More

    ನಾಳೆ ‘ವಿಜಯಾನಂದ’ ಟೀಸರ್​ ರಿಲೀಸ್; ಆನಂದ್​ ಆಡಿಯೋ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆ

    ಬೆಂಗಳೂರು: ನಾಳೆ, ಆ. 2ರಂದು ವಿಆರ್​ಎಲ್​ ಸಮೂಹದ ಅಧ್ಯಕ್ಷ ಡಾ. ವಿಜಯ ಸಂಕೇಶ್ವರ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ‘ವಿಜಯಾನಂದ’ ಚಿತ್ರತಂಡವು ಒಂದು ಉಡುಗೊರೆ ಕೊಡುವುದಕ್ಕೆ ಸಜ್ಜಾಗಿದೆ. ಇದುವರೆಗೂ ಚಿತ್ರದ ಪಾತ್ರ ಪರಿಚಯ ಟೀಸರ್​ಗಳನ್ನು ಬಿಡುಗಡೆ ಮಾಡಿದ್ದ ಚಿತ್ರತಂಡವು, ನಾಳೆ ಬೆಳಗ್ಗೆ 10.05ಕ್ಕೆ ಆನಂದ್​ ಆಡಿಯೋದ ಯೂಟ್ಯೂಬ್​ ಚಾನೆಲ್​ನಲ್ಲಿ ಚಿತ್ರದ ಮೊದಲ ಟೀಸರ್​ ಬಿಡುಗಡೆ ಮಾಡಲಿದೆ.

    ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ನಿರ್ದೇಶಕಿ ರಿಷಿಕಾ ಶರ್ಮ, ‘ಇದು ನಮ್ಮ ಚಿತ್ರದ ಮೊದಲ ಅಧಿಕೃತ ದೃಶ್ಯಗಳು. ಇದುವರೆಗೂ ಚಿತ್ರದ ಮೂರು ತಲೆಮಾರಿನ ಪಾತ್ರಗಳ ಪರಿಚಯಿಸುವ ಟೀಸರ್​ ಬಿಡುಗಡೆ ಮಾಡಿದ್ದೆವು. ಈಗ ಚಿತ್ರದ ಟೀಸರ್​ ಬಿಡುಗಡೆ ಮಾಡುತ್ತಿದ್ದೇವೆ. ವಿಆರ್​ಎಲ್​ ಸಮೂಹ ಹೇಗೆ ಶುರುವಾಯಿತು, ವಿಜಯ ಸಂಕೇಶ್ವರ ಅವರು ಹೇಗೆ ಈ ಸಂಸ್ಥೆಗೆ ಅಡಿಪಾಯ ಹಾಕಿದರು ಎಂದು ಈ ಟೀಸರ್​ ಮೂಲಕ ತೋರಿಸಲಾಗುತ್ತದೆ’ ಎಂದರು.

    ನಾಳೆ 'ವಿಜಯಾನಂದ' ಟೀಸರ್​ ರಿಲೀಸ್; ಆನಂದ್​ ಆಡಿಯೋ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆ

    ಕಳೆದ ವರ್ಷ ಪ್ರಾರಂಭವಾದ ‘ವಿಜಯಾನಂದ’ ಚಿತ್ರವು 97 ದಿನಗಳ ಚಿತ್ರೀಕರಣ ಮುಗಿಸಿ ಇದೀಗ ಪೋಸ್ಟ್​ ಪ್ರೊಡಕ್ಷನ್​ ಹಂತದಲ್ಲಿದೆ. ಚಿತ್ರದಲ್ಲಿ ಒಂದು ತಾಸಿಗೂ ಹೆಚ್ಚಿನ ಅವಧಿಯ ವಿಎಫ್​ಎಕ್ಸ್​ ಇದ್ದು, ಗ್ರಾಫಿಕ್ಸ್​ ಅಳವಡಿಕೆ ನಡೆಯುತ್ತಿದೆ. ಜತೆಗೆ ಹಿನ್ನೆಲೆ ಸಂಗೀತ ಮತ್ತು ಕಲರಿಂಗ್​ ಕೆಲಸ ಸಹ ಪ್ರಗತಿಯಲ್ಲಿದೆ. ಚಿತ್ರದ ಮೊದಲ ಕಾಪಿ ಬಂದ ನಂತರ ಬಿಡುಗಡೆ ದಿನಾಂಕದ ಕುರಿತು ಅಧಿಕೃತ ತೀರ್ಮಾನ ತೆಗೆದುಕೊಳ್ಳಲಾಗುವುದು ಎನ್ನುತ್ತಾರೆ ರಿಷಿಕಾ.

    ನಾಳೆ 'ವಿಜಯಾನಂದ' ಟೀಸರ್​ ರಿಲೀಸ್; ಆನಂದ್​ ಆಡಿಯೋ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆ

    ವಿಆರ್​​ಎಲ್​ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರು ವಿಆರ್​ಎಲ್ ಫಿಲ್ಮ್​​ ಪ್ರೊಡಕ್ಷನ್ಸ್​ನಡಿ ನಿರ್ಮಿಸುತ್ತಿರುವ ‘ವಿಜಯಾನಂದ’ ಚಿತ್ರದಲ್ಲಿ ನಿಹಾಲ್​, ಅನಂತ್​ ನಾಗ್, ರವಿಚಂದ್ರನ್​, ವಿನಯಾ ಪ್ರಸಾದ್​, ಸಿರಿ ಪ್ರಹ್ಲಾದ್, ಶೈನ್ ಶೆಟ್ಟಿ​ ಮುಂತಾದವರು ನಟಿಸಿದ್ದು, ಗೋಪಿಸುಂದರ್​ ಸಂಗೀತ ಸಂಯೋಜಿಸಿದ್ದಾರೆ.

    ನಾಳೆ 'ವಿಜಯಾನಂದ' ಟೀಸರ್​ ರಿಲೀಸ್; ಆನಂದ್​ ಆಡಿಯೋ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆ

    ಆನಂದ ಸಂಕೇಶ್ವರ ಹುಟ್ಟುಹಬ್ಬಕ್ಕೆ ವಿಜಯಾನಂದ‌ ಚಿತ್ರತಂಡದ ಗಿಫ್ಟ್: ಮೋಷನ್​ ಪೋಸ್ಟರ್ ರಿಲೀಸ್​

    ವಿಜಯಾನಂದ ಮುಹೂರ್ತ ಸಂಭ್ರಮ: ಡಾ. ವಿಜಯ ಸಂಕೇಶ್ವರ ಜೀವನಾಧಾರಿತ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಕ್ಲ್ಯಾಪ್

    PHOTOS| ವಿಜಯಾನಂದ ಸಿನಿಮಾ ಮುಹೂರ್ತ ಕಾರ್ಯಕ್ರಮದ ಕಲರ್​ಫುಲ್​ ಫೋಟೋ ಝಲಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts