ರಸ್ತೆ ಗುಂಡಿಗಳಿಗೆ ತಾತ್ಕಾಲಿಕ ಮುಕ್ತಿ

Kkd-Road-1
Published on

ಕೊಕ್ಕಡ: ಕೊಕ್ಕಡ, ನೆಲ್ಯಾಡಿ, ಪಟ್ರಮೆ, ಹಳ್ಳಿಂಗೇರಿ ಮಾಯಿಲ ಕೋಟೆಗೆ ಸಂಪರ್ಕಿಸುವ ಕೊಕ್ಕಡದ ಪ್ರಮುಖ ರಸ್ತೆ ಹೊಂಡ ಗುಂಡಿಗಳಿಂದ ಕೂಡಿದ್ದು, ಸ್ಥಳಿಯ ರಿಕ್ಷಾ ಚಾಲಕರು ಶ್ರಮದಾನ ಮಾಡಿ ಹೊಂಡ ಮುಚ್ಚಿದರು.

ಸಂಚಾರ ದಟ್ಟಣೆ ಇರುವ ಈ ರಸ್ತೆಯ ಅಗಲ ಕೂಡ ಕಡಿಮೆ ಇದ್ದು ದಿನನಿತ್ಯ ಪ್ರಯಾಣಿಸುವ ರಿಾ ಚಾಲಕರಿಗೆ ದೊಡ್ಡ ಸಮಸ್ಯೆಯಾಗಿತ್ತು. ಇದನ್ನು ಮನಗಂಡ ಕೊಕ್ಕಡದ ರಿಾ ಚಾಲಕರಾದ ಸಂದೀಪ್​, ಉಮೇಶ್​, ಸಚಿನ್​, ಟಿ.ಎಲ್​.ಪ್ರಮೋದ್​ ಬದಿಯಡ್ಕ, ಚಂದ್ರ, ಜಿತೇಶ್​, ಕೃಷ್ಣ ಮುಂತಾದವರು ಸೇರಿ ಕೆಂಪು ಕಲ್ಲು ಸಂಗ್ರಹಿಸಿ ಪಿಕಪ್​ ವಾಹನದ ಮೂಲಕ ತಂದು ಹೊಂಡ&ಗುಂಡಿಗಳನ್ನು ಮುಚ್ಚಿ ರಸ್ತೆಗೆ ತಾತ್ಕಾಲಿಕ ಪರಿಹಾರ ಕಂಡುಕೊಂಡಿದ್ದಾರೆ. ಪಿಕಪ್​ ಮಾಲೀಕ ಸತೀಶ್​ ಬದಿಯಡ್ಕ ಸಹಕಾರ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net