ದೆಹಲಿ: ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿಯು ಭಾರತದ ಕಾರು ಕಾರ್ಖಾನೆಯನ್ನು ಸ್ಥಾಪಿಸುವ ಹೂಡಿಕೆಯ ಪ್ರಸ್ತಾಪಕ್ಕಾಗಿ ಭಾರತ ಸರ್ಕಾರದೊಂದಿಗೆ ಚರ್ಚೆಯನ್ನು ಪ್ರಾರಂಭಿಸಿದೆ.
ಇದನ್ನೂ ಓದಿ: ಪರಿಷತ್ತಿನಲ್ಲಿ ಹನಿಮೂನ್ ಸಮಯದ ಬಗ್ಗೆ ಹಾಸ್ಯಮಯ ಚರ್ಚೆ: ನಗೆಗಡಲಲ್ಲಿ ತೇಲಾಡಿದ ಸದಸ್ಯರು
ಬಿಲಿಯನೇರ್ ಎಲಾನ್ ಮಸ್ಕ್ ನೇತೃತ್ವದ ಕಂಪನಿಯು ಇಂಡೋ-ಪೆಸಿಫಿಕ್ ಪ್ರದೇಶದ ದೇಶಗಳಿಗೆ ಕಾರುಗಳನ್ನು ರಫ್ತು ಮಾಡಲು ಯೋಜಿಸುತ್ತಿರುವುದರಿಂದ ಭಾರತವನ್ನು ರಫ್ತು ಮೂಲವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರತದಲ್ಲಿ ವಾರ್ಷಿಕ ಸುಮಾರು 5 ಲಕ್ಷ ಕಾರುಗಳ ಉತ್ಪಾದನೆ ಮಾಡಲು ಯೋಜಿಸುತ್ತಿದೆ.
ಜತೆಗೆ ಎಲೆಕ್ಟ್ರಿಕ್ ವೆಹಿಕಲ್ಗಳ(ಇವಿ) ವೇಗದ ಅಭಿವೃದ್ಧಿ ಮತ್ತು ಮಾರಾಟಕ್ಕೆ ದಾರಿ ಮಾಡಿಕೊಡುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸ್ಪರ್ಧಾತ್ಮಕ ಸ್ಥಾನವನ್ನು ಟೆಸ್ಲಾ ಹೆಚ್ಚಿಸಿಕೊಳ್ಳುವ ಯೋಜನೆ ಹೊಂದಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವೆಹಿಕಲ್ಗಳನ್ನು ಕೈಗೆಟುಕುವ ದರದಲ್ಲಿ ತಯಾರಿಸಲು ಟೆಸ್ಲಾ ಗುರಿಯನ್ನು ಹೊಂದಿದ್ದು, ಈ ಕಾರಿನ ಬೆಲೆ 20 ಲಕ್ಷ ರೂ.ದಿಂದ ಪ್ರಾರಂಭವಾಗುತ್ತವೆ.
ಈ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಟೆಸ್ಲಾವು, ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಮಾತುಕತೆ ನಡೆಸುತ್ತಿದೆ. ಈ ಬಾರಿ ಮಾತುಕತೆಯು ಸಕಾರಾತ್ಮಕವಾಗಿರುತ್ತದೆ ಎನ್ನಲಾಗಿದೆ.
ಇದನ್ನೂ ಓದಿ: ಫೇಸ್ಬುಕ್ ಸ್ನೇಹಿತನೊಂದಿಗೆ ಪತ್ನಿ ಪರಾರಿ: ಕಿಡ್ನ್ಯಾಪ್ ಎಂದು ಪತಿಯಿಂದ ದೂರು
ಈ ಹಿಂದೆ, ಭಾರತದಲ್ಲಿ ಸ್ಥಳೀಯ ಕಾರ್ಖಾನೆಯನ್ನು ನಿರ್ಮಿಸುವ ಆಸಕ್ತಿಯನ್ನು ಮಸ್ಕ್ ವ್ಯಕ್ತಪಡಿಸಿದ್ದರು. ಅಲ್ಲದೇ, ತಾನು ಮೋದಿಯವರ ಅಭಿಮಾನಿ ಎಂದು ಕೂಡ ಹೇಳಿದ್ದರು. ಆಮದು ಸುಂಕದ ಮೇಲೆ ಸರ್ಕಾರದಿಂದ ವಿಶೇಷ ಪ್ರೋತ್ಸಾಹವನ್ನು ಪಡೆಯಲು ವಿಫಲವಾದ ನಂತರ ಟೆಸ್ಲಾ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ಯೋಜನೆಯನ್ನು ಕೈಬಿಟ್ಟಿತ್ತು.(ಏಜೆನ್ಸೀಸ್)