಿದ್ದಾರೆ.

    ಸಂದರ್ಶನದಲ್ಲಿ ಏನಿದೆ?
    ಲಿಯೋ ಸಿನಿಮಾದಲ್ಲಿ ನಟಿಸಿದ್ದು ಎಂದು ಮರೆಯಲಾಗದ ಅನುಭವವಾಗಿದೆ. ದಿ ಲಯನ್​ ಕಿಂಗ್​ ಸಿನಿಮಾದಲ್ಲಿ ಒಂದು ಕೂಟವಾಗಿ ನಟಿಸಿದ ನನಗೆ ಲಿಯೋ ಸಿನಿಮಾದಲ್ಲಿ ವಿಶೇಷ ಪಾತ್ರವನ್ನೇ ನೀಡಲಾಗಿದೆ. ಈ ಸಿನಿಮಾದಲ್ಲಿ ನಟ ವಿಜಯ್​ ಅವರ ಜತೆ ನಟಿಸಿದ್ದು ಇಂದಿಗೂ ನನ್ನ ಕಣ್ಣ ಮುಂದೆಯೇ ಇದೆ ಎಂದು ಕತ್ತೆಕಿರುಬ ಅಭಿಪ್ರಾಯ ವ್ಯಕ್ತಪಡಿಸಿದೆ ಎಂಬಂತೆ ಹಿನ್ನೆಲೆ ಧ್ವನಿಯನ್ನು ನೀಡಿ ವಿಡಿಯೋವನ್ನು ಎಡಿಟ್​ ಮಾಡಲಾಗಿದೆ.

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸಿದೆ. ಇದು ಕೂಡ ಚಿತ್ರದ ಪ್ರಚಾರಕ್ಕೆ ಪಾಸಿಟಿವ್​ ಆಗಲಿದೆ ಎಂಬ ಅಭಿಪ್ರಾಯಗಳನ್ನು ಅಭಿಮಾನಿಗಳು ಹೊರಹಾಕಿದ್ದಾರೆ. ಅ.19ರಂದು ತೆರೆಕಾಣುವ ವಿಜಯ್​ ಸಿನಿಮಾ ಯಾವೆಲ್ಲಾ ದಾಖಲೆಗಳನ್ನು ಮುರಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ. ವಿಜಯ್​ ಅವರು ಕೊನೆಯದಾಗಿ ವಾರಿಸು ಸಿನಿಮಾದಲ್ಲಿ ನಟಿಸಿದ್ದರು. (ಏಜೆನ್ಸೀಸ್​)

    ದೇವಾಲಯ ನಿರ್ಮಾಣಕ್ಕೆ 11 ಲಕ್ಷ ರೂ. ದೇಣಿಗೆ ನೀಡಿದ ಟೀಂ ಇಂಡಿಯಾ ಆಟಗಾರ ರಿಂಕು ಸಿಂಗ್

    13 ಸಾವಿರಕ್ಕೆ ಖರೀದಿಸಿ 36 ಕೋಟಿ ರೂ.ಗೆ ಮಾರಾಟ! ಅಪರೂಪದ ಮಾಸ್ಕ್​ನ ರೋಚಕ ಕತೆಯಿದು

    ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಅಹಮದಾಬಾದ್​ಗೆ ಬಂದಿಳಿದ ಶುಭಮನ್​ ಗಿಲ್ ಪಾಕ್​ ವಿರುದ್ಧ ಆಡ್ತಾರಾ?​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts