VIDEO| ಭೂತದ ಪಕ್ಷಿ ನೋಡಿ ಹೆದರಿದ ಮಹಿಳೆ: ಹತ್ತಿರ ಹೋದವಳಿಗೆ ಕಾದಿತ್ತು ಬಿಗ್​ ಶಾಕ್​..!

Ghost Bird
Published on

ಬೊಗತಾ: ತನ್ನ ವಿಚಿತ್ರ ನೋಟದಿಂದಲೇ ಭೂತದ ಪಕ್ಷಿಯೊಂದು ಮಹಿಳೆಯೊಬ್ಬಳನ್ನು ಬೆಚ್ಚಿ ಬೀಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮರದ ಬೇಲಿಯ ಮೇಲೆ ಕುಳಿತಿದ್ದ ಪಕ್ಷಿಯನ್ನು ಮಹಿಳೆ ಆರಂಭದಲ್ಲಿ ಅದೊಂದು ಮರಣ ತುಣುಕು ಇರಬಹುದೆಂದು ಭಾವಿಸಿದ್ದಳು. ಆದರೆ, ಆಕೆಯ ಊಹೆಯನ್ನು ವಿಚಿತ್ರ ಪಕ್ಷಿ ಮೀರಿದೆ.

ಮರದ ತುಂಡಿನ ಮೇಲೆ ಕಣ್ಣು ಮುಚ್ಚಿ ಕುಳಿತಿದ್ದ ಪಕ್ಷಿಯ ಬಳಿ ಮಹಿಳೆ ವಿಡಿಯೋ ಮಾಡುತ್ತಾ ಹೋಗುತ್ತಾಳೆ. ಈ ವೇಳೆ ಕಣ್ಣು ತೆರೆಯುವ ಪಕ್ಷಿ ಮಹಿಳೆ ಹತ್ತಿರವಿದ್ದರೂ ಹೆದರದೆ, ತಾನೇ ಆಕ್ರಮಣ ಮಾಡುವ ರೀತಿಯಲ್ಲಿ ಅಗಲವಾಗಿ ಬಾಯಿ ತೆಗೆಯುತ್ತದೆ. ಇದನ್ನು ನೋಡಿದ ವಿಡಿಯೋ ರೆಕಾರ್ಡ್​ ಮಾಡುವ ಮಹಿಳೆ ಒಂದು ಕ್ಷಣ ಬೆಚ್ಚಿ ಬೀಳುತ್ತಾಳೆ. ಬಾಯಿ ತೆರೆಯುತ್ತಿದ್ದಂತೆ ಪಕ್ಷಿಯ ನೋಟ ತುಂಬಾ ವಿಕಾರವಾಗಿ ಕಾಣುತ್ತದೆ.

ಇನ್ನು ಆ ಪಕ್ಷಿಯ ಪರಿಚಯದ ಕಡೆ ಬಂದರೆ, ಅದೊಂದು 'ಗ್ರೇಟ್​ ಪೊಟೋ' ಪಕ್ಷಿಯಾಗಿದೆ. ಇದು ರಾತ್ರಿ ಜಾತಿಯ ಪಕ್ಷಿಯಾಗಿದ್ದು, ಭೂತದ ಪಕ್ಷಿಯಂತಲೂ ಕರೆಯಲಾಗುತ್ತದೆ. ದೊಡ್ಡ ಕೀಟಗಳು ಮತ್ತು ಸಣ್ಣ ಕಶೇರುಕಗಳನ್ನು ತಿಂದು ಬದುಕುತ್ತದೆ. ಇಡೀ ರಾತ್ರಿ ಕೂಗುವುದು ಮತ್ತು ನರಳುವ ಕೂಗಿನಿಂದಲೇ ಇದರು ಪ್ರಸಿದ್ಧಿ ಪಡೆದಿದೆ. ಇದು ಸಾಮಾನ್ಯವಾಗಿ ದಕ್ಷಿಣ ಅಮೆರಿಕ ಅರಣ್ಯ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಅಂದಹಾಗೆ ವೈರಲ್​ ವಿಡಿಯೋವನ್ನು ಕೊಲಂಬಿಯಾದ ಚಿಬೊಲೋ ಫಾರ್ಮ್​ನಲ್ಲಿ ರೆಕಾರ್ಡ್​ ಮಾಡಲಾಗಿದೆ. ಆರಂಭದಲ್ಲಿ ಮಹಿಳೆ ಅದೊಂದು ಮರದ ತುಂಡು ಅಂದಿಕೊಂಡಿದ್ದಳಂತೆ. ಬಳಿಕ ಕಣ್ಣುಗಳನ್ನು ತೆರೆಯುವುದನ್ನು ನೋಡಿ ವಿಡಿಯೋ ಮಾಡುತ್ತಾ ಅದರ ಬಳಿಕ ಹೋಗಿದ್ದಾರೆ. ಯಾವಾಗ ಅದು ಬಾಯಿಯನ್ನು ಅಗಲವಾಗಿ ತೆರೆಯಿತೋ ಮಹಿಳೆ ಒಂದು ಕ್ಷಣ ಬೆಚ್ಚಿಬಿದ್ದಿದ್ದಾಳೆ.

ಸದ್ಯ ವಿಡಿಯೋ ವೈರಲ್​ ಆಗಿದ್ದು, ವಿಚಿತ್ರ ಪಕ್ಷಿಯನ್ನು ನೋಡಿ ಒಂದು ಕ್ಷಣ ಭಯಗೊಂಡಿದ್ದಾಗಿ ನೆಟ್ಟಿಗರು ಸಹ ಹೇಳಿಕೊಂಡಿದ್ದಾರೆ. ಹತ್ತಿರ ಹೋದರು ಕೊಂಚವು ಕದಲದೆ ಕುಳಿತಿದ್ದ ಪಕ್ಷಿಯ ಧೈರ್ಯವನ್ನು ಕೆಲವರು ಮೆಚ್ಚಿದ್ದಾರೆ. ಇನ್ನು ಕೆಲವರು ಈ ಪಕ್ಷಿ ತುಂಬಾ ಅಪಾಯಕಾರಿನಾ? ಎಂದು ಪ್ರಶ್ನಿಸಿದ್ದಾರೆ. ಸದ್ಯ ಈ ಪಕ್ಷಿ ಅನೇಕರಲ್ಲಿ ಭಯ ಹುಟ್ಟಿಸಿರುವುದಂತೂ ಸುಳ್ಳಲ್ಲ. (ಏಜೆನ್ಸೀಸ್​) (ವಿಡಿಯೋ ಕೃಪೆ: ಡೈಲಿ ಮಿರರ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net