More

    ಮಾರ್ಷ್ ಕಪ್ ಪಂದ್ಯದ ವೇಳೆ ಬಾಲ್ ಬಡಿದು ಮೈದಾನದ ಮಧ್ಯದಲ್ಲಿ ಬಿದ್ದ ಕ್ರಿಕೆಟ್ ಆಟಗಾರ; ಕ್ಯಾಮರಾದಲ್ಲಿ ದಾಖಲಾದ ಆಘಾತಕಾರಿ ಘಟನೆ

    ಆಸ್ಟ್ರೇಲಿಯಾ: ಕ್ರಿಕೆಟ್ ಮೈದಾನದಲ್ಲಿ ಆಟಗಾರರು ಗಾಯಗೊಂಡಿರುವ ವರದಿಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ. ಇದೀಗ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮಾರ್ಷ್ ಏಕದಿನ ಕಪ್‌ ವೇಳೆ ಇಂತಹದೊಂದು ಘಟನೆ ಬೆಳಕಿಗೆ ಬಂದಿದೆ. ಇಲ್ಲಿ ಮ್ಯಾಚ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಓರ್ವ ಆಟಗಾರ ಚೆಂಡು ಬಡಿದ ತಕ್ಷಣ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಆಟಗಾರನ ಬಾಯಿಂದ ರಕ್ತವೂ ಬಂದಿತ್ತು. ಮಾರ್ಷ್ ಏಕದಿನ ಕಪ್‌ನಲ್ಲಿ ಆಸ್ಟ್ರೇಲಿಯಾ ವಿಕ್ಟೋರಿಯಾ ಮತ್ತು ದಕ್ಷಿಣ ಆಸ್ಟ್ರೇಲಿಯಾ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿಕ್ಟೋರಿಯಾ ತಂಡ ದಕ್ಷಿಣ ಆಸ್ಟ್ರೇಲಿಯಾವನ್ನು ಸೋಲಿಸಿತು. ಪಂದ್ಯದ ವೇಳೆ ದಕ್ಷಿಣ ಆಸ್ಟ್ರೇಲಿಯ ಆಟಗಾರರೊಬ್ಬರು ಗಾಯಗೊಂಡಿದ್ದರು. ಆಟಗಾರ ಗಾಯಗೊಂಡ ನಂತರ ಮೈದಾನದಲ್ಲಿ ಕೆಲಕಾಲ ಮೌನ ಆವರಿಸಿತ್ತು.

    ವಿಡಿಯೋ ಬಿಡುಗಡೆ 
    ಹೌದು, ಪಂದ್ಯದ ವೇಳೆ ಹೆನ್ರಿ ಹಂಟ್ ಅವರ ಮುಖಕ್ಕೆ ಚೆಂಡು ಬಡಿದಿದ್ದು, ನಂತರ ಹೆನ್ರಿ ಹಂಟ್‌ನ ಬಾಯಿಯಿಂದ ರಕ್ತ ಬರಲಾರಂಭಿಸಿತು. ಈ ಘಟನೆಯ ನಂತರ, ಹೆನ್ರಿ ಹಂಟ್ ಸ್ವಲ್ಪ ಸಮಯದವರೆಗೆ ಮೈದಾನದಲ್ಲಿ ಕುಳಿತುಕೊಂಡರು. ಈ ದೃಶ್ಯ ನೋಡಿ ಪ್ರೇಕ್ಷಕರೂ ಕೆಲಕಾಲ ಭಯಗೊಂಡಿದ್ದರು. ಈ ಘಟನೆಯ ವಿಡಿಯೋವನ್ನು ಆಸ್ಟ್ರೇಲಿಯಾ ಕ್ರಿಕೆಟ್ ಟೀಂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

    ಗಾಯಗೊಂಡ ನಂತರ ಹೆನ್ರಿ ಹಂಟ್ ಅವರನ್ನು ಮೈದಾನದಿಂದ ಕರೆತರಲಾಯಿತು. ಬಳಿಕ ಪಂದ್ಯ ಮತ್ತೆ ಆರಂಭವಾಯಿತು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ವೇಗವಾಗಿ ವೈರಲ್ ಆಗುತ್ತಿದೆ. ಬಳಕೆದಾರರು ಕೂಡ ಈ ವಿಡಿಯೋಗೆ ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. ಓರ್ವ ಬಳಕೆದಾರರು ಚೆಂಡು ಮುಖದ ಸೂಕ್ಷ್ಮ ಪ್ರದೇಶಕ್ಕೆ ಬಡಿದಿರುವುದು ತುಂಬಾ ದುರದೃಷ್ಟಕರ ಎಂದು ಬರೆದರೆ, ಮತ್ತೋರ್ವ ಬಳಕೆದಾರರು ಕ್ರಿಕೆಟ್ ಯೋಧರ ಆಟ ಎಂದು ಬರೆದಿದ್ದಾರೆ.

    ರೋಚಕ ಪಂದ್ಯ 
    ದಕ್ಷಿಣ ಆಸ್ಟ್ರೇಲಿಯದ ಮಾರ್ಷ್‌ಕಪ್‌ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 231 ರನ್ ಗಳಿಸಿತು. ದಕ್ಷಿಣ ಆಸ್ಟ್ರೇಲಿಯ ಪರ ಬ್ಯಾಟಿಂಗ್ ಮಾಡಿದ ಹೆನ್ರಿ ಕಾನ್ವೆ 43 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಅವರ ಇನ್ನಿಂಗ್ಸ್‌ನಲ್ಲಿ ಹೆನ್ರಿ 4 ಬೌಂಡರಿಗಳನ್ನು ಹೊಡೆದರು. ಬಳಿಕ 232 ರನ್‌ಗಳ ಗುರಿಯನ್ನು ಆಸ್ಟ್ರೇಲಿಯಾ ವಿಕ್ಟೋರಿಯಾ 44.1 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಸಾಧಿಸಿತು. ಆಸ್ಟ್ರೇಲಿಯಾ ವಿಕ್ಟೋರಿಯಾ ಪರ ಬ್ಯಾಟಿಂಗ್ ಮಾಡಿದ ಟಾಮ್ ರೋಜರ್ಸ್ 67 ರನ್ ಗಳಿಸಿದರು.

    ಅನಿಲ್​ ಕುಂಬ್ಳೆ ಸಾಧನೆಗೆ 25 ವರ್ಷ; ಜಂಬೋ ಬಿರುಗಾಳಿಗೆ ಧೂಳಿಪಟವಾಗಿತ್ತು ಪಾಕಿಸ್ತಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts