ರಾತ್ರಿ ಒಬ್ಬಳೇ ಹೋಗುತ್ತಿದ್ದವಳ ಖಾಸಗಿ ಅಂಗಕ್ಕೆ ಕೈ ಹಾಕಿ, ಗ್ರಹಚಾರ ಕೆಡಿಸಿಕೊಂಡ ಕಾಮುಕ

Crime 13
Published on

ಕೋಲ್ಕತ್ತ: ತನ್ನೊಂದಿಗೆ ಅನುಚಿತವಾಗಿ ವರ್ತಿಸಿ, ಅಶ್ಲೀಲ ಸನ್ನೆ ಮಾಡಿದವನಿಗೆ ಈ ರಂಗಭೂಮಿ ಕಲಾವಿದೆ ತಕ್ಕ ಶಾಸ್ತಿ ಮಾಡಿದ್ದಾಳೆ. ಕಾಮುಕನನ್ನು ಅಟ್ಟಿಸಿಕೊಂಡು ಹೋಗಿದ್ದಲ್ಲದೆ, ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾಳೆ.

19 ವರ್ಷದ ಯುವತಿ ಪಶ್ಚಿಮಬಂಗಾಳದ ಕಾಳಿಬಾರಿ ನಿವಾಸಿ. ರಂಗಭೂಮಿ ಕಲಾವಿದೆಯಾದ ಇವಳು ನಿನ್ನೆ ರಾತ್ರಿ ಸುಮಾರು 9.45 ರ ಹೊತ್ತಿಗೆ ನಾಟಕ ಅಭ್ಯಾಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಳು. ಆಗ ಆಕೆಗೆ ಎದುರಾದ 40 ವರ್ಷದ ಅಮಿಯಾ ದಾಸ್​ ಎಂಬಾತ ಅನುಚಿತವಾಗಿ ವರ್ತಿಸಿದ. ಅಶ್ಲೀಲ ಸನ್ನೆ ಮಾಡಿದ್ದಲ್ಲದೆ, ಬಂದು ಯುವತಿಯ ಗುಪ್ತಾಂಗಕ್ಕೆ ಅಸಭ್ಯವಾಗಿ ಕೈ ಹಾಕಿ, ಕೂಡಲೇ ಓಡಿದ್ದಾನೆ. ಇದೆಲ್ಲ ನಡೆದದ್ದು ಅಶೋಕನಗರದ ಚೌರಿಂಗೀ ಎಂಬಲ್ಲಿ. ಇದನ್ನೂ ಓದಿ: VIDEO: ಯೋಗ ಮಾಡುತ್ತ ಆನೆ ಮೇಲಿಂದ ಬಿದ್ದ ಬಾಬಾ ರಾಮದೇವ್!

ಆತ ನನ್ನ ಬಳಿ ಬಂದು ನನ್ನ ಖಾಸಗಿ ಅಂಗಕ್ಕೆ ಕೈ ಹಾಕಿದ. ನಂತರ ಬ್ಯಾಗ್​ ಕಿತ್ತುಕೊಳ್ಳಲು ನೋಡಿದ. ನನಗೆ ಒಂದು ಬಾರಿ ಶಾಕ್​ ಆಯಿತು. ಓಡುತ್ತಿದ್ದ ಅವನನ್ನು ಬೆನ್ನಟ್ಟಿ ಹೋದೆ. ಕೊನೆಗೂ ಹಿಡಿದೆ. ಆತ ನನ್ನೊಂದಿಗೆ ಜಗಳಕ್ಕೆ, ಹೊಡೆದಾಟಕ್ಕೆ ನಿಂತ. ನಾನೂ ಅವನಿಗೆ ಹೊಡೆದೆ...ನಂತರ ಪೊಲೀಸರಿಗೆ ಕರೆ ಮಾಡಿದೆ ಎಂದು ಆ ಯುವತಿ ತಿಳಿಸಿದ್ದಾಳೆ.

ಅಷ್ಟರಲ್ಲಿ ಸ್ಥಳೀಯರು ಅಲ್ಲಿಗೆ ಆಗಮಿಸಿದರು. ಆರೋಪಿಯನ್ನು ಹಿಡಿದು, ಥಳಿಸಿದರು. ಅಷ್ಟರಲ್ಲಿ ಪೊಲೀಸರು ಬಂದು ಅವನನ್ನು ಬಂಧಿಸಿಕೊಂಡು ಹೋದರು ಎಂದು ಹೇಳಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net