

Techie: ವರದಕ್ಷಿಣೆ ಕಿರಿರುಳದಿಂದ ಬೆಸತ್ತ ಮಹಿಳಾ ಸ್ಪಾಫ್ಟವೇರ್ ಇಂಜಿನಿಯರೊಬ್ಬರು ವಿವಾಹವಾದ ಆರು ತಿಂಗಳಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್ನಲ್ಲಿ ಗುರುವಾರ ನಡೆದಿದೆ.
ಈಸ್ಟ್ಮರೇಡ್ಪಲ್ಲಿಯ ಅಡ್ಡಗುಟ್ಟದಲ್ಲಿ ವಾಸಿಸುವ ಅಂಜಯ್ಯ ಮತ್ತು ಸುಶೀಲಾ ದಂಪತಿಗಳ ಪುತ್ರಿ ಸುಷ್ಮಾ(27)ಮೃತೆ. ಹೈಟೆಕ್ ಸಿಟಿ ಬಳಿಯ ದುರ್ಗಂ ಕೊಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಪಾಲಕರ ದೂರಿನ ಮೇರೆಗೆ ಪೊಲೀಸರು ಆಕೆಯ ಪತಿ, ಚಿಕ್ಕಮ್ಮ, ಚಿಕ್ಕಪ್ಪ ಮತ್ತು ಸೋದರ ಮಾವನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇದೇ 2025ರ ಜ.31 ರಂದು, ಸುಷ್ಮಾ ನೆರೆಡ್ಮೆಟ್ನ ಅಮೃತ್ ಎಂಬುವವರನ್ನುವಿವಾಹವಾದರು. ಸುಷ್ಮಾ ಮತ್ತು ಅವರ ಪತಿ ಅಮೃತ್ ಇಬ್ಬರೂ ಸಾಫ್ಟ್ವೇರ್ ಎಂಜಿನಿಯರ್ಗಳು. ಮದುವೆಯ ಸಮಯದಲ್ಲಿ, 5 ಲಕ್ಷ ರೂ. ನಗದು, 6 ತೊಲ ಚಿನ್ನ ಮತ್ತು ರಾಯಲ್ ಎನ್ಫೀಲ್ಡ್ ಬೈಕ್ ಅನ್ನು ವರದಕ್ಷಿಣೆಯಾಗಿ ನೀಡಲಾಯಿತು. ಆದಾಗ್ಯೂ, ಮದುವೆಯಾದ ಕೆಲವೇ ದಿನಗಳಲ್ಲಿ, ಅವರ ಪತಿ, ಚಿಕ್ಕಮ್ಮ, ಚಿಕ್ಕಪ್ಪ ಮತ್ತು ಇತರ ಸಂಬಂಧಿಕರು ಹೆಚ್ಚುವರಿ ವರದಕ್ಷಿಣೆಗಾಗಿ ಸುಷ್ಮಾ ಅವರನ್ನು ಕಿರುಕುಳ ನೀಡಲು ಪ್ರಾರಂಭಿಸಿದರು.
ಅನಾರೋಗ್ಯದಿಂದ ಬಳಲುತ್ತಿದ್ದ ಸುಷ್ಮಾ ಅವರನ್ನು ಜೂ.13 ರಂದು ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಇದೇ ಜೂ.16ರಂದು ಡಿಸ್ಚಾರ್ಜ್ ಮಾಡಲಾಗಿದೆ. ಈ ವೇಳೆ ಕೂಡ ಆಕೆ ವರದಕ್ಷಿಣೆಗಾಗಿ ಪೀಡಿಸಲಾಗಿದೆ. ಇದರಿಂದ ಬೆಸತ್ತ ಸುಷ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.(ಏಜೆನ್ಸೀಸ್)