More

    ಸಿಕೆಪಿಯಲ್ಲಿ ಪ್ರವೇಶಾತಿ ಆರಂಭ

    ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತಿನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ 2024-25ನೇ ಸಾಲಿನ ಪ್ರವೇಶಾತಿ ಪ್ರಾರಂಭವಾಗಿದೆ. ಬನಶಂಕರಿ 6ನೇ ಹಂತದ ಡಾ.ವಿಷ್ಣುವರ್ಧನ್ ರಸ್ತೆಯಲ್ಲಿರುವ ಈ ಮಹಾವಿದ್ಯಾಲಯವು ರಾಜರಾಜೇಶ್ವರಿನಗರದಲ್ಲಿ ಕ್ಯಾಂಪಸ್ ಹೊಂದಿದೆ. ನಾಲ್ಕು ವರ್ಷದ ಬ್ಯಾಚುಲರ್ ಆ್ ವಿಶ್ಯುವಲ್ ಆರ್ಟ್ಸ್ (ಬಿವಿಎ) ಪದವಿಗೆ ಪ್ರವೇಶ ಪಡೆಯುವವರು ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಈ ಪದವಿಯಡಿ ಚಿತ್ರಕಲೆ, ಶಿಲ್ಪಕಲೆ, ಪ್ರಿಂಟ್, ಮೇಕಿಂಗ್, ಅನ್ವಯ ಕಲೆ, ಸೆರಾಮಿಕ್ಸ್, ಅನಿಮೇಷನ್ ಹಾಗೂ ಕಲಾ ಇತಿಹಾಸ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶಶಿಧರ್ ರಾವ್ ತಿಳಿಸಿದ್ದಾರೆ. ಅರ್ಜಿಯ ಪ್ರತಿಗಳು www.thecfa.art ನಲ್ಲಿ ದೊರೆಯಲಿವೆ. ವಿವರಕ್ಕೆ ದೂ: 63649 17676 ಸಂಪರ್ಕಿಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts