ಜಾಬ್​ ಹಗ್ಗಿಂಗ್​ ಟ್ರೆಂಡ್​ಗೆ ಒಗ್ಗಿಕೊಳ್ಳುತ್ತಿರುವ ಉದ್ಯೋಗಿಗಳು; ವೃತ್ತಿ ಜೀವನದ ಬೆಳವಣಿಗೆಗೆ ಮಾರಕ ಏಕೆ, ಹೇಗೆ?..Job Hugging Trend

Job Hugging Trend
Job Hugging Trend
Published on

ಪ್ರಮುಖ ಮುಖ್ಯಾಂಶಗಳು

  • ಜಾಬ್ ಹಪ್ಪಿಂಗ್ ಬದಲು ಈಗ 'ಜಾಬ್ ಹಗ್ಗಿಂಗ್' ಟ್ರೆಂಡ್ ಶುರು, ವೃತ್ತಿ ಬದುಕಿಗೆ ಇದು ಮಾರಕ
  • AI ಭೀತಿಯಿಂದ ಉದ್ಯೋಗಿಗಳು ಕೆಲಸ ಬಿಡಲು ಹಿಂಜರಿಯುತ್ತಿದ್ದಾರೆ ಎಂದು ತಜ್ಞರು
  • 'ಜಾಬ್ ಹಗ್ಗಿಂಗ್' ಟ್ರೆಂಡ್​ ಉದ್ಯೋಗಿಗಳಲ್ಲಿ ಸೃಜನಶೀಲತೆ ಕಡಿಮೆ ಮಾಡುವ ಸಾಧ್ಯತೆ
Job Hugging Trend: ಮಾ.22ರಂದು ಬೆಂಗಳೂರಿನ ಕೊತ್ತನೂರಿನಲ್ಲಿ ವ್ಯಕ್ತಿಯೊಬ್ಬರು ಉದ್ಯೋಗ ಕಡಿತದಿಂದ ಅಘಾತ ಮತ್ತು ಮಾನಸಿಕ ಹಿಂಸೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂತಹ ವಿಚಾರಗಳು ದಿನೇ ದಿನೇ ಹೆಚ್ಚಾದಂತೆ ಕೆಲಸ ಕಳೆದುಕೊಳ್ಳುವ ಭಯದಿಂದ, ಹಲವರು ಇರುವ ಕೆಲಸವನ್ನೇ ಅಪ್ಪಿ ಹಿಡಿಯುವ (ಜಾಬ್​ ಹಗ್ಗಿಂಗ್​)ನಂತಹ ಪ್ರವೃತ್ತಿಯನ್ನು ರೂಢಿಸಿಕೊಳ್ಳುತ್ತಿದ್ದಾರೆ. ನೂತನ ಟ್ರೆಂಡ್​ ಆಗುತ್ತಿರುವ ಇದು ಭವಿಷ್ಯದ ಏಳಿಗೆಗೆ ಮಾರಕ ಎಂದು ತಜ್ಞರು ಎಚ್ಚರಿಸಿದ್ದಾರೆ.
ಹಿಂದೆ ಹೆಚ್ಚಿನ ಸಂಬಳಕ್ಕಾಗಿ ವಾರಕ್ಕೊಮ್ಮೆ, ಐದಾರು ತಿಂಗಳಿಗೆ, ವರ್ಷಕ್ಕೊಮ್ಮೆ ಕೆಲಸ ಬದಲಿಸುವ (Job Hopping) ವಿದ್ಯಮಾನವಿತ್ತು. ಇದರಿಂದ ಕೌಶಲ್ಯ ಅಭಿವೃದ್ಧಿ ಕಾಣಬಹುದಾಗಿತ್ತು. ಈಗ ಹಾಗಿಲ್ಲ ಎಐನಿಂದಾಗಿ ಕೆಲಸ ಕಳೆದುಕೊಳ್ಳುವ ಭಯದಿಂದ ಎಲ್ಲರೂ ಜಾಬ್ ಹಗ್ಗಿಂಗ್ ನಂತಹ ಟ್ರೆಂಡ್​​ಗೆ ಮನಸೋಲುತ್ತಿದ್ದಾರೆ.​
ಕೆಲಸದಲ್ಲಿ ಅತೃಪ್ತಿ, ಕಡಿಮೆ ಸಂಬಳ, ಸಿಬ್ಬಂದಿ, ಸಹೋದ್ಯೋಗಿಯರ ಜೊತೆ ಹೊಂದಾಣಿಕೆ ಯಾವುದೇ ವಿಚಾರದಲ್ಲಿಯೂ ತೃಪ್ತಿ ಇರದೇ ಹೋದರೂ ಸಹ ಬೇರೆಡೆ ಉದ್ಯೋಗ ದಕ್ಕುತ್ತದೆಯೋ ಇಲ್ಲವೋ. ಆರ್ಥಿಕ ನಷ್ಟದ ಬಗ್ಗೆ ಅಂದಾಜಿಸಿ ಇರುವ ಕೆಲಸವನ್ನೇ ಅಪ್ಪಿ, ಒಪ್ಪಿಕೊಂಡು ಕಾಲ ದೂಡುವ ಪ್ರಮೇಯ ಬಂದಿದೆ ಎಂದು ನಾಯಕತ್ವ ತರಬೇತುದಾರ ಮತ್ತು ಸಲಹೆಗಾರ ಕಿಮ್ ಮೆನಿಂಗರ್ ಮಾತನಾಡಿದ್ದಾರೆ ಎಂಬುದಾಗಿ ಖಾಸಗಿ ಮಾಧ್ಯಮಗಳು ವರದಿ ಮಾಡಿವೆ.

ಜಾಬ್​ ಹಗ್ಗಿಂಗ್​ ಎಂದರೇನು?

ಜಗತ್ತಿನಲ್ಲಿ ಟೆಕ್ನಾಲಜಿ ಬಹುಬೇಗನೇ ವೃದ್ಧಿಯಾಗುತ್ತಿದೆ. ಇಂದು ಒರಾಕಲ್​ನಂತಹ ಕಂಪನಿಯಲ್ಲಿ ಉದ್ಯೋಗಿಗಳ ಲೇ ಆಫ್​ ಆಗಿದೆ.ಅಮೆಜಾನ್​ನಂತಹ ದೈತ್ಯ ಕಂಪನಿಯಲ್ಲಿಯೂ ಇದೆ ಪ್ರವೃತ್ತಿ. ಇಂತಹ ಸುದ್ದಿ ಕಾಣುತ್ತಿರುವ ಜನರು, ತಾವೀಗ ಮಾಡುತ್ತಿರುವ ಕೆಲಸದಲ್ಲೇ ಠಿಕಾಣಿ ಹೂಡುತ್ತಿದ್ದಾರೆ. ಇಷ್ಟವಿಲ್ಲದಿದ್ದರೂ ಅಥವಾ ಪ್ರಗತಿ ಇಲ್ಲದಿದ್ದರೂ ಪ್ರಸ್ತುತ ಇರುವ ಕೆಲಸವನ್ನೇ ಬಿಡದೆ ಅಂಟಿಕೊಂಡಿರುವುದಕ್ಕೆ 'ಜಾಬ್ ಹಗ್ಗಿಂಗ್' ಎನ್ನಲಾಗುತ್ತದೆ.

ವೃತ್ತಿ ಜೀವನಕ್ಕೆ ಜಾಬ್​ ಹಗ್ಗಿಂಗ್ ಅಪಾಯಕಾರಿ ಹೇಗೆ?

ಒಂದೇ ಕೆಲಸಕ್ಕೆ ಅಂಟಿಕೊಂಡು ಬಿಟ್ಟರೇ ಕಲಿಯಬೇಕಾದ ಎಷ್ಟೋ ವಿಚಾರಗಳ ಬಗ್ಗೆ ಆಸಕ್ತಿಯೇ ಮೂಡುವುದಿಲ್ಲ. ಕೌಶಲ್ಯ ವೃದ್ಧಿಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಕೆಲಸ ಬದಲಿಸದೆ ಒಂದೇ ಕಡೆ ಠಿಕಾಣಿ ಹೂಡುವವರಿಗೆ ಸಂಬಳ ಏರಿಕೆಯಾಗೋದಿಲ್ಲ. ಕಡಿಮೆ ಸಂಬಳಕ್ಕೆ ಕೆಲಸ ಮಾಡಬೇಕು ಎಂದು ಸಂಶೋಧನೆಗಳ ಪ್ರಕಾರ ತಿಳಿದುಬಂದಿದೆ.
ಕೆಲಸ ಇಷ್ಟವಿಲ್ಲದೇ ಹೋದರೂ ಆದಾಯಕ್ಕಾಗಿ ಅಲ್ಲಿಯೇ ಇರುವುದು ಮಾನಸಿಕ ಒತ್ತಡ ಮತ್ತು ಕೆಲಸದ ಮೇಲೆ ಆಲಸ್ಯಕ್ಕೆ ಕಾರಣವಾಗಬಹುದು ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಉತ್ತಮ ಅವಕಾಶಗಳಿದ್ದರೂ, ರಿಸ್ಕ್ ತೆಗೆದುಕೊಳ್ಳಲು ಹೆದರಿ ಅವುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

ತಜ್ಞರು ಏನಂತಾರೆ?

ಇಂತಹ ವರ್ತಮಾನದಲ್ಲಿ ಉದ್ಯೋಗ ಭದ್ರತೆ ಮುಖ್ಯ. ಆದರೂ, ಜಾಬ್​ ಹಗ್ಗಿಂಗ್​ನಂತಹ ಪ್ರವೃತ್ತಿ ಭವಿಷ್ಯವನ್ನು ಕುಂಠಿತಗೊಳಿಸುತ್ತದೆ. ಸದಾ ಹೊಸ ಕೌಶಲ್ಯವನ್ನು ಕಲಿಯಿರಿ. ಸವಾಲು ನೀಡುವ ಕೆಲಸವನ್ನೇ ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net