More

    ಪ್ರತಿನಿತ್ಯ ಒಂದೊಂದು ಕೋಳಿ ಮೊಟ್ಟೆ ತಿಂತೀರಾ? ಹಾಗಿದ್ರೆ ಈ ಸುದ್ದಿ ಓದಿ…

    ಬೆಂಗಳೂರು: ಸಾಮಾನ್ಯವಾಗಿ ಆರೋಗ್ಯಕರವಾಗಿರಲು ಪೌಷ್ಟಿಕಾಂಶ-ಭರಿತ ಆಹಾರವನ್ನು ತಿನ್ನುವುದು ಮುಖ್ಯವಾಗಿದೆ. ದೇಹದಲ್ಲಿನ ಪ್ರೋಟೀನ್ ಕೊರತೆಯನ್ನು ಪೂರೈಸಲು ಅನೇಕರು ಹಾಲು, ಮೊಸರು ಮತ್ತು  ಡೈರಿ ಉತ್ಪನ್ನಗಳನ್ನು ಸೇವಿಸುತ್ತಾರೆ. ಇವುಗಳ ಬದಲಾಗಿ ದಿನಕ್ಕೆ ಒಂದು ಮೊಟ್ಟೆ ಸೀವಿಸುವುದನ್ನು ರೂಢಿ ಮಾಡಿಕೊಂಡರೆ ಉತ್ತಮವಾದ ಆರೋಗ್ಯ ನಿಮ್ಮದಾಗಿಸಿ ಕೊಳ್ಳಬಹುದಾಗಿದೆ.

    ಮೊಟ್ಟೆಯನ್ನ ಬೇಯಿಸಿಯೋ, ಹಾಫ್ ಬಾಯಲ್ ಮಾಡೋ, ಎಗ್ ಬುರ್ಜಿ ಮಾಡೋ ಅಥವಾ ಸಾರೋ, ಪಲ್ಯ ಹೀಗೆ ತರಾವರಿ ಮೊಟ್ಟೆ ಖಾದ್ಯ ಮಾಡ್ತಿವಿ. ಇದು ರುಚಿಕರ ಅಷ್ಟೇ ಅಲ್ಲ ಶಕ್ತಿದಾಯಕವೂ ಹೌದಾಗಿದೆ. ಆದರೆ ಮೊಟ್ಟೆ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ.

    ಮೊಟ್ಟೆಗಳನ್ನು ತಿನ್ನಲು ಉತ್ತಮ ಸಮಯ ಅಂದ್ರೆ ಬೆಳಗಿನ ಉಪಾಹಾರ. ಇದನ್ನು ಬೆಳಗ್ಗೆ ತಿಂದರೆ ಹೆಚ್ಚಿನ ಕೊಬ್ಬು ಮತ್ತು ಪ್ರೋಟೀನ್ ಸಂಯೋಜನೆಯು ದಿನವಿಡೀ ನಿಮ್ಮನ್ನು ಶಕ್ತಿಯುತವಾಗಿ ಇರಿಸುತ್ತದೆ. ಹಾಗೂ ಚಯಾಪಚಯ ಹೆಚ್ಚಿಸಲು ಸಹಾಯ ಮಾಡುತ್ತದೆ. ಆರೋಗ್ಯವಂತ ವ್ಯಕ್ತಿಯು ಬೆಳಗಿನ ಉಪಾಹಾರದಲ್ಲಿ 2 ಮೊಟ್ಟೆ ತಿನ್ನುವುದು ಉತ್ತಮ.

    ಮೊಟ್ಟೆಯು ತೂಕವನ್ನು ಕಡಿಮೆ ಮಾಡಲು ಸಹಾಯಕ. ಇದರಲ್ಲಿ ಪ್ರೋಟೀನ್ ಇದೆ. ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರಿಸುತ್ತದೆ. ಇದು ಸುಮಾರು 80-100 ಕ್ಯಾಲೋರಿಗಳಷ್ಟು ಚಯಾಪಚಯ ಹೆಚ್ಚಿಸುತ್ತದೆ. ಮೊಟ್ಟೆಗಳು ತೂಕ ನಷ್ಟ ಉತ್ತೇಜಿಸುತ್ತವೆ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತವೆ.

