More

    ತಾಯಿಗಾಗಿ ಸಾಯಿ ಬಾಬಾ ಗುಡಿ ಕಟ್ಟಿಸಿದ ದಳಪತಿ ವಿಜಯ್​

    ಚೆನ್ನೈ: ತಮಿಳಿನ ಖ್ಯಾತ ನಟ ದಳಪತಿ ವಿಜಯ್​ ರಾಜಕೀಯದ ಜೊತೆ ಸಿನಿಮಾಗಳಲ್ಲಿಯೂ ಬ್ಯುಸಿ ಇದ್ದು, ಶೀಘ್ರದಲ್ಲೇ ಅವರು ನಟಿಸಲಿರುವ 69ನೇ ಸಿನಿಮಾ ಘೋಷಣೆಯಾಗಲಿದೆ. ಇದಾದ ಬಳಿಕ 2026ರಲ್ಲಿ ನಡೆಯಲಿರುವ ತಮಿಳುನಾಡು ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅವರ ಸ್ಥಾಪನೆಯ ತಮಿಳಗಾ ವೆಟ್ರಿ ಕಳಗಂ ಪಕ್ಷದಿಂದ ಅವರು ಸ್ಪರ್ಧಿಸಲಿದ್ದಾರೆ. ಇದೀಗ ದಳಪತಿ ವಿಜಯ್​ ಸಿನಿಮಾ ಮತ್ತು ರಾಜಕೀಯ ಹೊರತಾಗಿ ಮತ್ತೊಂದು ವಿಚಾರಕ್ಕೆ ಸದ್ದು ಮಾಡುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ನಟ ದಳಪತಿ ವಿಜಯ್​ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಸಾಯಿ ಬಾಬಾ ಮಂದಿರ ನಿರ್ಮಾಣ ಮಾಡಿದ್ದಾರೆ. ಇದು ಅವರ ತಾಯಿಗಾಗಿ ನಿರ್ಮಾಣ ಮಾಡಿದ ಮಂದಿರ ಎಂಬುದು ವಿಶೇಷವಾಗಿದೆ. ಚೆನ್ನೈನ ಕೊರಟ್ಟೂರ್​ನಲ್ಲಿ ಈ ಮಂದಿರ ನಿರ್ಮಾಣ ಮಾಡಲಾಗಿದ್ದು, ವಿಜಯ್​ ತಮ್ಮ ತಾಯಿ ಶೋಭಾ ಅವರಿಗಾಗಿ ಈ ಮಂದಿರ ನಿರ್ಮಿಸಿದ್ದಾರೆ ಎಂದು ತಿಳಿದು ಬಂದಿದೆ.

    ಇದನ್ನೂ ಓದಿ: ಮುಂಬರುವ ಟಿ-20 ವಿಶ್ವಕಪ್​ನಿಂದ ವಿರಾಟ್​ ಕೊಹ್ಲಿಗೆ ಕೊಕ್​?; ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್​ ಹೇಳಿದ್ದಿಷ್ಟು

    ಚೆನ್ನೈನಲ್ಲಿ ದಳಪತಿ ವಿಜಯ್ ಅವರು ಸಣ್ಣ ಜಾಗ ಒಂದನ್ನು ಹೊಂದಿದ್ದರು. ಅಲ್ಲಿ ಈ ಮಂದಿರ ನಿರ್ಮಾಣ ಆಗಿದೆ. ವಿಜಯ್ ತಾಯಿ ಶೋಭಾ ಅವರಿಗೆ ದೇವಸ್ಥಾನ ನಿರ್ಮಾಣ ಮಾಡಬೇಕು ಎನ್ನುವ ಕನಸಿತ್ತು. ಆ ಕನಸು ಈಗ ಈಡೇರಿದೆ. ಈ ವರ್ಷ ಪೆಬ್ರವರಿಯಲ್ಲಿ ಈ ದೇವಸ್ಥಾನದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಇತ್ತೀಚಿಗೆ ಅವರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

    ಸದ್ಯ ವಿಜಯ್​ ಗ್ರೇಟೆಸ್ಟ್ ಆಫ್ ಆಲ್​ ಟೈಮ್(GOAT) ಚಿತ್ರದಲ್ಲಿ ಬ್ಯುಸಿ ಇದ್ದು, ಚಿತ್ರದಲ್ಲಿ ವಿಜಯ್​ಗೆ ಜೋಡಿಯಾಗಿ ತ್ರಿಶಾ ನಟಿಸುತ್ತಿದ್ದು, ಇವರ ಜೊತೆಗೆ ಪ್ರಶಾಂತ್, ಪ್ರಭುದೇವ, ಸ್ನೇಹ, ಲೈಲಾ, ವೈಭವ್, ಮೀನಾಕ್ಷಿ ಚೌಧರಿ, ಅಜ್ಮಲ್ ಸೇರಿದಂತೆ ಹಲವರು ವಿಜಯ್​ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದಾದ ಬಳಿಕ ವಿಜಯ್​ ದಳಪತಿ 59ನಲ್ಲಿ ನಟಿಸಲಿದ್ದು, ಇದು ಅವರ ಕೊನೆಯ ಚಿತ್ರ ಎಂದು ಹೇಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts