

ಮೇಷ: ಮನೆಯಲ್ಲಿ ಕಿರಿಕಿರಿಯಾಗಬಹುದು. ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಅನಿರೀಕ್ಷಿತವಾಗಿ ಬಂಧುಗಳ ಸಹಾಯ ಸಿಗಲಿದೆ. ಶುಭಸಂಖ್ಯೆ: 9
ವೃಷಭ: ಕೃಷಿಕರಿಗೆ ವಿಶೇಷ ಲಾಭ. ರಕ್ಷಣಾ ಕ್ಷೇತ್ರದಲ್ಲಿ ಇರುವವರಿಗೆ ಗೌರವ. ದೂರ ಪ್ರಯಾಣ ಸಾಧ್ಯ. ಇಷ್ಟದೇವರ ಪ್ರಾರ್ಥನೆ ಮಾಡಿ. ಶುಭಸಂಖ್ಯೆ:1
ಮಿಥುನ: ಮಕ್ಕಳಿಂದ ಸಂತೋಷವಾಗಲಿದೆ. ಹಿರಿಯರ ಆರೋಗ್ಯ ಗಮನಿಸಿ. ಮಂಗಳ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಶುಭಸಂಖ್ಯೆ:5
ಕಟಕ: ಬಂಧುಮಿತ್ರರ ಭೇಟಿಯಾಗಲಿದೆ. ಕೋಪದಿಂದ ಸಂಬಂಧಗಳಲ್ಲಿ ಬಿರುಕು ಉಂಟಾಗಬಹುದು. ಕುಟುಂಬದಲ್ಲಿ ಸಂತಸ. ಶುಭಸಂಖ್ಯೆ: 8
ಸಿಂಹ: ದೈಹಿಕ ಅಸಮರ್ಥತೆ ಕಾಡಬಹುದು. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಎದುರಿಸಬೇಕಾಗುವುದು. ಅಧ್ಯಾತ್ಮದ ಕಡೆ ಒಲವು. ಶುಭಸಂಖ್ಯೆ:2
ಕನ್ಯಾ: ಕೀರ್ತಿ ಸಂಪಾದನೆಯಾಗಲಿದೆ. ಜನಮನ್ನಣೆ ದೊರೆತು ಸಂತಸಪಡುವಿರಿ. ಸ್ವಸಾಮರ್ಥ್ಯದಿಂದ ಹೆಚ್ಚಿನ ಧನ ಸಂಪಾದನೆ. ಶುಭಸಂಖ್ಯೆ:7
ತುಲಾ: ಸಹೋದ್ಯೋಗಿಗಳಿಂದ ಸಹಕಾರ ದೊರೆಯಲಿದೆ. ಗಣ್ಯ ವ್ಯಕ್ತಿಗಳ ಭೇಟಿ. ಅನಾರೋಗ್ಯದಿಂದ ಚೇತರಿಕೆ ಕಾಣುವಿರಿ. ಶುಭಸಂಖ್ಯೆ: 4
ವೃಶ್ಚಿಕ: ದಾಂಪತ್ಯದಲ್ಲಿ ಅಸಮಾಧಾನ ಉಂಟಾಗಬಹುದು. ಪರರಿಂದ ವಂಚನೆಯಾಗುವ ಸಾಧ್ಯತೆಯಿದೆ. ಹಣಕಾಸಿನ ಕೊರತೆ. ಶುಭಸಂಖ್ಯೆ: 9
ಧನುಸ್ಸು: ಆಸ್ತಿಯ ವಿವಾದ ತಲೆದೋರುವುದು. ಗುರುಹಿರಿಯರಿಂದ ಮಾರ್ಗದರ್ಶನ ಪಡೆಯಿರಿ. ಉನ್ನತ ವ್ಯಾಸಂಗದಲ್ಲಿ ಆಸಕ್ತಿ. ಶುಭಸಂಖ್ಯೆ:5
ಮಕರ: ವಿವಾಹ ಕಾರ್ಯಕ್ಕೆ ಶುಭ ಸೂಚನೆ ದೊರೆಯಲಿದೆ. ಸಹೋದರರಿಂದ ಸಹಾಯ ಸಿಗುವುದು. ಮನಸ್ಸಿನಲ್ಲಿ ಆತಂಕ. ಶುಭಸಂಖ್ಯೆ: 5
ಕುಂಭ: ಅಸಡ್ಡೆಯಿಂದ ಆರೋಗ್ಯ ಸಮಸ್ಯೆ ಉಂಟಾದೀತು. ಸಾವಯವ ಕೃಷಿಕರ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಲಿದೆ. ಆರ್ಥಿಕ ಸ್ಥಿರತೆ. ಶುಭಸಂಖ್ಯೆ:7
ಮೀನ: ಸಲಹೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ. ಮಾತನಾಡುವಾಗ ಎಚ್ಚರ. ಸಾಹಿತ್ಯ ಕ್ಷೇತ್ರದಲ್ಲಿ ಅವಕಾಶ ಒದಗಿ ಬರುವುದು. ಶುಭಸಂಖ್ಯೆ:2