

ಪಡುಬಿದ್ರಿ: ನಂದಿಕೂರು ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿತವಾಗಿರುವ ಬಯೋ ಡೀಸೆಲ್, ಪಾಮ್ಆಯಿಲ್ ಮತ್ತು ಗ್ಲಿಸರಿನ್ ಉತ್ಪಾದನಾ ಟಕದಿಂದ ಪರಿಸರ ವಾಲಿನ್ಯವಾಗುತ್ತಿರುವ ಬಗ್ಗೆ ಸ್ಥಳೀಯರಿಂದ ಬಂದ ದೂರಿನಂತೆ ಜಿಲ್ಲಾ ವಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಬುಧವಾರ ಸ್ಥಳಕ್ಕೆ ಭೇಟಿ ನೀಡಿ, ಪರೀಕ್ಷೆಗಾಗಿ ನೀರಿನ ಮಾದರಿ ಸಂಗ್ರಹಿಸಿದರು. ಟಕ ಹೊರಭಾಗದಿಂದ ನಂದಿಕೂರು ದೇವಳ ಪ್ರದೇಶದತ್ತ ಹರಿಯುತ್ತಿರುವ ತೋಡಿನ ನೀರು ಹಾಗೂ ಪಾಚಿ ಸಂಗ್ರಹಿಸಿದ್ದು, ಸುರತ್ಕಲ್ಎನ್ಐಟಿಕೆಗೆ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ವಾಲಿನ್ಯ ನಿಯಂತ್ರಣ ಮಂಡಳಿ ಸಹಾಯಕ ಪರಿಸರ ಅಧಿಕಾರಿ ಪ್ರಮೀಳಾ ತಿಳಿಸಿದ್ದಾರೆ.
2024ರ ಅಕ್ಟೋಬರ್ ತಿಂಗಳಲ್ಲಿ ರಾಜ್ಯ ಪರಿಸರ ನಿಯಂತ್ರಣ ಮಂಡಳಿ ಅಧ್ಯಕ್ಷರು ಕಂಪನಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಈ ವೇಳೆ ಪರಿಸರಕ್ಕೆ ಹಾನಿಯಾಗುವಂತಹ ಅಂಶಗಳು ಕಂಡುಬಂದ ಹಿನ್ನೆಲೆಯಲ್ಲಿ ಪರಿಸರ ನಿಯಂತ್ರಣ ಮಂಡಳಿಯ ಉಡುಪಿ ಪ್ರಾದೇಶಿಕ ಕಚೇರಿ ಮೂಲಕ ಕಂಪನಿಗೆ ಕಾರಣ ಕೇಳಿ ಜನವರಿ 30ರಂದು ಎಚ್ಚರಿಕೆ ನೋಟಿಸ್ ನೀಡಲಾಗಿತ್ತು. ಏಳು ದಿನಗಳೊಳಗಾಗಿ ನೋಟಿಸ್ಗೆ ಉತ್ತರಿಸದಿದ್ದಲ್ಲಿ ಕಂಪನಿಯ ಉತ್ಪಾದನಾ ಆದೇಶ ರದ್ದುಗೊಳಿಸಲು ಯಾಕೆ ಕ್ರಮ ಕೈಗೊಳ್ಳಬಾರದು, ಸೂಕ್ತ ಪರಿಹಾರ ಮೊತ್ತವನ್ನು ರಾಷ್ಟ್ರೀಯ ಹಸಿರು ಟ್ರಿಬ್ಯೂನಲ್ ನಿರ್ದೇಶನದಂತೆ ಯಾಕೆ ವಸೂಲಿ ವಾಡಬಾರದು ಹಾಗೂ ಕಂಪನಿ ವಿರುದ್ಧ ಕಾನೂನು ಕ್ರಮ ಯಾಕೆ ಕೈಗೊಳ್ಳಬಾರದು ಎಂದು ನೋಟಿಸ್ನಲ್ಲಿ ತಿಳಿಸಲಾಗಿತ್ತು. ನೋಟಿಸ್ ನೀಡಿದ ಬಳಿಕ ರಿಫೈನಿಂಗ್ ಕಾರ್ಯ ನಿಲ್ಲಿಸಿದ್ದ ಕಾರಣ ಪರಿಸರದಲ್ಲಿ ದುರ್ವಾಸನೆ ಬರುತ್ತಿರಲಿಲ್ಲ. ಆದರೆ ಇದೀಗ ಪರಿಸರ ಮತ್ತೆ ದುರ್ವಾಸನೆ ಬೀರುತ್ತಿದ್ದು, ಪರಿಸರ ಮಾಲಿನ್ಯವಾಗುತ್ತಿದೆ. ರಿಫೈನಿಂಗ್ ನಿಲ್ಲಿಸಿದ್ದರೂ ದುರ್ವಾಸನೆಗೆ ಕಾರಣ ಏನೆಂಬುದನ್ನು ಪರಿಸರ ಅಧಿಕಾರಿಗಳು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮತ್ತೆ ಹೋರಾಟ ನಡೆಸಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಸ್ಥಳೀಯರಾದ ಸತೀಶ್ ದೇವಾಡಿಗ, ಸತೀಶ್ ಶೆಟ್ಟಿ ಬೆಜ್ಜಬೆಟ್ಟು, ಅರುಣ್ ಶೆಟ್ಟಿ, ನಾಗೇಶ್ ರಾವ್, ಸಂದೀಪ್ ಪಲಿವಾರು ಮತ್ತಿತರರಿದ್ದರು.
ಪರಿಸರವೆಲ್ಲ ದುರ್ವಾಸನೆ ಬೀರುತ್ತಿದ್ದು, ಹಿಂದೆಯೂ ಸಾರ್ವಜನಿಕರ ದೂರಿನಂತೆ ವಾದರಿ ಸಂಗ್ರಹಿಸಿ ಪರೀಕ್ಷಿಸಲಾಗಿತ್ತು. ವರದಿಯಂತೆ ಟಕದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ ಕಾರಣ ಮತ್ತೆ ಸಮಸ್ಯೆ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ಅಧಿಕಾರಿ ಮುಂದೆ ಅಸವಾಧಾನ ವ್ಯಕ್ತಪಡಿಸಿದರು.