More

    ಅಸಭ್ಯ ಬಟ್ಟೆ ಧರಿಸಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪ್ರವೇಶ ನಿಷಿದ್ಧ

    ಮಹಾರಾಷ್ಟ್ರ: ಕೆಲವರು ತಮ್ಮ ಆಸೆಗಳ ಈಡೇರಿಕೆಗೆ, ದೇವರ ಆಶೀರ್ವಾದಕ್ಕೆ ಮನಶಾಂತಿಗಾಗಿ ದೇವಸ್ಥಾನಗಳಿಗೆ ಹೋಗುತ್ತಾರೆ. ಆದರೆ, ದೇವಸ್ಥಾನಕ್ಕೆ ಹೋಗುವ ಮುನ್ನ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು.

    ಒಸ್ಮಾನಾಬಾದ್ ಜಿಲ್ಲೆಯ ತುಳಜಾ ಭವಾನಿ ದೇವಸ್ಥಾನದ ಆಡಳಿತವು ಅರ್ಧ ಪ್ಯಾಂಟ್ ಅಥವಾ “ಅಸಭ್ಯ” ಬಟ್ಟೆಗಳನ್ನು ಧರಿಸಿ ದೇವಾಲಯಕ್ಕೆ ಬರುವ ಭಕ್ತರ ಪ್ರವೇಶವನ್ನು ನಿಷೇಧಿಸಿದೆ ಎಂದು ಆಡಳಿತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಒಸ್ಮಾನಾಬಾದ್‌ನ ತುಳಜಾಪುರದಲ್ಲಿರುವ ತುಳಜಾ ಭವಾನಿ ದೇವಿಯ ಪ್ರಸಿದ್ಧ ದೇವಾಲಯಕ್ಕೆ ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ. ಧಾರ್ಮಿಕ ಸ್ಥಳದ ಪಾವಿತ್ರ್ಯತೆ ಕಾಪಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

    ಇದನ್ನೂ ಓದಿ: ಸಚಿವ ಸ್ಥಾನ ನೀಡಲು ಕೊಡಗು ಪಿಗ್ಮಿ ಸಂಗ್ರಹಗಾರರ ಸಂಘ ಒತ್ತಾಯ

    ದೇವಸ್ಥಾನದ ಆಡಳಿತ ಮಂಡಳಿಯು ಮರಾಠಿ ಭಾಷೆಯಲ್ಲಿ ಬೋರ್ಡ್‌ಗಳನ್ನು ಹಾಕಿದ್ದು, “ಅಸಭ್ಯ ಉಡುಗೆ, ಮತ್ತು ದೇಹದ ಭಾಗಗಳನ್ನು ಪ್ರದರ್ಶಿಸುವುದು, ಅರ್ಧ ಪ್ಯಾಂಟ್ ಮತ್ತು ಶಾರ್ಟ್ಸ್ ಧರಿಸಿದವರಿಗೆ ದೇವಸ್ಥಾನ ಪ್ರವೇಶಕ್ಕೆ ಅನುಮತಿಸಲಾಗುವುದಿಲ್ಲ. ದಯವಿಟ್ಟು ಭಾರತೀಯ ಸಂಸ್ಕೃತಿಯನ್ನು ನೆನಪಿನಲ್ಲಿಡಿ” ಎಂದು ಹೇಳಲಾಗಿದೆ.

    ದೇವಾಲಯದ ಆಡಳಿತ ಮಂಡಳಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ನಾಗೇಶ್ ಶಿತೋಲೆ ಅವರು ಮಾತನಾಡಿ, “ಈ ಬೋರ್ಡ್‌ಗಳನ್ನು ಇಂದು ಪ್ರದರ್ಶಿಸಲಾಗಿದೆ. ನಾವು ಭಕ್ತಿಯಿಂದ ದೇವಸ್ಥಾನಕ್ಕೆ ಹೋಗುತ್ತೇವೆ. ಹಾಗಾಗಿ ಅದರ ಪಾವಿತ್ರ್ಯತೆ ಕಾಪಾಡಲು ತುಳಜಾ ಭವಾನಿ ದೇವಸ್ಥಾನದ ಪ್ರವೇಶಕ್ಕೆ ಬೋರ್ಡ್‌ಗಳನ್ನು ಹಾಕಲಾಗಿದೆ. ಇಂತಹ ನಿಯಮಗಳು ಈಗಾಗಲೇ ದೇಶದಾದ್ಯಂತ ಅನೇಕ ದೇವಾಲಯಗಳಲ್ಲಿ ಅಸ್ತಿತ್ವದಲ್ಲಿವೆ.ಈ ನಿರ್ಧಾರವು ನಮ್ಮ ಸಂಸ್ಕೃತಿಯನ್ನು ಉಳಿಸಲು ಸಹಾಯ ಮಾಡುತ್ತದೆ” ಎಂದು ತಿಳಿಸಿದ್ದಾರೆ

    ಪ್ರತಿನಿತ್ಯ ಒಂದೊಂದು ಕೋಳಿ ಮೊಟ್ಟೆ ತಿಂತೀರಾ? ಹಾಗಿದ್ರೆ ಈ ಸುದ್ದಿ ಓದಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts