ಭತ್ತ ಅಥವಾ ರಾಗಿ ತಳಿಗೆ ಜಿ.ಮಾದೇಗೌಡರ ಹೆಸರಿಡಲು ಕೃಷಿ ಸಚಿವ ಚಲುವರಾಯಸ್ವಾಮಿ ಸೂಚನೆ

G Madegowda
Published on

ಮಂಡ್ಯ: ರಾಗಿ ಅಥವಾ ಭತ್ತಕ್ಕೆ ರೈತ ಹೋರಾಟಗಾರ, ಮಾಜಿ ಸಂಸದ ದಿವಂಗತ ಜಿ.ಮಾದೇಗೌಡರ ಹೆಸರನ್ನು ಇಡುವಂತೆ ಕೃಷಿ ಸಚಿವ ಎನ್​. ಚಲುವರಾಯಸ್ವಾಮಿ ಸೂಚನೆ ನೀಡಿದ್ದಾರೆ.

ಕೃಷಿ ಇಲಾಖೆಯ ಕಾರ್ಯದರ್ಶಿ ಹಾಗೂ ಕೃಷಿ ವಿವಿ ಕುಲಪತಿಗೆ ಪತ್ರದ ಮೂಲಕ ಚಲುವರಾಯಸ್ವಾಮಿ ಅವರು ಸೂಚನೆ ನೀಡಿದ್ದಾರೆ.

ಜಿ.ಮಾದೇಗೌಡ ಅವರು ಮಾಜಿ ಸಚವರು ಹಾಗೂ ಮಾಜಿ ಸಂಸದರು. ಕಾವೇರಿ ಹೋರಾಟದ ನೇತೃತ್ವ ವಹಿಸಿ ರೈತಪರವಾಗಿದ್ದ ಧೀಮಂತ ನಾಯಕ. ಅವರ ಹೆಸರನ್ನು ರೈತಾಪಿ ವರ್ಗದಲ್ಲಿ ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಭತ್ತ ಅಥವಾ ರಾಗಿ ತಳಿಗೆ ಅವರ ಹೆಸರನ್ನು ನಾಮಕರಣ ಮಾಡಿ, ವರದಿ ಸಲ್ಲಿಸುವಂತೆ ಚಲುವರಾಯಸ್ವಾಮಿ ಸೂಚಿಸಿದ್ದಾರೆ.

ದಿನೇಶ್ ಗೂಳಿಗೌಡ ಮನವಿ

ಡಾ.ಜಿ.ಮಾದೇಗೌಡರು ಕಳೆದ 60 ವರ್ಷಗಳ ಕಾಲ ಶೈಕ್ಷಣಿಕವಾಗಿ, ರಾಜಕೀಯವಾಗಿ ಹತ್ತು ಹಲವು ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಅವರ ಹೆಸರು ಮುಂದಿನ ಪೀಳಿಗೆಗೆ ಚಿರಸ್ಥಾಯಿಯಾಗಿ ಉಳಿಯಲು ಭತ್ತ ಅಥವಾ ರಾಗಿ ತಳಿಗೆ ಅವರ ಹೆಸರನ್ನು ನಾಮಕರಣ ಮಾಡುವಂತೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು 2023ರ ಜುಲೈ 11ರಂದು ಮನವಿ ಮಾಡಿದ್ದರು. 23ನೇ ವರ್ಷದ ರಾಜ್ಯಮಟ್ಟದ ಜಿ. ಮಾದೇಗೌಡ ಸಮಾಜಸೇವಾ ಮತ್ತು ಸಾವಯವ ಕೃಷಿ ಪ್ರಶಸ್ತಿ ಸಮಾರಂಭದಲ್ಲಿ ವೇದಿಕೆಯಲ್ಲಿದ್ದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ್ದ ಎನ್.‌ ಚಲುವರಾಯಸ್ವಾಮಿ ಅವರು ಈ ಬಗ್ಗೆ ಸಕಾರಾತ್ಮಕ ಸ್ಪಂದನೆ ನೀಡಿದ್ದು, ಹೆಸರನ್ನು ಇಡುವ ಬಗ್ಗೆ ಒಲವು ತೋರಿದ್ದರು. ಇದೀಗ ಹೆಸರಿಡಲು ಕೃಷಿ ಇಲಾಖೆಗೆ ಸೂಚನೆ ನೀಡಿದ್ದಾರೆ.

ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದ ಮಾದೇಗೌಡ ಅವರು 2021ರ ಜುಲೈ 17ರಂದು ಕೆ.ಎಂ.ದೊಡ್ಡಿಯ ಮಾದೇಗೌಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. (ದಿಗ್ವಿಜಯ ನ್ಯೂಸ್​)

Minister Chaluvarayaswamy
Minister Chaluvarayaswamy
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net