More

    ಪರಿಷತ್ತಿನಲ್ಲಿ ಹನಿಮೂನ್ ಸಮಯದ ಬಗ್ಗೆ ಹಾಸ್ಯಮಯ ಚರ್ಚೆ: ನಗೆಗಡಲಲ್ಲಿ ತೇಲಾಡಿದ ಸದಸ್ಯರು

    ಬೆಂಗಳೂರು: ಇಂದು ನಡೆದ ವಿದಾನ ಪರಿಷತ್​ ಕಲಾಪದಲ್ಲಿ ಜೆಡಿಎಸ್​ನ ಶರವಣ, ಗೃಹ ಸಚಿವ ಪರಮೇಶ್ವರ್​ ನಡುವೆ ನಡೆದ ಚರ್ಚೆಯು ಹಾಸ್ಯಮಯ ಪ್ರಸಂಗಕ್ಕೆ ಎಡೆಮಾಡಿ ಕೊಟ್ಟಿತು. ಇಬ್ಬರ ಮಾತು ಕೇಳಿ ಇಡೀ ಸದನವೇ ನಗೆಗಡದಲ್ಲಿ ತೇಲಿದೆ.

    ಇದನ್ನೂ ಓದಿ: ಗನ್​ ತೋರಿಸಿ ಕಾರು ಕದ್ದೊಯ್ದ 8 ವರ್ಷದ ಬಾಲಕ…

    ಚರ್ಚೆಯ ವೇಳೆ ಶರವಣ, ಸರ್ಕಾರ ಬಂದು 2 ತಿಂಗಳು ಆಗುತ್ತಿದೆ. ಹನಿಮೂನ್ ಸಮಯ ಮುಗಿದುಹೋಗಿದೆ ಎಂದು ಹೇಳಿದ್ದಾರೆ. ಈ ವೇಳೆ ಗೃಹ ಸಚಿವ ಪರಮೇಶ್ವರ್, ಅಯ್ಯೋ ಇನ್ನು ಇದೆ ಸ್ವಾಮಿ, ಕನಿಷ್ಠ 6 ತಿಂಗಳಾದರೂ ಹನಿಮೂನ್ ಸಮಯ ಬೇಕು ಎಂದಿದ್ದಾರೆ. ಆಗ ಶರವಣ, ಇನ್ನು 6 ತಿಂಗಳು ಬೇಕಾ? ಆಯ್ತಾ ತಗೊಳ್ಳಿ ಎಂದು ಹೇಳಿದ್ದು ಪರಿಷತ್​ನಲ್ಲಿ ನೆರೆದಿದ್ದ ಎಲ್ಲರನ್ನ ನಗೆಗಡಲಲ್ಲಿ ತೇಲುವಂತೆ ಮಾಡಿದೆ. ಈ ವೇಳೆ ಬಿಜೆಪಿಯ ಡಿ.ಎಸ್.ಅರುಣ್, ಹೊಸಬರಿಗೆ ಹನಿಮೂನ್ ಸಮಯ 6 ತಿಂಗಳು ಇರುತ್ತದೆ. ಆದರೆ ಇವರು 70 ವರ್ಷದಿಂದ ಅಧಿಕಾರ ನಡೆಸಿಕೊಂಡು ಬರುತ್ತಿದ್ದಾರೆ. ಅವರಿಗೆ ಹನಿಮೂನ್ ಸಮಯ ಇರೊಲ್ಲ ಎಂದು ಹೇಳಿದ್ದಾರೆ.

    ಬಳಿಕ ಮಾತನಾಡಿದ ಶರವಣ, ಸಿದ್ದರಾಮಯ್ಯನವರು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದರು. ಕೇಂದ್ರದವರು 5 ಕೆಜಿ ಮತ್ತು ಕಾಂಗ್ರೆಸ್‌ ಸರ್ಕಾರ 10 ಕೆಜಿ ಸೇರಿಸಿ ಒಟ್ಟು 15 ಕೆಜಿ ಕೊಡಬೇಕು. ಮೊದಲು ಅನ್ನಭಾಗ್ಯ ಬಜೆಟ್ ಕೊಟ್ಟಿದ್ದು ದೇವೆಗೌಡರು ಎಂದು ಹೇಳಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಜಮೀರ್ ಅಹಮದ್, ಸದನಕ್ಕೆ ತಪ್ಪು ಸಂದೇಶ ನೀಡಬೇಡಿ. ಸಿದ್ದರಾಮಯ್ಯನವರು ಅನ್ನಭಾಗ್ಯ ಯೋಜನೆ ತಂದಿದ್ದು, ಈ ಬಗ್ಗೆ ಸುಳ್ಳು ಹೇಳಬೇಡಿ ಎಂದು ಹೇಳಿದ್ದಾರೆ.

    ಈ ಚರ್ಚೆ ಕಾವು ಪಡೆಯುತ್ತಿದ್ದಂತಯೇ ಪ್ರಿಯಾಂಕ ಖರ್ಗೆ, ಶರವಣ ಅವರು ಚಿನ್ನದ ಸ್ಪೆಷಲಿಸ್ಟ್, ಸಿದ್ದರಾಮಯ್ಯನವರು ಅನ್ನಭಾಗ್ಯ ಸ್ಪೆಷಲಿಸ್ಟ್. ಅಕ್ಕಿಯನ್ನ ಸಿದ್ದರಾಮಯ್ಯ ನವರು ಕೊಡ್ತಾರೆ ಅದರ ಬಗ್ಗೆ ನಿಮಗೆ ಚಿಂತೆ ಬೇಡ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts