ಡೆಹ್ರಾಡೂನ್: ಕೇಂದ್ರ ಗೃಹ ಸಚಿವ ಅಮಿತ್ ಷಾರ (Amit Shah) ಪುತ್ರ ಎಂದು ಹೇಳಿಕೊಂಡು ಬಿಜೆಪಿ ಶಾಸಕನನ್ನು ವಂಚಿಸಲು ಮುಂದಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯು ಉತ್ತರಾಖಂಡದದಲ್ಲಿ ನಡೆದಿದ್ದು, ಘಟನೆ ಸಂಬಂಧ ಪೊಲೀಸರು 19 ವರ್ಷದ ಯುವಕನನ್ನು ಬಂಧಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಹರಿದ್ವಾರ ಎಸ್ಎಸ್ಪಿ ಪ್ರಮೋದ್ ಸಿಂಗ್ ದೋಬಾಲ್, ರಾಣಿಪುರ ಕ್ಷೇತ್ರದ ಶಾಸಕರಿಗೆ ಕರೆ ಮಾಡಿದ ಆರೋಪಿ ತಾನು ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah) ಅವರ ಪುತ್ರ ಜಯ್ ಷಾ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ತನಗೆ ಬಿಜೆಪಿ ಹೈಕಮಾಂಡ್ ಸೇರಿದಂತೆ ಉನ್ನತ ನಾಯಕರೊಂದಿಗೆ ಸಂಪರ್ಕವಿದ್ದು, 5 ಲಕ್ಷ ರೂಪಾಯಿ ಹಣ ಕೊಡುವಂತೆ ಕೇಳಿದ್ದಾನೆ. ವಂಚಕನ ಬಗ್ಗೆ ತಿಳಿದ ಶಾಸಕರು ಹಣ ಕೊಡಲು ಒಪ್ಪದಿದ್ದಾಗ ಅವಾಚ್ಯ ಶಬ್ದಗಳನ್ನು ಬಳಸಿ ಸಾಮಾಜಿಕ ಮಾಧ್ಯಮದಲ್ಲಿ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದ.
ರಾಣಿಪುರ ಮಾತ್ರವಲ್ಲದೇ ರುದ್ರಪುರ ಮತ್ತು ಭೀಮತಾಲ್ ಕ್ಷೇತ್ರದ ಶಾಸಕರಿಗೆ ಕರೆ ಮಾಡಿ ಹಣ ಕೊಡುವಂತೆ ಬೆದರಿಕೆ ಹಾಕಿದ್ದ. ಈ ಸಂಬಂಧ ಶಾಸಕರು ದಾಖಲಿಸಿದ ದೂರನ್ನು ಆಧರಿಸಿ ಗೌರವ್ನಾಥ್, ಪ್ರಿಯಾಂಶು ಮತ್ತು ಉವೇಶ್ ಅಹ್ಮದ್ ಎಂಬಾತನನ್ನು ಬಂಧಿಸಲಾಗಿದ್ದು, ಈ ಮೂವರು ಶಾಸಕರನ್ನು ತಮ್ಮ ಸ್ಥಳಕ್ಕೆ ಕರೆಸಿಕೊಂಡು ಸುಲಿಗೆ ಮಾಡಲು ಮುಂದಾಗಿದ್ದರು. ಇದೀಗ ಮೂವರನ್ನು ಬಂಧಿಸಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹರಿದ್ವಾರ ಎಸ್ಎಸ್ಪಿ ಪ್ರಮೋದ್ ಸಿಂಗ್ ದೋಬಾಲ್ ತಿಳಿಸಿದ್ಧಾರೆ.
PowerLifting ತರಬೇತಿ ವೇಳೆ ಅವಘಡ; 270 ಕೆಜಿ ತೂಕದ ಬಾರ್ ಬಿದ್ದು ಚಿನ್ನದ ಪದಕ ವಿಜೇತ ಅಥ್ಲೀಟ್ ಸಾವು
Ramzan ತಿಂಗಳಲ್ಲಿ ಮುಸ್ಲಿಂ ಉದ್ಯೋಗಿಗಳಿಗೆ ಕೆಲಸದ ಅವಧಿ 1ಗಂಟೆ ಕಡಿತಗೊಳಿಸಿ ಸರ್ಕಾರ ಆದೇಶ; ಬಿಜೆಪಿ ಕಿಡಿ