ಸರ್ಕಾರಿ ಆಸ್ಪತ್ರೆ ಮೆನುವಿನಲ್ಲಿ ಚಿಕನ್​ ಸಾಂಬಾರ್: ಆದ್ರೆ ಈ ರೋಗಿಗಳಿಗೆ ಮಾತ್ರ!

Chicken
Published on

ಹೈದರಾಬಾದ್​: ಕ್ಷಯ ರೋಗಿಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ತೆಲಂಗಾಣ ರಾಜ್ಯ ಸರ್ಕಾರವು ಇದೇ ಮೊದಲ ಬಾರಿಗೆ ಕ್ಷಯ ರೋಗಿಗಳಿಗೆ ಚಿಕನ್​ ಸಾಂಬಾರ್​ ಅನ್ನು ಒದಗಿಸುತ್ತಿದೆ.

ಕ್ಷಯ ರೋಗದಿಂದ ಬಹುಬೇಗನೇ ಗುಣಮುಖರಾಗಲು ಆಸ್ಪತ್ರೆಯ ಮೆನುವಿನಲ್ಲಿ ಚಿಕನ್​ ಸಾಂಬರ್​ ಸೇರಿಸಿರುವ ಸರ್ಕಾರ, ಅಗತ್ಯವಿರುವ ಪೋಷಕಾಂಶಗಳನ್ನು ರೋಗಿಗಳಿಗೆ ನೀಡಲು ಈ ಕ್ರಮ ಕೈಗೊಂಡಿರುವುದಾಗಿ ತಿಳಿದುಬಂದಿದೆ.

ಹೀಗಾಗಿ ವಾರಕ್ಕೆ (ಬುಧವಾರ) ಒಂದು ಬಾರಿ ಚಿಕನ್​ ಸಾಂಬಾರ್​ ನೀಡಲಾಗುವುದು. ಉಳಿದಂತೆ ಪ್ರತಿ ದಿನ ಎರಡು ಮೊಟ್ಟೆಗಳನ್ನು ನೀಡಲಾಗುವುದು. ರಾಜ್ಯದಲ್ಲೇ ಮೊದಲ ಬಾರಿಗೆ ಖಮ್ಮಮ್​ ಜಿಲ್ಲೆಯಲ್ಲಿರುವ ಕ್ಷಯ ರೋಗ ವಿಭಾಗದಲ್ಲಿ ಈ ಯೋಜನೆಯನ್ನು ಬುಧವಾರ ಆರಂಭಿಸಲಾಗಿದೆ.

ಜಿಲ್ಲೆಯ ಕ್ಷಯರೋಗ ತಡೆಗಟ್ಟುವ ಅಧಿಕಾರಿ ಡಾ.ವಿ. ಸುಬ್ಬರಾವ್ ಪ್ರಕಾರ, 2019 ರಲ್ಲಿ 3200 ರೋಗಿಗಳಿದ್ದರು. ಈ ಪೈಕಿ ಶೇ. 94 ರಷ್ಟು ಜನರು ಚೇತರಿಸಿಕೊಂಡಿದ್ದಾರೆ. 2020ರ ವೇಳೆಗೆ 2,900 ರೋಗಿಗಳಲ್ಲಿ 95 ಪ್ರತಿಶತದಷ್ಟು ಜನರು ಚೇತರಿಸಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

ನಿರಂತರವಾಗಿ ಔಷಧವನ್ನು ನೀಡಿದ್ದಲ್ಲಿ ಕಾಯಿಲೆ ಸಂಪೂರ್ಣವಾಗಿ ನಿರ್ಣಾಮ ಆಗುತ್ತದೆ ಎಂದು ಸುಬ್ಬರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net