    ಮಧುಮೇಹಿಗಳಿಗೆ ಲಾಭಕಾರಿ. ಇದು ರಕ್ತದ ಸಕ್ಕರೆ ಪ್ರಮಾಣ ಹೆಚ್ಚಿಸುವುದಿಲ್ಲ. ಮಧುಮೇಹಿಗಳಿಗೆ ಮೊಟ್ಟೆ ಅತ್ಯುತ್ತಮ ಆಹಾರ ಆಗಿದೆ.

    ಮೊಟ್ಟೆಯಲ್ಲಿರುವ ಪ್ರೋಟಿನ್​ ಅಂಶವು ದೇಹಕ್ಕೆ ಬೇಕಾದ ಪೋಷಕಾಂಶವನ್ನು ಒದಗಿಸುತ್ತದೆ. ಹೃದಯದ ಆರೋಗ್ಯಕ್ಕೆ ಒಳ್ಳೆಯ ಕೊಲೆಸ್ಟ್ರಾಲ್‌ ಅವಶ್ಯಕ. ಅದು ಮೊಟ್ಟೆಯಲ್ಲಿದೆ.

    ಮೊಟ್ಟೆ ಸೇವನೆಯಿಂದ ಪುರುಷರಿಗೆ ಅನೇಕ ಪ್ರಯೋಜನಗಳು ಸಿಗಲಿವೆ ಪ್ರತಿದಿನ ಬೆಳಿಗ್ಗೆ ಒಂದು ಮೊಟ್ಟೆಯನ್ನು ತಿನ್ನುವುದರಿಂದ ಪುರುಷರ ದೈಹಿಕವಾಗಿ ಸದೃಢರಾಗುತ್ತಾರೆ.

    ಮೊಟ್ಟೆಯಲ್ಲಿರುವ ಕೋಲಿನ್ ಎಂಬ ಪೋಷಕಾಂಶವು ನಮ್ಮ ಮಿದುಳನ್ನು ಸದೃಢವಾಗಿಡಲು ಸಹಾಯ ಮಾಡುತ್ತದೆ.

    ಮೊಟ್ಟೆಯನ್ನು ಬೇಯಿಸಿ ತಿನ್ನಬೇಕು. ಇದು ಆರೋಗ್ಯಕರ ಮತ್ತು ರುಚಿಕರವೂ ಆಗಿದೆ. ಬೇಯಿಸಿದ ಮೊಟ್ಟೆಗಳು ಎಲ್ಲಾ ಅಗತ್ಯ ಪೋಷಕಾಂಶಗಳು, ಪ್ರೋಟೀನ್‌ಗಳು, ಆರೋಗ್ಯಕರ ಕೊಬ್ಬುಗಳಿಂದ ತುಂಬಿರುತ್ತವೆ. ಬೇಯಿಸಿದ ಮೊಟ್ಟೆಗಳನ್ನು ನಿಯಮಿತವಾಗಿ ತಿನ್ನುವುದರಿಂದ ದೈಹಿಕ ಮಾತ್ರವಲ್ಲದೆ ಮಾನಸಿಕ ಆರೋಗ್ಯವೂ ಉತ್ತಮವಾಗುತ್ತದೆ.

    ಸಿದ್ದರಾಮಯ್ಯ ಮತ್ತೆ ಸಿಎಂ; ಬಡವರ ಪಾಲಿಗೆ ವರದಾನವಾಗಿದ್ದ ಇಂದಿರಾ ಕ್ಯಾಂಟೀನ್​ಗೆ ಸಿಗಲಿದ್ಯಾ ಮರುಜೀವ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts