'ದಳಪತಿ 69' ವಿಜಯ್ ನಟನೆಯ ಕಡೆಯ ಸಿನಿಮಾ? ಗೊಂದಲಗಳಿಗೆ ತೆರೆ ಎಳೆದಿದೆ ಈ ವರದಿ

Untitled design (47)
Published on

ತಮಿಳುನಾಡು: ತಮಿಳು ನಟ ದಳಪತಿ ವಿಜಯ್ ಇತ್ತೀಚೆಗಷ್ಟೇ ತಮ್ಮದೇ ಹೊಸ ರಾಜಕೀಯ ಪಕ್ಷವೊಂದನ್ನು ಅಧಿಕೃತವಾಗಿ ಘೋಷಣೆ ಮಾಡುವ ಮೂಲಕ 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದರು. 'ತಮಿಳಕ ವೆಟ್ರಿ ಕಳಗಂ' ಪಾರ್ಟಿಯ ಹೆಸರು ಎಂದು ನಟ ಹೇಳುತ್ತಿದ್ದಂತೆ ಅನೇಕ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದೇ ಆದರೂ ಅತೀವ ಬೇಸರವನ್ನು ಕೂಡ ಹೊರಹಾಕಿದರು. ಕಾರಣ, ರಾಜಕೀಯ ಪ್ರವೇಶದಿಂದ ಇನ್ಮುಂದೆ ವಿಜಯ್ ನಟಿಸುವುದು ಬಹುತೇಕ ಅನುಮಾನ ಎಂಬ ಸುದ್ದಿ ಸದ್ಯ ಕಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇದರಿಂದ ಫ್ಯಾನ್ಸ್​ ಭಾರೀ ಗೊಂದಲಕ್ಕೀಡಾಗಿದ್ದಾರೆ.

ಅಭಿಮಾನಿಗಳು ಹಾಗೂ ಹಿತೈಷಿಗಳಿಂದ ಪಾಸಿಟಿವ್ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದ ನಟ ವಿಜಯ್, ನಟನಾ ವೃತ್ತಿಯನ್ನು ಕೈಬಿಡಲಿದ್ದಾರೆ? ಮುಂಬರುವ ದಿನಗಳಲ್ಲಿ ಯಾವುದೇ ಹೊಸ ಪ್ರಾಜೆಕ್ಟ್​ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಲಾಗುತ್ತಿದೆ. ಇದೆಲ್ಲಾ ಎಷ್ಟು ಸತ್ಯ? ಎಂಬುದು ಸದ್ಯ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ಹಿಂದೆ ಹಲವಾರು ಕಾರ್ಯಕ್ರಮಗಳಲ್ಲಿ ಕೈಹಿಡಿದಿರುವ ಕೆಲಸಗಳನ್ನು ಪೂರ್ಣಗೊಳಿಸಲಿದ್ದೇನೆ ಎಂದು ವಿಜಯ್ ಹೇಳಿದ್ದರು. ಅದರಂತೆಯೇ 'GOAT' ಹಾಗೂ 'ದಳಪತಿ 69' ಚಿತ್ರಗಳತ್ತ ನಟ ಗಮನಹರಿಸಿದ್ದಾರೆ.

'ದಳಪತಿ 69' ವಿಜಯ್ ಅವರ ಕಡೆಯ ಸಿನಿಮಾ ಅಲ್ಲ! ಲೋಕೇಶ್ ಕನಕರಾಜ್ ನಿರ್ದೇಶನದ 'ವಿಕ್ರಮ್ 2' ಮತ್ತು 'ಕೈತಿ 2'ನಲ್ಲಿ ವಿಜಯ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಭಾಗದ ಚಿತ್ರೀಕರಣವನ್ನು ಕೂಡ ಮುಗಿಸಿದ್ದಾರೆ. ಸದ್ಯ ಡಬ್ಬಿಂಗ್ ಕೆಲಸಗಳಲ್ಲಿ ವಿಜಯ್ ತೊಡಗಿದ್ದಾರೆ ಎಂದು ವರದಿಯಾಗಿದೆ.

ಪ್ರಸ್ತುತ ವಿಜಯ್ ತಮ್ಮ 68ನೇ ಚಿತ್ರ 'GOAT' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಚಿತ್ರವನ್ನು ವೆಂಕಟ್ ಪ್ರಭು ಬರೆದು ನಿರ್ದೇಶಿಸಿದ್ದಾರೆ. ಎಜಿಎಸ್ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಡಿಯಲ್ಲಿ ಅರ್ಚನಾ ಕಲಾಪತಿ ಈ ಚಿತ್ರವನ್ನು ನಿರ್ಮಿಸಿದ್ದು,  ಚಿತ್ರಕ್ಕೆ ಯುವನ್ ಶಂಕರ್ ರಾಜಾ ಅವರ ಸಂಗೀತವಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net