ಪ್ರೇಮಿಗಳ ದಿನದಂದು ಸತಿಪತಿಗಳಾದ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ತಾರಾ ಜೋಡಿ

marraige
Published on

ಬೆಂಗಳೂರು: ಬಹುದಿನಗಳಿಂದ ಪ್ರೀತಿಸುತ್ತಿದ್ದ ಚಿತ್ರನಟರಾದ ಕೃಷ್ಣ ಮತ್ತು ಮಿಲನಾ ಅವರು ಇಂದು ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಸಿದ್ದಾರೆ. ಈಜುಕೊಳದ ಮಧ್ಯೆ ನಿರ್ಮಿಸಿರುವ ಕಲರ್‍ಫುಲ್ ಮಂಟಪದಲ್ಲಿ ಅದ್ಧೂರಿಯಾಗಿ ಇವರ ಮದುವೆ ನಡೆದಿದೆ.

ಬೆಳಗ್ಗೆ 9:30 ರಿಂದ 10:30ರ ನಡುವಿನ ಮುಹೂರ್ತದಲ್ಲಿ ವಿವಾಹ ಕಾರ್ಯ ಸಂಪನ್ನಗೊಂಡಿದೆ. ಮದುವೆಗೆ ಚಿತ್ರರಂಗದ ಗಣ್ಯರು ಹಾಗೂ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಇದಾಗಲೇ ಮೆಹಂದಿ ಹಾಗೂ ಅರಿಶಿಣ ಶಾಸ್ತ್ರಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜೋಡಿ ಇದೀಗ ಮದುವೆ ಕಾರ್ಯಕ್ರಮದ ಫೋಟೋವನ್ನೂ ಶೇರ್‌ ಮಾಡಿದ್ದಾರೆ.

ನಿನ್ನೆ ಸಂಜೆ ಸಂಗೀತ ಕಾರ್ಯಕ್ರಮದ ನಡೆದಿತ್ತು. ಕೃಷ್ಣ ಮತ್ತು ಮಿಲನಾ ಮೊದಲಿಗೆ ಜತೆಯಾಗಿ ನಟಿಸಿದ್ದು ‘ನಮ್ ದುನಿಯಾ ನಮ್ ಸ್ಟೈಲ್’ ಚಿತ್ರದಲ್ಲಿ. ಆ ನಂತರ ‘ಚಾರ್ಲಿ’ಯೆಂಬ ಇನ್ನೊಂದು ಚಿತ್ರದಲ್ಲಿ ಇಬ್ಬರೂ ನಟಿಸಿದ್ದರು.

ಕ್ರಮೇಣ ಹತ್ತಿರವಾದ ಇಬ್ಬರೂ, ‘ಲವ್ ಮಾಕ್ಟೇಲ್’ ಚಿತ್ರದಲ್ಲಿ ಜತೆಯಾಗಿ ನಟಿಸುವುದಲ್ಲದೆ, ಆ ಚಿತ್ರದ ಬರವಣಿಗೆ ಮತ್ತು ನಿರ್ವಣದಲ್ಲೂ ತೊಡಗಿಸಿಕೊಂಡಿದ್ದರು. ಕಳೆದ ವರ್ಷ ಆ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಪರಸ್ಪರ ಪ್ರೀತಿಸುತ್ತಿರುವುದಾಗಿ ಘೋಷಿಸಿದ್ದರು. ವರ್ಷಾಂತ್ಯಕ್ಕೆ ಮದುವೆ ಎಂದು ಹೇಳಿದ್ದರೂ, ಲಾಕ್​ಡೌನ್​ನಿಂದಾಗಿ ಈ ಪ್ರೇಮಿಗಳ ದಿನಕ್ಕೆ ಮದುವೆಗೆ ಮುಹೂರ್ತ ಸಿಕ್ಕಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net