More

    ದಳಪತಿ ವಿಜಯ್ ಅಭಿಮಾನಿಗಳಿಗೆ ಸಿಹಿ ಸುದ್ದಿ; ಈ ದಿನ ರಿಲೀಸ್ ಆಗಲಿದೆ ‘ಲಿಯೋ’ ಟೀಸರ್​?

    ತಮಿಳುನಾಡು: ಕಾಲಿವುಡ್​ನ ಖ್ಯಾತ​ ನಟ ದಳಪತಿ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ಅಭಿನಯದ ಬಹುನಿರೀಕ್ಷಿತ ‘ಲಿಯೋ’ ಸಿನಿಮಾದ ಟೀಸರ್​ ಬಗ್ಗೆ ಇದೀಗ ಸಿನಿಪ್ರೇಕ್ಷಕರಿಗೆ ಮತ್ತು ವಿಜಯ್​ ಅಭಿಮಾನಿಗಳಿಗೆ ಹೊಸ ಮಾಹಿತಿಯೊಂದು ದೊರಕಿದೆ.

    ಇದನ್ನೂ ಓದಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಿ.ಶೀಖಾ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

    ಹೆಸರಾಂತ ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶನದ ‘ಲಿಯೋ’ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಆಕ್ಷನ್- ಡ್ರಾಮಾ ಜಾನರ್​ ಅನ್ನು ಒಳಗೊಂಡಿದೆ. ಚಿತ್ರವನ್ನು ಅಕ್ಟೋಬರ್ 19, 2023 ರಂದು ದೇಶ-ವಿದೇಶಗಳ ಬಹುತೇಕ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ. ಈ ಮಧ್ಯೆ ಇದೀಗ ವಿಜಯ್​ ಅಭಿಮಾನಿಗಳು ಟೀಸರ್​ ಮತ್ತು ಟ್ರೇಲರ್​​ಗಾಗಿ ಕಾತರದಿಂದ ಕಾಯುತ್ತಿದ್ದು, ಇದೀಗ ಟೀಸರ್​ ರಿಲೀಸ್​ ಬಗ್ಗೆ ಹೊಸ ವರದಿಯೊಂದು ಲಭಿಸಿದೆ.

    ಲಿಯೋ ಚಿತ್ರದ ಟೀಸರ್ ಆಗಸ್ಟ್ 15, 2023 ಸ್ವಾತಂತ್ರ್ಯ ದಿನಾಚರಣೆಯಂದು ಅನಾವರಣಗೊಳಿಸಲು ಚಿತ್ರತಂಡ ಯೋಜಿಸಿದೆ ಎಂಬ ವದಂತಿಗಳು ಜಾಲತಾಣಗಳಲ್ಲಿ ಹರಿದಾಡಿದೆ. ಸದ್ಯ ಈ ಬಗ್ಗೆ ಚಿತ್ರ ತಯಾರಕರಿಂದ ಯಾವುದೇ ಮಾಹಿತಿ ಪ್ರಕಟವಾಗಿಲ್ಲ, ಅಧಿಕೃತ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

    ಇದನ್ನೂ ಓದಿ: ಚಿಪ್ಸ್ ಪ್ಯಾಕೆಟ್​​ ಕದಿಯುವಾಗ ಸಿಕ್ಕಿಬಿದ್ದ ಬಾಲಕ: ಥಳಿಸಿ, ಮಾರ್ಕೆಟ್​​ನಲ್ಲಿ ಬೆತ್ತಲೆ ಮೆರವಣಿಗೆ ಮಾಡಿದ್ರು..

    ಬಿಗ್​ ಬಜೆಟ್​ ಚಿತ್ರದಲ್ಲಿ ವಿಜಯ್​, ತ್ರಿಶಾ ಕೃಷ್ಣನ್, ಸಂಜಯ್ ದತ್, ಪ್ರಿಯಾ ಆನಂದ್, ಗೌತಮ್ ವಾಸುದೇವ್ ಮೆನನ್, ಮಿಸ್ಕಿನ್, ಸಂತಿ ಮಾಯಾದೇವಿ, ಮ್ಯಾಥ್ಯೂ ಥಾಮಸ್, ಮನ್ಸೂರ್ ಅಲಿ ಖಾನ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ,(ಏಜೆನ್ಸೀಸ್).

    ಪತಿ ಲಂಚ ಪಡೆದಿದ್ದಕ್ಕೆ ಮೇಯರ್ ಸ್ಥಾನದಿಂದ ಪತ್ನಿ ವಜಾ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts