ತಮ್ಮ ತೇಜಸ್ವಿ ಯಾದವ್​ ರಾಮ ಯಾರು?, ಲಕ್ಷ್ಮಣ ಯಾರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು; ತೇಜ್​ ಪ್ರತಾಪ್ ಯಾದವ್| Tej Prathap Yadav

Untitled design - 2025-10-03T121033.774
Published on

Tej Prathap Yadav: ಆರ್​ಜೆಡಿಯಿಂದ ಉಚ್ಚಾಟನೆಗೊಂಡಿರುವ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್​ ಪ್ರತಾಪ್ ಯಾದವ್, ತಮ್ಮ ಕಿರಿಯ ಸಹೋದರ ತೇಜಸ್ವಿ ಯಾದವ್​ಗೆ ರಾಮ ಯಾರು?, ಲಕ್ಷ್ಮಣ ಯಾರು? ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಲಕ್ಷ್ಮಣನಂತೆ ಅವರು ನನ್ನನ್ನು ಗೌರವಿಸಬೇಕು ಎಂದು ಶುಕ್ರವಾರ(ಅ. 03) ಹೇಳಿದ್ದಾರೆ.

ಆರ್​ಜೆಡಿಯಿಂದ ಹೊರ ಹಾಕಲ್ಪಟ್ಟ ಬಳಿಕ ತಮ್ಮದೇ ಜನಶಕ್ತಿ ಜನತಾದಳ ಎಂಬ ಹೊಸ ಪಕ್ಷ ಕಟ್ಟಿರುವ ತೇಜ್ ಪ್ರತಾಪ್ ಯಾದವ್, ತೇಜಸ್ವಿ ಯಾದವ್ ಕಿರಿಯ ಸಹೋದರನಾಗಿರುವುದರಿಂದ, ಲಕ್ಷ್ಮಣನು ತೋರಿದ ವರ್ತನೆಯನ್ನು ತೋರಬೇಕು. ಆದರೆ ಜೈಚಂದನಂತಹ ಜನರು ಅವನ ದಾರಿ ತಪ್ಪಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಆರ್‌ಜೆಡಿಯಲ್ಲಿದ್ದಾಗ, ತೇಜ್ ಪ್ರತಾಪ್ ತನ್ನ ಕಿರಿಯ ಸಹೋದರನ ಆಪ್ತ ಸಹಾಯಕರಾದ ರಾಜ್ಯಸಭಾ ಸಂಸದ ಸಂಜಯ್ ಯಾದವ್ ಅವರೊಂದಿಗೆ ವೈರತ್ವವನ್ನು ಹೊಂದಿದ್ದರು ಎನ್ನಲಾಗಿದೆ. ಸಂಜಯ್​ರನ್ನು ಮಧ್ಯಕಾಲೀನ ಯುಗದ ಹಿಂದೂ ರಾಜ ಜೈಚಂದ್‌ಗೆ ಹೋಲಿಸಿದ್ದಾರೆ. ಜೈಚಂದ್ ಅಫ್ಘಾನ್ ಆಕ್ರಮಣಕಾರ ಮುಹಮ್ಮದ್ ಘೋರಿಗೆ ಪ್ರತಿಸ್ಪರ್ಧಿ ಪೃಥ್ವಿರಾಜ್ ಚೌಹಾಣ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸಹಾಯ ಮಾಡಿದ್ದ ಎಂದು ಹೇಳಲಾಗುತ್ತದೆ.

ಆರ್‌ಎಸ್‌ಎಸ್‌ನ ಶತಮಾನೋತ್ಸವ ಆಚರಣೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸ್ವಾತಂತ್ರ್ಯ ಚಳವಳಿಯಲ್ಲಿ ಆರ್‌ಎಸ್‌ಎಸ್ ಯಾವುದೇ ಪಾತ್ರ ವಹಿಸಿಲ್ಲ. ನಾವು ಮಹಾತ್ಮ ಗಾಂಧಿಯವರ ಅನುಯಾಯಿಗಳು ಎಂದು ತಿಳಿಸಿದ್ದಾರೆ.

ಐ ಲವ್ ಮಹಮ್ಮದ್ ಎಂಬ ಅಭಿಯಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ನನ್ನ ಬಳಿ ಪವಿತ್ರ ಕುರಾನ್ ಪ್ರತಿ ಇದೆ. ನಾನು ಪ್ರವಾದಿಯನ್ನು ತುಂಬಾ ಗೌರವಿಸುತ್ತೇನೆ. ವಿವಾದಗಳನ್ನು ಹುಟ್ಟುಹಾಕುವವರು ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net