More

    ನನ್ನನ್ನು ಕ್ಷಮಿಸಿಬಿಡಿ… ಕಣ್ಣೀರು ಸುರಿಸಿದ ಉ.ಕೊರಿಯಾ ಸರ್ವಾಧಿಕಾರಿ ಕಿಮ್​!

    ಸಿಯೋಲ್: ದಿನಕ್ಕೊಂದರಂತೆ ಚಿತ್ರ-ವಿಚಿತ್ರ ಕಾನೂನುಗಳನ್ನು ರೂಪಿಸುತ್ತಾ, ಸತ್ತೇ ಹೋದ ಎಂದಾಗಲೆಲ್ಲ ಎದ್ದೆದ್ದು ಬರುವ ವಿಚಿತ್ರ ದೊರೆ, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಜನತೆಯ ಎದುರು ಅತ್ತುಬಿಟ್ಟಿದ್ದಾರೆ!

    ವಿಚಿತ್ರ ಎಂದರೂ ಇಂಥದ್ದೊಂದು ಘಟನೆ ಸಂಭವಿಸಿದೆ.

    ಅಷ್ಟಕ್ಕೂ ಕಿಮ್​ ಅತ್ತಿರುವುದಕ್ಕೆ ಕಾರಣ, ಕರೊನಾ ಸೋಂಕು ತೀವ್ರವಾಗಿದ್ದ ಸಂದರ್ಭದಲ್ಲಿ ದೇಶದ ಜನರ ಜತೆ ತನಗೆ ಇರಲು ಸಾಧ್ಯವಾಗಿಲ್ಲ ಎಂದು!

    ನಿನ್ನೆ ಉತ್ತರ ಕೊರಿಯಾದ ಜನರ ಮುಂದೆ ಕಾಣಿಸಿಕೊಂಡ ಕಿಮ್ ಜಾಂಗ್ ಉನ್ ದೇಶದ ಜನರಲ್ಲಿ ಕ್ಷಮೆ ಯಾಚಿಸಿದ್ದಾರೆ. ಜತೆಗೆ, ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರ ಜತೆ ಇರಲು ಸಾಧ್ಯವಾಗಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

    ತಮ್ಮ ಪಕ್ಷ ವರ್ಕರ್ಸ್ ಪಾರ್ಟಿ ಆಫ್ ಕೊರಿಯಾದ 75ನೇ ಸಂಸ್ಥಾಪನಾ ದಿನದಲ್ಲಿ ಮಾತನಾಡಿದ ಅವರು, ಉತ್ತರ ಕೊರಿಯಾ ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ತಕ್ಕಂತೆ ನನಗೆ ನಡೆದುಕೊಳ್ಳಲು ಸಾಧ್ಯವಾಗಿಲ್ಲ,ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎನ್ನುವಾಗ ಭಾವುಕರಾಗಿ ಅತ್ತಿದ್ದಾರೆ.

    ಈ ಹಿಂದೆ ದೇಶದ ಚುಕ್ಕಾಣಿ ಹಿಡಿದಿದ್ದ ತನ್ನ ತಂದೆ ಮತ್ತು ಅಜ್ಜನನ್ನು ಕಿಮ್ ತನ್ನ ಭಾಷಣದಲ್ಲಿ ಉಲ್ಲೇಖಿಸಿದರು. ನನ್ನ ದೇಶದ ಜನರು ನನ್ನ ಮೇಲೆ ಆಕಾಶದಷ್ಟು ಎತ್ತರಕ್ಕೆ ಸಮುದ್ರದಷ್ಟು ಆಳವಾದ ನಂಬಿಕೆ ಇಟ್ಟಿದ್ದಾರೆ. ಆದರೆ ಜನರ ನಂಬಿಕೆ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ, ಅವರ ಕಷ್ಟದ ಸಂದರ್ಭದಲ್ಲಿ ಅವರೊಂದಿಗಿರಲು ಆಗಲಿಲ್ಲ ಎಂದು ಕಣ್ಣೀರಿಟ್ಟರು.

    ಇದನ್ನೂ ಓದಿ: ಬೆಂಗಳೂರಿನ ಯುವಕರು ಸಿರಿಯಾಕ್ಕೆ: ಉಗ್ರರು ಬಹಿರಂಗಗೊಳಿಸಿದ್ರು ಸ್ಫೋಟಕ ಮಾಹಿತಿ

    ಕಮಾಂಡರ್‌ಗಳಾಗಿದ್ದ ಕಿಮ್ ಇಲ್ ಸುಂಗ್ ಮತ್ತು ಕಿಮ್ ಜಾಂಗ್ ಇಲ್ ಅವರ ಆದರ್ಶಗಳನ್ನು ಎತ್ತಿಹಿಡಿಯಲು, ಈ ದೇಶವನ್ನು ಮುನ್ನಡೆಸುವ ಪ್ರಮುಖ ಜವಾಬ್ದಾರಿಯನ್ನು ನನಗೆ ವಹಿಸಲಾಗಿತ್ತು. ಎಲ್ಲ ಜನರ ನಂಬಿಕೆಗೆ ಧನ್ಯವಾದ, ಆದರೆ ಸಂಕಷ್ಟದ ಸಮಯದಲ್ಲಿ ಅನಿವಾರ್ಯವಾಗಿ ನಾನು ದೂರ ಉಳಿಯಬೇಕಾಯಿತು ಎಂದರು.

    ಕರೊನಾ ಉತ್ತರ ಕೊರಿಯಾದಲ್ಲಿಯೂ ಭೀಕರ ಸ್ವರೂಪ ತಾಳುತ್ತಿದ್ದ ಸಂದರ್ಭದಲ್ಲಿ ಅನಾರೋಗ್ಯದ ನಿಮಿತ್ತ ಕಿಮ್​ ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಮೃತಪಟ್ಟಿರುವುದಾಗಿ ಜಗತ್ತಿನೆಲ್ಲೆಡೆ ಸುದ್ದಿಯಾಗಿತ್ತು. ಆದರೆ ಕಿಮ್​ ಅಚ್ಚರಿಯ ರೀತಿಯಲ್ಲಿ ಬದುಕಿ ಬಂದಿದ್ದರು. ಇದಕ್ಕೂ ಮೊದಲು ಇದೇ ರೀತಿ ಅನಾರೋಗ್ಯದ ಕಾರಣ ನೀಡಿ ಕಿಮ್​ ಇದ್ದಕ್ಕಿದ್ದಂತೆಯೇ ಮಾಯವಾದದ್ದೂ ಇದೆ.

    ಉತ್ತರ ಕೊರಿಯಾದಲ್ಲಿ ಕರೊನಾ ಯಾವ ಪ್ರಮಾಣದಲ್ಲಿ ಇದೆ ಎನ್ನುವುದು ಮಾತ್ರ ಇದುವರೆಗೆ ಬಹಿರಂಗಗೊಂಡಿಲ್ಲ. ಕೊರಿಯಾ ಕರೊನಾಮುಕ್ತವಾಗಿದೆ ಎಂದು ಕಿಮ್​ ಇದಾಗಲೇ ಹೇಳಿದ್ದರೂ, ಅವರ ಈ ಭಾಷಣ ಹಲವಾರು ಸಂದೇಹಗಳಿಗೆ ಎಡೆ ಮಾಡಿಕೊಡುತ್ತಿದೆ.

    ಎ.ಸಿ ಆನ್​ ಮಾಡಿ ಕಾರಿನಲ್ಲೇ ನಿದ್ದೆಗೆ ಜಾರಿದ… ಮರುದಿನ ಶವವಾದ…

    ಕೋವಿಡ್​ ಕೆಲಸಕ್ಕೆ ಹಾಜರಾದ 14 ದಿನಗಳ ಬಾಣಂತಿ ಈ ಐಎಎಸ್​ ಅಧಿಕಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts