More

    ಹೊಸ ದಾಖಲೆ ಬರೆದ ವಿಜಯ್ ಅಭಿನಯದ ‘ಮಾಸ್ಟರ್​’ ಟೀಸರ್​ …

    ಚೆನ್ನೈ: ಈ ದೀಪಾವಳಿಗೆ ವಿಜಯ್​ ಅಭಿನಯದ ‘ಮಾಸ್ಟರ್​’ ಚಿತ್ರ ಬಿಡುಗಡೆಯಾಗುತ್ತದೆ ಎಂದು ಕಾದಿದ್ದ ವಿಜಯ್​ ಅಭಿಮಾನಿಗಳು ಕಾದಿದ್ದಷ್ಟೇ ಬಂತು. ಆದರೆ, ಚಿತ್ರ ಬಿಡುಗಡೆಯಾಗಲಿಲ್ಲ. ಬಹುಶಃ ಮುಂದಿನ ವರ್ಷದ ಸಂಕ್ರಾಂತಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.

    ಇದನ್ನೂ ಓದಿ: ಚಿತ್ರರಂಗದಲ್ಲಿ 40 ವರ್ಷ ಮುಗಿಸಿದ ಜಗ್ಗೇಶ್​

    ದೀಪಾವಳಿಗೆ ಚಿತ್ರ ಬಿಡುಗಡೆಯಾಗದಿದ್ದರೂ, ಚಿತ್ರದ ಟೀಸರ್​ ಬಿಡುಗಡೆಯಾಗಿ ವಿಜಯ್​ ಅಭಿಮಾನಿಗಳು ಸ್ವಲ್ಪ ಖುಷಿ ತಂದಿದೆ. 91 ಸೆಕೆಂಡ್​ನ ಈ ಟೀಸರ್​ನಲ್ಲಿ ವಿಜಯ್​ ಅವರನ್ನು ಪ್ರೊಫೆಸರ್​ ಜೆಡಿ ಎಂದು ಪರಿಚಯಿಸಲಾಗಿದೆ ಮತ್ತು ಈ ಸಿನಿಮಾದಲ್ಲಿ ವಿಜಯ್​, ವಿಜಯ್​ ಸೇತುಪತಿ ವಿರುದ್ಧ ಹೋರಾಡುವುದನ್ನು ನೋಡಬಹುದಾಗಿದೆ.

    ವಿಶೇಷವೆಂದರೆ, ಈ ಟೀಸರ್​ ಬಿಡುಗಡೆಯಾದ ಎರಡೇ ದಿನಗಳಲ್ಲಿ ಯೂಟ್ಯೂಬ್​ನ ಹಲವು ದಾಖಲೆಗಳನ್ನು ಮುರಿದಿದೆ. ಪ್ರಮುಖವಾಗಿ ಎರಡು ದಿನಗಳಲ್ಲಿ 23 ಮಿಲಿಯನ್​ಗೂ ಹೆಚ್ಚು ವೀಕ್ಷಣೆಗೆ ಈ ಟೀಸರ್​ ಒಳಗಾಗಿದೆ. ಇನ್ನು ವಿಜಯ್​ ಅಭಿನಯದ ‘ಬಿಜಿಲ್​’ ಚಿತ್ರದ ಟ್ರೇಟಲರ್​ ಬಿಡುಗಡೆಯಾದ ಒಂದು ಗಂಟೆ 18 ನಿಮಿಷಗಳಲ್ಲಿ 9.3 ಮಿಲಿಯನ್​ ವ್ಯೂಸ್​ ದಾಖಲಿಸಿತ್ತು. ಈ ದಾಖಲೆಯನ್ನು ‘ಮಾಸ್ಟರ್​’ ಮುರಿಯಬಹುದು ಎಂಬ ಅಂದಾಜಿತ್ತಾದರೂ ಅದು ಸಾಧ್ಯವಾಗಿಲ್ಲ. ಅತೀ ಕಡಿಮೆ ಸಮಯದಲ್ಲಿ ಒಂದು ಮಿಲಿಯನ್​ ಹಿಟ್ಸ್​ ಪಡೆದ ಹೆಗ್ಗಳಿಕೆ ಇನ್ನು ‘ಬಿಜಿಲ್​’ ಹೆಸರಿನಲ್ಲಿದೆ.

    ಇದನ್ನೂ ಓದಿ: ನಾನು ದೇವದೂತನಲ್ಲ; ನಟ ಸೋನು ಸೂದ್

    ‘ಮಾಸ್ಟರ್​’ ಚಿತ್ರದಲ್ಲಿ ವಿಜಯ್​ ಮತ್ತು ವಿಜಯ್​ ಸೇತುಪತಿ ಜತೆಗೆ ಮಾಳವಿಕಾ ಮೋಹನನ್​, ಅರ್ಜುನ್​ ದಾಸ್​, ಆಂಡ್ರಿಯಾ ಜೆರೆಮಿಯಾ, ಶಂತನು ಭಾಗ್ಯರಾಜ್​, ನಾಸರ್​ ಮುಂತಾದವರು ನಟಿಸಿದ್ದು, ಲೋಕೇಶ್​ ಕನಕರಾಜ್​ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಅನಿರುದ್ಧ್​ ಸಂಗೀತ ಸಂಯೋಜಿಸಿದ್ದಾರೆ.

    ಸಿನಿಮಾ ತೆರೆ ಕಾಣಲೇಬೇಕು … ಚಿತ್ರಮಂದಿರಗಳು ವಿಜೃಂಭಿಸಲೇ ಬೇಕು …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts