ಕೆಪಿಟಿ ಜಂಕ್ಷನ್ ಬಳಿ ಬೈಕ್ ಸವಾರ ಪವಾಡ ಸದೃಶ ಪಾರು

accident-15
Published on

ಮಂಗಳೂರು: ಕೆಪಿಟಿ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಅಶೋಕ್ ಘಟನೆಯಲ್ಲಿ ಗಾಯಗೊಂಡವರು. ಲಾರಿ ಚಾಲಕನ ಭಾರೀ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ. ಕೆಪಿಟಿ ಬಳಿ ಪೆಟ್ರೋಲ್ ಪಂಪ್ ಒಂದಕ್ಕೆ ಬೈಕ್ ಮತ್ತು ಲಾರಿ ಒಟ್ಟಿಗೆ ಪ್ರವೇಶಿಸಿದ್ದು, ಲಾರಿ ಚಾಲಕ ಏಕಾಏಕಿ ಲಾರಿಯನ್ನು ಎಡಕ್ಕೆ ತಿರುಗಿಸಿದ ಪರಿಣಾಮ ಬೈಕ್‌ಗೆ ಲಾರಿ ಢಿಕ್ಕಿ ಯಾಗಿದೆ.
ಸವಾರ ಅಶೋಕ್ ಲಾರಿಯ ಹಿಂದಿನ ಮತ್ತು ಮುಂದಿನ ಚಕ್ರಗಳ ನಡುವೆ ಬಿದ್ದಿದ್ದರಿಂದ ಪ್ರಾಣಾಪಾಯವಾಗಿಲ್ಲ. ಕೈಗೆ ಗಂಭೀರ ಗಾಯವಾಗಿದ್ದು ಶಸಚಿಕಿತ್ಸೆ ನಡೆದಿದೆ. ಘಟನೆಯ ದೃಶ್ಯಾವಳಿಗಳು ಪಂಪ್‌ನ ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಘಟನೆ ಸೆ.20ರಂದು ನಡೆದಿದೆ
ಎಂದು ಕದ್ರಿ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net