More

    ಕಣ್ಣೀರು ಸುರಿಸುವ ನಿಮಗೆ ಕಣ್ಣೀರಿನ ಹಲವು ವಿಧಗಳ ಬಗ್ಗೆ ಗೊತ್ತಾ?

    ಬೆಂಗಳೂರು: ನೋವು ಬಂದಾಗ ಕಣ್ಣೀರು ಬರುತ್ತದೆ. ಈರುಳ್ಳಿಯನ್ನು ಕತ್ತರಿಸಿದಾಗ ಕಣ್ಣೀರು ಬರುತ್ತದೆ. ಸಂತೋಷವಾದಾಗ, ಬೇಸರವಾದಾಗ ಹೀಗೆ ವಿವಿಧ ಭಾವನೆಗಳಿಂದ ಕಣ್ಣೀರು ಬರುತ್ತದೆ. ಆದರೆ ಕಣ್ಣೀರಿಗೂ ವ್ಯತ್ಯಾಸವಿದೆ ಎಂಬ ಛಾಯಾಗ್ರಾಹಕನ ಮಾತು ಎಷ್ಟು ಸತ್ಯ? ಎನ್ನುವ ಕುರಿತಾಗಿ ಇಂದು ತಿಳಿಯೋಣ ಬನ್ನಿ….

    ಕ್ಲೀವ್ಲ್ಯಾಂಡ್ ಕ್ಲಿನಿಕ್ ಮೆಡಿಕಲ್ ಸೆಂಟರ್ನ ಡಾ. ಮೈಕೆಲ್ ರೋಜೆನ್ ಪ್ರಕಾರ, ಭಾವನಾತ್ಮಕ ಕಣ್ಣೀರು ದೇಹವು ಸಾಕಷ್ಟು ಪೋಷಕಾಂಶಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಒತ್ತಡ ಕಡಿಮೆಯಾಗುತ್ತದೆ. ಒಬ್ಬ ವ್ಯಕ್ತಿಯು ದುಃಖ, ಸಂತೋಷ, ಭಯ ಅಥವಾ ಇತರ ಭಾವನೆಗಳನ್ನು ಅನುಭವಿಸಿದಾಗ ಉತ್ಪತ್ತಿಯಾಗುವ ಕಣ್ಣೀರಿನಲ್ಲಿ ಹೆಚ್ಚುವರಿ ಹಾರ್ಮೋನುಗಳು ಮತ್ತು ಪ್ರೋಟೀನ್‌ಗಳು ಇರಬಹುದೆಂದು ವಿಜ್ಞಾನಿಗಳು ನಂಬುತ್ತಾರೆ.

    ಕಣ್ಣೀರು ಸುರಿಸುವ ನಿಮಗೆ ಕಣ್ಣೀರಿನ ಹಲವು ವಿಧಗಳ ಬಗ್ಗೆ ಗೊತ್ತಾ?

    ಆದರೆ ವಿಭಿನ್ನ ಭಾವನೆಗಳ ಆಧಾರದ ಮೇಲೆ ಕಣ್ಣೀರು ವಿಭಿನ್ನ ಅಣುಗಳನ್ನು ಹೊಂದಿರುತ್ತದೆ. ಸೂಕ್ಷ್ಮದರ್ಶಕದ ಮೂಲಕ ನೋಡಿದಾಗ ಇವೆಲ್ಲವೂ ವಿಭಿನ್ನವಾಗಿ ಕಾಣುತ್ತವೆ. “ದಿ ಟೋಪೋಗ್ರಫಿ ಆಫ್ ಟಿಯರ್ಸ್” ಪುಸ್ತಕಕ್ಕಾಗಿ ಛಾಯಾಗ್ರಾಹಕ ರೋಸ್-ಲಿನ್ ಫಿಶರ್ ತೆಗೆದ ಫೋಟೋಗಳಲ್ಲಿ ಈ ವ್ಯತ್ಯಾಸವು ಸ್ಪಷ್ಟವಾಗಿದೆ.

    ಕಣ್ಣೀರು ಸುರಿಸುವ ನಿಮಗೆ ಕಣ್ಣೀರಿನ ಹಲವು ವಿಧಗಳ ಬಗ್ಗೆ ಗೊತ್ತಾ?

    “ಕಣ್ಣೀರಿನ ದೃಶ್ಯ ತನಿಖೆ” ಗಾಗಿ ಫಿಶರ್ ಡಿಜಿಟಲ್ ಮೈಕ್ರೋಸ್ಕೋಪಿ ಕ್ಯಾಮೆರಾದಲ್ಲಿ ಆಪ್ಟಿಕಲ್ ಸ್ಟ್ಯಾಂಡರ್ಡ್ ಲೈಟ್ ಮೈಕ್ರೋಸ್ಕೋಪ್ ಬಳಸಿ ಕೆಲವು ಫೋಟೋಗಳನ್ನು ತೆಗೆದುಕೊಳ್ಳಲಾಗಿದೆ. ರೋಸ್ ಲಿನ್ ಫಿಶರ್ ಈ ಯೋಜನೆಗಾಗಿ ತನ್ನ ಭಾವನಾತ್ಮಕ ಕಣ್ಣೀರನ್ನು ಸಂಗ್ರಹಿಸಲು ಮತ್ತು ಛಾಯಾಚಿತ್ರ ಮಾಡಲು 8 ವರ್ಷಗಳ ಕಾಲ ಕಳೆದರು. ಈ ಸಂಶೋಧನೆಯಲ್ಲಿನ ವಿವಿಧ ರೀತಿಯ ಕಣ್ಣೀರಿನಿಂದ ಆಕೆಗೆ ಆಶ್ಚರ್ಯವಾಯಿತು. ನೋವು ಮತ್ತು ಸಂತೋಷದಲ್ಲಿ ಕಣ್ಣೀರು ಒಂದೇ. ಈರುಳ್ಳಿ ಕತ್ತರಿಸುವುದರಿಂದ ಬರುವ ದುಃಖ, ನಗು, ಕಣ್ಣೀರು ಬೇರೆ.
    Rose-Lynn Fisher ವಿಜ್ಞಾನಿಯಲ್ಲ, ಕೇವಲ ದೃಶ್ಯ ಕಲಾವಿದೆ. ಸೂಕ್ಷ್ಮದರ್ಶಕದ ಅಡಿಯಲ್ಲಿ ನೋಡಿದಾಗ ಕಣ್ಣೀರು ವಿಭಿನ್ನವಾಗಿ ಕಾಣುತ್ತದೆ. ಆದರೆ ಅನೇಕರು ಈ ಪ್ರಕ್ರಿಯೆಯನ್ನು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ತಳ್ಳಿಹಾಕಿದರು. ಮತ್ತು ಈ ಬಗ್ಗೆ ಕೂಲಂಕುಷವಾಗಿ ಸಂಶೋಧನೆ ನಡೆದ ನಂತರವಷ್ಟೇ ಅಸಲಿ ವಿಷಯ ತಿಳಿಯಬೇಕಿದೆ.

    ಇದನ್ನೂ ಓದಿ:  ಬೆಂಗಳೂರಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನ; 48 ಗಂಟೆಯಲ್ಲಿ 3 ಸಾವಿರಕ್ಕೂ ಹೆಚ್ಚು ಜನರಿಂದ ಅರ್ಜಿ ಸಲ್ಲಿಕೆ..ಉದ್ಯೋಗ ಮಾರುಕಟ್ಟೆ ಎಷ್ಟು ಕೆಟ್ಟದಾಗಿದೆ? ಎಂದ ಕಂಪನಿ ಸಿಇಒ

    ಕಣ್ಣಿಂದ ಜಾರುವ ನೀರಿನಲ್ಲಿ ವಿಧಗಳಿವೆ. ಒಂದೊಂದು ಕಣ್ಣೀರು ಒಂದೊಂದು ರೀತಿಯಲ್ಲಿ ಕಣ್ಣಿಗೆ ಸಹಾಯ ಮಾಡುತ್ತವೆ. ಇತ್ತ ಕೆಲವು ಸಂಶೋಧಕರು ಕಣ್ಣೀರನ್ನು ಈ ಬಗೆಯಲ್ಲಿ ವಿಭಾಗಿಸುತ್ತಾರೆ.

    ಬಾಸಲ್ ಟಿಯರ್ಸ್ (Basel Tears)- ನಿಮಿಷಕ್ಕೆ ಒಂದರಿಂದ ಎರಡು ಮೈಕ್ರೋ ಲೀಟರ್‌ವರೆಗೂ ನೀರು ಉತ್ಪತ್ತಿ ಆಗುತ್ತದೆ. ಇವು ಕಣ್ಣುಗಳನ್ನು ತೇವಾಂಶಭರಿತವಾಗಿ ಇಡುವುದರ ಜೊತೆಗೆ ಇನ್‌ಫೆಕ್ಷನ್‌ನಿಂದ ಕಾಪಾಡುತ್ತವೆ.

    ಇದನ್ನೂ ಓದಿ:  ನದಿಗೆ ಹಾರಿ ಪ್ರಾಣ ಬಿಟ್ಟ ಮಹಿಳೆ; ಯಜಮಾನಿಗಾಗಿ ಚಪ್ಪಲಿ ಬಳಿ ಕಾದು ಕುಳಿತಿ ಶ್ವಾನ

    ರಪ್ಲೆಕ್ಸ್ ಟಿಯರ್ಸ್ (Reflex Tears ) – ಈರುಳ್ಳಿ ಕಟ್ ಮಾಡಿದಾಗ.. ಕಣ್ಣಿಗೆ ಆಕಸ್ಮಿಕವಾಗಿ ಏನಾದರೂ ತಾಕಿದಾಗ.. ಧೂಳು ಬಿದ್ದಾಗ ಕಣ್ಣೀರು ಬರುತ್ತದೆ. ಇವು ಕಣ್ಣಲ್ಲಿ ಬಿದ್ದ ಧೂಳನ್ನು ಹೊರಗೆ ಕಳಿಸಲು.. ಕಣ್ಣಿನ ಉರಿಯನ್ನು ತಗ್ಗಿಸಲು ನೆರವಾಗುತ್ತವೆ.

    ಎಮೋಷನಲ್ ಟಿಯರ್ಸ್‌ (Emotional Tears )- ಹೆಚ್ಚಾಗಿ ಭಾವೋದ್ವೇಗಕ್ಕೆ ಒಳಗಾದಾಗ ಕಣ್ಣೀರು ಒತ್ತರಿಸಿ ಬರುತ್ತದೆ. ಇದರಿಂದ ಮನುಷ್ಯನಲ್ಲಿನ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ.

    ಅತ್ತರೇ ಆಕ್ಸಿಟೋಸಿನ್‌ (Oxytocin), ಎಂಡಾರ್ಫಿನ್ (Endorphin)ಎಂಬ ಫೀಲ್ ಗುಡ್ ರಾಸಾಯನಿಕಗಳು (Feel good Chemical’s) ಬಿಡುಗಡೆ ಆಗುತ್ತವೆ. ಇವು ಮನುಷ್ಯರ ಮೂಡನ್ನು ಬದಲಿಸುತ್ತವೆ. ನೋವನ್ನು ಮರೆಸಿ ಸಂತೋಷದಿಂದ ಇರುವಂತೆ ಮಾಡುತ್ತದೆ.

    ವಿರೋಧ ಪಕ್ಷಗಳ ಸಭೆಯಲ್ಲಿ ಮೈತ್ರಿಗೆ ‘INDIA’ ಎಂದು ಹೆಸರಿಡಲು ಅಂತಿಮ ಹಂತದ ಚರ್ಚೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts