ತೆಲುಗು ಹಾಸ್ಯ ನಟ ಫಿಶ್ ವೆಂಕಟ್ ನಿಧನ | Passes Away

Untitled design (26)
Published on

Passes Away: ಹಾಸ್ಯ ನಟನಾಗಿ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಫಿಶ್ ವೆಂಕಟ್ ​​(54) ಅನಾರೋಗ್ಯ ಹಿನ್ನೆಲೆ ಶನಿವಾರ ಆಸ್ಪತ್ರೆಯಲ್ಲಿ ನಿಧನರಾದರು.

ಫಿಶ್ ವೆಂಕಟ್, ಮೂತ್ರಪಿಂಡ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು. ಎರಡೂ ಮೂತ್ರಪಿಂಡಗಳು ವಿಫಲವಾದ ಹಿನ್ನೆಲೆ ವೆಂಕಟ್ ಕೆಲ ದಿನಗಳಿಂದ ಡಯಾಲಿಸಿಸ್‌ಗೆ ಒಳಗಾಗಿದ್ದರು. ಚಿಕಿತ್ಸೆ ಪಡೆದ ನಂತರ ಇತ್ತೀಚೆಗೆ ಚೇತರಿಸಿಕೊಂಡಿದ್ದರು. ಆದರೆ, ಇತ್ತೀಚೆಗೆ ಅವರ ಸ್ಥಿತಿ ಹದಗೆಟ್ಟಿದ್ದು, ಇದೀಗ ಚಿಕಿತ್ಸೆಗೆ ಸ್ಪಂದಿಸದೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಹಲವು ಚಿತ್ರಗಳಲ್ಲಿ ಖಳನಾಯಕ, ಹಾಸ್ಯನಟನಾಗಿ ನಟಿಸುವ ಮೂಲಕ ಟಾಲಿವುಡ್ ತಾರೆಯರನ್ನು ನಗಿಸಿದ್ದ ಫಿಶ್ ವೆಂಕಟ್, ಆನಾರೋಗ್ಯ ಹಿನ್ನೆಲೆ ಸಿನಿಮಾದಿಂದ ದೂರ ಉಳಿದಿದ್ದರು. ತೆಲುಗು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net