ಲಖನೌ: ಶಾಲಾ ಸಮವಸ್ತ್ರದಲ್ಲಿ ಧರಿಸಿದ್ದ ಹುಡುಗಿಯರಿಬ್ಬರೂ ತಮ್ಮ ಚಾಲಾಕಿ ತನದಿಂದ ದ್ಚಿಚಕ್ರ ವಾಹನವನ್ನು ಕದ್ದಿರುವ ವಿಚಿತ್ರ ಪ್ರಕರಣವೊಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಬೆಳಕಿಗೆ ಬಂದಿದೆ. ಅವರ ಕೈಚಳಕದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಹರಿದಾಡುತ್ತಿದೆ.
ಇದನ್ನು ಓದಿ: ರಸ್ತೆಯಲ್ಲಿ ಹೋಗುತ್ತಿದ್ದ ಯುವಕನ ಹೃದಯಕ್ಕೆ ಇರಿದ ಹಂತಕರು; ಘಟನೆ ಬಗ್ಗೆ ಪೊಲೀಸರು ಹೇಳಿದಿಷ್ಟು..
ವೈರಲ್ ಆಗಿರುವ ವಿಡಿಯೋದಲ್ಲಿ ಶಾಲಾ ಸಮವಸ್ತ್ರ ಧರಿಸಿ ವಿದ್ಯಾರ್ಥಿನಿಯಂತೆ ಕಾಣುವ ಹುಡುಗಿಯೊಬ್ಬರಳು ಸ್ಕೂಟರ್ ಅನ್ನು ಪಾರ್ಕಿಂಗ್ ಮಾಡಿರುವ ಸ್ಥಳದಿಂದ ತೆಗೆಯಲು ಪ್ರಯತ್ನಿಸುತ್ತಿದ್ದಾಳೆ. ಸುತ್ತಮುತ್ತ ನೋಡುತ್ತಾ ನಂತರ ಸ್ಥಳದಿಂದ ದ್ವಿಚಕ್ರ ವಾಹನ ಜತೆಗೆ ಅಲ್ಲಿಂದ ಪರಾರಿಯಾಗುವುದನ್ನು ಕಾಣಬಹುದಾಗಿದೆ.
ಅಸಲಿಗೆ ಅಪಾರ್ಟ್ಮೆಂಟ್ ಎರಡನೇ ಮಹಡಿಯಲ್ಲಿ ವಾಸಿಸುತ್ತಿರುವ ದ್ವಿಚಕ್ರವಾಹನ ಮಾಲೀಕರ ಬಳಿ ಬಂದು, ನಿಮ್ಮ ಗಾಡಿ ಕೀ ಕೊಡಿ. ಸ್ಥಳದಿಂದ ಸ್ವಲ್ಪ ಮುಂದಕ್ಕೆ ಪಾರ್ಕಿಂಗ್ ಮಾಡಬೇಕಿದೆ ಎಂದು ಕೇಳಿದ್ದಾಳೆ. ಹುಡುಗಿಯು ಶಾಲಾ ಸಮವಸ್ತ್ರ ಧರಿಸಿದ್ದರಿಂದ ಮನೆಗೆ ಏನಾನನ್ನಾದರೂ ಕೊಂಡೊಯ್ಯಬೇಕೆನೋ. ಸ್ಕೂಟರ್ ಅಡ್ಡವಾಗಿ ಇರಬಹುದು ಅವರಿಗೆ ಎಂದು ಮಾಲೀಕರು ಕೀ ಕೊಡುತ್ತಾರೆ. ಎಷ್ಟೆ ಸಮಯವಾದರೂ ಹುಡುಗಿ ಕೀ ಕೊಡದ ಕಾರಣ ದ್ವಿಚಕ್ರ ವಾಹನದ ಮಾಲೀಕರು ಸ್ಥಳಕ್ಕೆ ಬಂದು ನೋಡಿದರೆ ಸ್ಕೂಟರ್ ಜತೆಗೆ ಹುಡುಗಿಯು ನಾಪತ್ತೆಯಾಗಿದ್ದಾಳೆ.
ಈ ಪ್ರಕರಣ ವಾರಣಾಸಿಯ ಬೇಲುಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಕಬೀರ್ ನಗರದಲ್ಲಿ ನಡೆದಿದೆ ಎನ್ನಲಾಗಿದೆ. ಈ ಕೃತ್ಯದಲ್ಲಿ ಇಬ್ಬರು ಹುಡುಗಿಯರು ಇರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ಕನ್ಫರ್ಮ್ ಆಗಿದೆ. ಸ್ಕೂಟರ್ ಕಳೆದುಕೊಂಡ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಖತರ್ನಾಕ್ ಕಳ್ಳಿಯ ಮುಖ ಚಹರೆ ವಿಡಿಯೋದಲ್ಲಿ ಗೋಚರಿಸುತ್ತಿರುವುದರಿಂದ ತನಿಖೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಹುಡುಗಿಯರನ್ನು ಹುಡುಕಲು ಒತ್ತಾಯಿಸಿದರೆ, ಮತ್ತೆ ಕೆಲವರು ಮಾಲೀಕರ ಎಚ್ಚರದಿಂದರಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)