More

    IND vs WI ಟೆಸ್ಟ್​​​: ಮೊದಲ ದಿನವೇ ಅಬ್ಬರ, ನೂತನ ದಾಖಲೆ ನಿರ್ಮಿಸಿ ಇತಿಹಾಸ ಬರೆದ ಆರ್​​.ಅಶ್ವಿನ್

    ದೆಹಲಿ: ವೆಸ್ಟ್‌ ಇಂಡೀಸ್‌ ವಿರುದ್ಧ ಡೊಮಿನಿಕಾದಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್​​ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ ಭಾರತದ ಬೌಲರ್​  ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

    ಇದನ್ನೂ ಓದಿ: ಫೇಸ್​​ಬುಕ್​ ಸ್ನೇಹಿತನೊಂದಿಗೆ ಪತ್ನಿ ಪರಾರಿ: ಕಿಡ್ನ್ಯಾಪ್​​​ ಎಂದು ಪತಿಯಿಂದ ದೂರು

    ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್‌ಗಳನ್ನು ಪಡೆದ ಭಾರತದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಆರ್​.ಅಶ್ವಿನ್​, ಒಟ್ಟು 702 ವಿಕೆಟ್​​ಗಳನ್ನು ಸದ್ಯ ತಮ್ಮ ಖಾತೆಯಲ್ಲಿ ಹೊಂದಿದ್ದಾರೆ. ಈ ಪಂದ್ಯಕ್ಕೂ ಮುನ್ನ ನೂತನ ಮೈಲಿಗಲ್ಲನ್ನು ತಲುಪಲು ಅಶ್ವಿನ್​​ಗೆ ಮೂರು ವಿಕೆಟ್​​ಗಳ ಅವಶ್ಯಕತೆಯಿತ್ತು. ಆದರೆ ಮೊದಲ ಟೆಸ್ಟ್​​ನ ಮೊದಲ ಇನಿಂಗ್ಸ್​​​ನಲ್ಲಿಯೇ 5 ವಿಕೆಟ್​​ಗಳನ್ನು ಪಡೆದು ಈ ಸಾಧನೆಯನ್ನು ಮಾಡಿದರು. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್​​ ಪಡೆದ ಭಾರತೀಯ ಬೌಲರ್​ಗಳ ಪಟ್ಟಿಯಲ್ಲಿ ಕುಂಬ್ಳೆ ಅಗ್ರಸ್ಥಾನದಲ್ಲಿದ್ದರೆ, ಹರ್ಭಜನ್​ ಸಿಂಗ್​ ಎರಡನೇ ಸ್ಥಾನದಲ್ಲಿದ್ದಾರೆ.

    ಇದನ್ನೂ ಓದಿ: ಗನ್​ ತೋರಿಸಿ ಕಾರು ಕದ್ದೊಯ್ದ 8 ವರ್ಷದ ಬಾಲಕ…

    ಇನ್ನು, ಅಂತಾರಾಷ್ಟ್ರೀಯ ವಿಕೆಟ್​​ಗಳ ಪಟ್ಟಿಯಲ್ಲಿ ಮುತ್ತಯ್ಯ ಮುರಳೀಧರನ್ ಮೊದಲನೇ ಸ್ಥಾನ, ಶೇನ್ ವಾರ್ನ್ ಎರಡನೇ ಸ್ಥಾನದಲ್ಲಿದ್ದರೆ, ಜೇಮ್ಸ್ ಆಂಡರ್ಸನ್, ಕುಂಬ್ಳೆ, ಗ್ಲೆನ್ ಮೆಕ್‌ಗ್ರಾತ್, ವಾಸಿಮ್ ಅಕ್ರಮ್, ಸ್ಟುವರ್ಟ್ ಬ್ರಾಡ್, ಶಾನ್ ಪೊಲಾಕ್, ವಕಾರ್ ಯೂನಿಸ್, ಚಾಮಿಂದಾ ವಾಸ್, ಕರ್ಟ್ನಿ ವಾಲ್ಷ್, ಬ್ರೆಟ್ ಲೀ, ಟಿಮ್ ಸೌಥಿ, ಹರ್ಭಜನ್ ಸಿಂಗ್​​,ಡೇನಿಯಲ್ ವೆಟ್ಟೋರಿ ಕ್ರಮವಾದ ಸ್ಥಾನಗಳಲ್ಲಿದ್ದು ಅಶ್ವಿನ್ 700 ವಿಕೆಟ್ ಪಡೆದ 16ನೇ ಬೌಲರ್ ಎನಿಸಿಕೊಂಡಿದ್ದಾರೆ.(ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts