ಜಿರಳೆ ಸಾಯಿಸಲು ಹೋಗಿ ಆರು ವರ್ಷದ ಬಾಲಕಿಯ ಸಾವಿಗೆ ಕಾರಣನಾದ ಮನೆ ಮಾಲೀಕ!

Ahana
Published on

ಬೆಂಗಳೂರು: ಜಿರಳೆ ಸಾಯಿಸಲು ಹೋಗಿ ಆರು ವರ್ಷದ ಬಾಲಕಿಯೊಬ್ಬಳ ಸಾವಿಗೆ ಮನೆ ಮಾಲೀಕನೊಬ್ಬ ಕಾರಣನಾದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ವಸಂತನಗರದ ಐದನೇ ಅಡ್ಡರಸ್ತೆ ಬಳಿ ಇರುವ ಶಿವಶಂಕರ್ ಎಂಬವರ ಮಾಲೀಕತ್ವದ ಮನೆಯಲ್ಲಿ ಈ ಪ್ರಕರಣ ನಡೆದಿದೆ. ಶಿವಶಂಕರ್ ಅವರಿಗೆ ಸೇರಿದ್ದ ಕಟ್ಟಡದ ಮನೆಯಲ್ಲಿ ವಿನೋದ್ ಎಂಬವರ ಸಂಸಾರ ನೆಲೆಸಿತ್ತು.

ಮನೆಯಲ್ಲಿ ಜಿರಳೆ ಕಾಟ ಎಂದು ಮನೆ ಮಾಲೀಕ ಜಿರಳೆ ಔಷಧ ಸಿಂಪಡಿಸಿದ್ದ. ಆದರೆ ವಾರದ ಹಿಂದೆ ಊರಿಗೆ ಹೋಗಿದ್ದ ವಿನೋದ್, ಸಂಸಾರ ಸಮೇತರಾಗಿ ಮನೆಗೆ ಮರಳಿದ್ದಾಗ ಈ ವಿಚಾರ ಗೊತ್ತಿರದೆ ಹಾಗೇ ಮಲಗಿದ್ದರು. ಹೀಗಾಗಿ ಜಿರಳೆ ಔಷಧದಿಂದ ಉಸಿರುಗಟ್ಟಿ ಅವರ ಪುತ್ರಿ ಆರು ವರ್ಷದ ಅಹನಾ ಸಾವಿಗೀಡಾಗಿದ್ದಾಳೆ. ಇನ್ನು ಅಸ್ವಸ್ಥಗೊಂಡಿರುವ ಮನೆಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಮನೆ ಮಾಲೀಕನ ವಿರುದ್ಧ ಹೈಗ್ರೌಂಡ್ಸ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net