

ನವದೆಹಲಿ: ಬಿಹಾರ ಚುನಾವಣೆಯಲ್ಲಿ ಸೋಲುಂಡಿರುವ ತೇಜಸ್ವಿ ಯಾದವ್ ಅವರ ಬಗ್ಗೆ ಬಿಜೆಪಿ ನಾಯಕಿ ಉಮಾ ಭಾರತಿ ಮಾತನ್ನಾಡಿದ್ದಾರೆ. ತೇಜಸ್ವಿ ಒಳ್ಳೆ ಹುಡುಗ, ಆದರೆ ಈಗಲೇ ನಾಯಕನಾಗುವುದು ಬೇಡ ಎಂದು ಅವರು ಹೇಳಿದ್ದಾರೆ.
ತೇಜಸ್ವಿ ಯಾದವ್ ತುಂಬಾ ಒಳ್ಳೆ ಹುಡುಗ. ಈ ಚುನಾವಣೆಯಲ್ಲಿ ಜನರು ಕೂದಲೆಳೆ ಅಂಚಿನಲ್ಲಿ ಆತನ ನಾಯಕತ್ವದಿಂದ ಪಾರಾಗಿದ್ದಾರೆ. ಇಲ್ಲವಾಗಿದ್ದರೆ ಮತ್ತೊಮ್ಮೆ ಲಾಲೂ ಪ್ರಸಾದ್ ಯಾದವ್ ಅವರ ಜಂಗಲ್ ರಾಜ್ ಸರ್ಕಾರ ಅಧಿಕಾರಕ್ಕೆ ಬಂದುಬಿಡುತ್ತಿತ್ತು. ತೇಜಸ್ವಿ ಮುಖ್ಯಮಂತ್ರಿಯಾಗಬೇಕು, ಆದರೆ ಈಗಲ್ಲ. ಈಗಿನ್ನೂ ಯುವಕರಾಗಿರುವ ತೇಜಸ್ವಿ ವಯಸ್ಸಾದ ಮೇಲೆ ಸಿಎಂ ಅದರೆ ಒಳ್ಳೆಯದು ಎಂದು ಅವರು ನುಡಿದಿದ್ದಾರೆ.
ಇದರ ಜತೆಯಲ್ಲಿ ಕಾಂಗ್ರೆಸ್ನ ಕಮಲನಾಥ ಅವರನ್ನೂ ಉಮಾಭಾರತಿ ಕೊಂಡಾಡಿದ್ದಾರೆ. 'ಕಮಲನಾಥ ಜೀ ಅವರು ಒಳ್ಳೆ ರೀತಿಯಲ್ಲಿ ಚುನಾವಣೆಯಲ್ಲಿ ಹೋರಾಡಿದ್ದಾರೆ. ಅವರು ತುಂಬಾ ಸಭ್ಯ ವ್ಯಕ್ತಿ, ನನ್ನ ಅಣ್ಣನಿದ್ದಂತೆ.' ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್)