More

    ಸಿನಿಮಾ ತೆರೆ ಕಾಣಲೇಬೇಕು … ಚಿತ್ರಮಂದಿರಗಳು ವಿಜೃಂಭಿಸಲೇ ಬೇಕು …

    ಬೆಂಗಳೂರು: ಸಿನಿಮಾ ಪ್ರದರ್ಶನಕ್ಕೆ ಕೇಂದ್ರ ಸರ್ಕಾರವು ಅಕ್ಟೋಬರ್​ 15ರಿಂದಲೇ ಅನುಮತಿ ನೀಡಿದೆ. ಕಳೆದ ಒಂದು ತಿಂಗಳಿನಿಂದ ಚಿತ್ರಪ್ರದರ್ಶನ ನಡೆಯುತ್ತಿದ್ದರೂ, ಪ್ರೇಕ್ಷಕರು ಮಾತ್ರ ದೊಡ್ಡ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಹೋಗುತ್ತಿಲ್ಲ.

    ಈ ನಿಟ್ಟಿನಲ್ಲಿ ಕೆಆರ್​ಜಿ ಸ್ಟುಡಿಯೋಸ್​ನ ಕಾರ್ತಿಕ್​ ಗೌಡ ಮತ್ತು ಯೋಗಿ ಜಿ ರಾಜ್​ ಹೊಸ ಅಭಿಯಾನವನ್ನೇ ಪ್ರಾರಂಭಿಸಿದ್ದಾರೆ. ಕನ್ನಡದ ಪ್ರಮುಖ ಕಲಾವಿದರಾದ ಶಿವರಾಜಕುಮಾರ್​, ಪುನೀತ್​ ರಾಜಕುಮಾರ್​, ಶ್ರೀಮುರಳಿ, ಗಣೇಶ್​, ‘ದುನಿಯಾ’ ವಿಜಯ್​, ಧನಂಜಯ್​ ಮುಂತಾದವರನ್ನು ಸೇರಿಸಿಕೊಂಡು ಜನರನ್ನು ಮತ್ತೆ ಚಿತ್ರಮಂದಿರದತ್ತ ಕರೆದುಕೊಂಡು ಬರುವ ಒಂದು ಭಾವನಾತ್ಮಕ ವಿಡಿಯೋವೊಂದನ್ನು ಮಾಡಿದ್ದಾರೆ.

    ಇದನ್ನೂ ಓದಿ: ನಾನು ದೇವದೂತನಲ್ಲ; ನಟ ಸೋನು ಸೂದ್

    ‘ನೂರು ವರುಷಗಳ ಇತಿಹಾಸವಿರುವ ಸಿನಿಮಾ ಇಂದಲ್ಲ ನಾಳೆ ತೆರೆ ಕಾಣಲೇಬೇಕು … ಚಿತ್ರಮಂದರಿಗಳು ವಿಜೃಂಬಿಸಲೇಬೇಕು …’ ಎಂದು ಪ್ರಾರಂಭವಾಗುವ ಈ ವಿಡಿಯೋದಲ್ಲಿ ಕಳೆದ ಆರೇಳು ತಿಂಗಳುಗಳಿಂದ ಹೇಗೆ ಚಿತ್ರಮಂದಿರಗಳು ಧೂಳುಹಿಡಿದು ಕೂತಿರುವಾಗ, ಲಾಕ್​ಡೌನ್​ ಮುಗಿದು ಚಿತ್ರಮಂದಿರ ಪುನಃ ತೆರೆಯಲಾಗುತ್ತದೆ. ಲಾಕ್​ಡೌನ್​ಗೂ ಮೊದಲು ಇದ್ದಂತೆ ಪರಿಸ್ಥಿತಿ ಮರುಕಳಿಸುವುದಕ್ಕೆ ಸಾಧ್ಯವಾ? ಚಿತ್ರಮಂದಿರ ತುಂಬಿದೆ ಎಂಬ ಬೋರ್ಡು, ಸಂಭ್ರಮ, ಪಟಾಕಿ ಇವೆಲ್ಲಾ ಪುನಃ ನೋಡುವುದಕ್ಕೆ ಸಾಧ್ಯವಾ? ಎಂದು ಪ್ರಶ್ನಿಸಿಕೊಳ್ಳುವ ಹೊತ್ತಿಗೆ, ಮೊದಲಿನಿಂತೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವ ದೃಶ್ಯಗಳನ್ನು ತೋರಿಸಲಾಗಿದೆ.

    ಇದನ್ನೂ ಓದಿ: ಓಲ್ಡ್ ಮಾಂಕ್ ಸೆಟ್​ನಲ್ಲಿ ದೀಪಾವಳಿ

    ನಂತರ, ನಟರಾದ ಶಿವರಾಜಕುಮಾರ್​, ಪುನೀತ್​ ರಾಜಕುಮಾರ್​, ಶ್ರೀಮುರಳಿ, ಗಣೇಶ್, ಧನಂಜಯ್​​ ಮತ್ತು ‘ದುನಿಯಾ’ ವಿಜಯ್​ ಕಾಣಿಸಿಕೊಂಡು ಚಿತ್ರಮಂದಿರಗಳ ಮಹತ್ವವನ್ನು ಅರ್ಥ ಮಾಡಿಸುತ್ತಾರೆ. ಎಲ್ಲರೂ ಸೇರಿ ಸಿನಿಮಾನ ಸಂಭ್ರಮಿಸೋಣ ಎಂದು ಮುಗಿಯುವ ಈ ವಿಡಿಯೋ, ಯೂಟ್ಯೂಬ್​ನ ಕೆಆರ್​ಜಿ ಕನೆಕ್ಟ್ಸ್​ ಚಾನಲ್​ನಲ್ಲಿ ಬಿಡುಗಡೆಯಾಗಿದ್ದು, ನೋಡುಗರನ್ನು ಭಾವನಾತ್ಮಕವಾಗಿ ಸೆಳೆಯುತ್ತಿದೆ.

    ಇದನ್ನು ನೋಡಿರುವ ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್​ ಸಹ ತಮಗೆ ಅಳು ತಡೆಯಲಾಗುತ್ತಿಲ್ಲ ಎನ್ನುವುದರ ಜತೆಗೆ, ಬನ್ನಿ ಸಿನಿಮಾ ಸಂಭ್ರಮಿಸೋಣ ಎಂದು ಹೇಳಿದ್ದಾರೆ.

    ಚಿತ್ರರಂಗದಲ್ಲಿ 40 ವರ್ಷ ಮುಗಿಸಿದ ಜಗ್ಗೇಶ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts