blank

ನೀರು ಹರಿವಿಗೆ ತಡೆಯಾಗಿದ್ದ ತಾತ್ಕಾಲಿಕ ರಸ್ತೆ ತೆರವು

blank

ಬ್ರಹ್ಮಾವರ: ಬಾರಕೂರು ಬಳಿಯ ಬೆಣ್ಣೆಕುದ್ರುವಿನಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿ ಹಿನ್ನೆಲೆ ನದಿಗೆ ಅಡ್ಡವಾಗಿ ನಿರ್ಮಿಸಿದ್ದ ಬದಲಿ ರಸ್ತೆಯನ್ನು ತೆರವುಗೊಳಿಸದ ಕಾರಣ ಮಳೆಯಿಂದ ನೀರಿನ ಹರಿವು ಹೆಚ್ಚಾಗಿ ಅಪಾಯಕಾರಿಯಾಗಿತ್ತು. ಸಾರ್ವಜನಿಕರು ನೀಡಿದ ಮಾಹಿತಿಯಂತೆ ಬ್ರಹ್ಮಾವರ ತಾಲೂಕು ತಹಸೀಲ್ದಾರ್ ಶ್ರೀಕಾಂತ್ ಹೆಗ್ಡೆ ಸ್ಥಳ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಜಿಲ್ಲಾಧಿಕಾರಿಗಳ ಮತ್ತು ಗುತ್ತಿಗೆದಾರರ ಗಮನಕ್ಕೆ ತಂದು ಮಂಗಳವಾರ ಸಂಜೆ ವೇಳೆಗೆ, ನದಿ ನೀರಿನ ಹರವಿಗೆ ತಡೆಯಾಗಿದ್ದ ತಾತ್ಕಾಲಿಕ ರಸ್ತೆಯ ಒಂದು ಭಾಗವನ್ನು ತೆರವು ಮಾಡಿ ನೀರು ಹರಿಯುವಂತೆ ಮಾಡಲಾಗಿದೆ.

ಅಪಾಯ ಆಹ್ವಾನಿಸುವಂತಿತ್ತು: ಬಾರಕೂರಿನಿಂದ ಬೆಣ್ಣೆಕುದ್ರು ಮೂಲಕ ಪಾಂಡೇಶ್ವರದಿಂದ ಸಾಸ್ತಾನ ರಾಷ್ಟ್ರೀಯ ಹೆದ್ದಾರಿ 66 ಸಂಪರ್ಕ ಕಲ್ಪಿಸಲು ವಾಡಲಾದ ರಸ್ತೆಯಲ್ಲಿ ಕಿರು ಸೇತುವೆ ಇದ್ದು ಇದರಲ್ಲಿ ಅಧಿಕ ಭಾರದ ಲಾರಿಗಳು ಸಂಚರಿಸದಂತೆ ನಿಯಮದ ಪ್ರಕಾರ ಗರ್ಡರ್ ಅಳವಡಿಸಲಾಗಿತ್ತು.

ಅಣೆಕಟ್ಟು ನಿರ್ವಾಣದ ಕಾಮಗಾರಿಯ ಸಾಮಗ್ರಿ ಹಾಗೂ ಸಲಕರಣೆ ಸಾಗಿಸಲು ಕಾಮಗಾರಿಯ ಗುತ್ತಿಗೆದಾದರು ತಾತ್ಕಾಲಿಕವಾಗಿ ಸೇತುವೆಯಲ್ಲಿ ಬದಲಿ ರಸ್ತೆ ಮಾಡಿಕೊಂಡಿದ್ದರು. ಸೇತುವೆಗೆ ಅಡ್ಡಲಾಗಿ ಮಾಡಲಾದ ರಸ್ತೆಯನ್ನು ತೆರವು ಮಾಡದೆ ಇರುವುದರಿಂದ ಸೀತಾನದಿಯ ಕವಲು ನದಿ ಮತ್ತು ಬನ್ನಾಡಿ ಭಾಗದಿಂದ ಬರುವ ನದಿ ನೀರು ಈಗಿನ ಮಟ್ಟಕ್ಕಿಂತ ಹೆಚ್ಚು ಹರಿದರೆ ಬೆಣ್ಣೆಕುದ್ರು ಮತ್ತು ನದಿಯ ತಿರುವಿನ ಜಾಗಕ್ಕೆ ನೀರು ನುಗ್ಗಿ ಬಂದಲ್ಲಿ ಕುಲ ಮಹಾಸ್ತ್ರೀ ಅಮ್ಮನವರ ದೇವಸ್ಥಾನ ಮತ್ತು ಮುನ್ನೂರಕ್ಕೂ ಅಧಿಕ ಮನೆಗಳು ಮತ್ತು ಪಾಂಡೇಶ್ವರ ಭಾಗದ ಕೃಷಿ ಭೂಮಿಯಲ್ಲಿ ಕೃತಕ ನೆರೆ ಸೃಷ್ಟಿಯಾಗಿ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದರು.

ನಂದಿಕೂರು ಕೈಗಾರಿಕಾ ಘಟಕದ ನೀರಿನ ಮಾದರಿ ಸಂಗ್ರಹ

ದುಡ್ಡು ಕೊಟ್ಟಿಲ್ಲವೆಂದು ಅಮ್ಮನ ಹತ್ಯೆ ಮಾಡಿದ ಮಗ..!

 

Share This Article

ಯಾರಾದರೂ ನಿಮ್ಮ ಮುಂದೆ ಹಠಾತ್​ ಕುಸಿದುಬಿದ್ರೆ ಏನು ಮಾಡಬೇಕು ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ… Suddenly Collapsed

Suddenly Collapsed : ನೀವು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾರಾದರು ಒಬ್ಬರು ಇದ್ದಕ್ಕಿದ್ದಂತೆ ಕುಸಿದು ಬೀಳುವುದನ್ನು…

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…